ಮುಧೋಳ

ಪ್ರಮೋದ್ ಮುತಾಲಿಕ್‌ರವರ ಜನ್ಮದಿನ ಆಚರಣೆ

ಪ್ರಮೋದ್ ಮುತಾಲಿಕ್‌ರವರ ಜನ್ಮದಿನ ಆಚರಣೆ


ಮುಧೋಳ 25: ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ್ ರವರ 67ನೇ ಜನ್ಮದಿನವನ್ನು ಅತ್ಯಂತ ಸಡಗರದಿಂದ  ಅರ್ಥಪೂರ್ಣವಾಗಿ ಆಚರಿಸಲಾಯಿತು. ಮುಧೋಳ ತಾಲೂಕ ಶ್ರೀರಾಮಸೇನಾ ಅಧ್ಯಕ್ಷ ಅರ್ಜುನ್ ನಾಗರಾಳ್, ರನ್ನಬೆಳಗಲಿಯ ಶ್ರೀರಾಮಸೇನೆ ಅಧ್ಯಕ್ಷ ಈಶ್ವರ್ ಕ್ವಾನ್ಯಾಗೋಳ ಮತ್ತು ಶ್ರೀರಾಮಸೇನೆ ಕಾರ್ಯಕರ್ತರಾದ್ ಸಂತೋಷ ಹೂಗಾರ್, ವರುಣ್ ಹಿರೇಮಠ್, ಸತೀಶ್ ಜಗದಾಳ ಸಂಜೀವ ಘೋರೆ​‍್ಡ, ಕಾಳು ಗುರವ್ ಮುಂತಾದವರು ಸೇರಿ ಗೋ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಹಸುಗಳಿಗೆ ಮೇವು ವಿತರಿಸಿ ಗೋಶಾಲೆಯನ್ನು ಸ್ವಚ್ಛಗೊಳಿಸಿದರು.ಮತ್ತು ಮುಧೋಳ ತಾಲೂಕಾ ಸರ್ಕಾರಿ ಆಸ್ಪತ್ರೆಗೆ  ಭೇಟಿ ನೀಡಿ ಅಲ್ಲಿನ ಎಲ್ಲಾ ರೋಗಿಗಳಿಗೆ ಹಣ್ಣು ಹಂಪಲ ಮತ್ತು ಹಾಲು ನೀಡಿ  ಅವರ ಹುಟ್ಟುಹಬ್ಬವನ್ನು ಆಚರಿಸಿದರು. ಈ ಸಂದರ್ಭದಲ್ಲಿ ರನ್ನಬೆಳಗಲಿ ಮುಧೋಳ್ ಮತ್ತು ಮುಗಳಖೋಡ್ ಶ್ರೀರಾಮಸೇನೆ ಘಟಕದ ಕಾರ್ಯಕರ್ತರು ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. 


ಸುದ್ದಿ ಓದಿ