ಬೈಕ್ ಅಪಘಾತ ಯುವಕ ಸಾವು
ಜಮಖಂಡಿ 29: ನಗರದ ಹೊರವಲಯದ ಮುಧೋಳ ರಸ್ತೆಯ ಕಟ್ಟೆ ಕೆರೆ ಬಳಿ ಯುವಕನೋರ್ವನು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.ಇಲ್ಲಿನ ಚೌವಡಿ ಹತ್ತಿರ ಮೋಮಿನ ಗಲ್ಲಿಯ ನಿವಾಸಿ ಚೇತನ ಮಲ್ಲೇಶ ಆಳಗಿ (22) ಮುಧೋಳ ರಸ್ತೆಯಿಂದ ಜಮಖಂಡಿ ಕಡೆಗೆ ಬರುವ ಸಮಯದಲ್ಲಿ ರಸ್ತೆಯ ಪಕ್ಕದಲ್ಲಿ ಇರುವ ಬಂಡೆ ಕಲ್ಲಿಗೆ ಹೊಡೆದ ಪರಿಣಾಮ ತಲೆ ಭಾಗಕ್ಕೆ ಗಂಭೀರವಾಗಿ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ ದುದೈರ್ವಿ. ತಾಲೂಕಾ ವರದಿಗಾರ ಮಲ್ಲೇಶ ಆಳಗಿ ಅವರ ಮೊದಲನೇಯ ಪುತ್ರನಾಗಿದು. ಪ್ರಥಮ ವರ್ಷದ ಎಲ್ಎಲ್ಬಿ ಶಿಕ್ಷಣ ಕಲಿಯುತ್ತಿದ್ದ ವಿದ್ಯಾರ್ಥಿಯಾದ ಚೇತನ ಮಲ್ಲೇಶ ಆಳಗಿ ಸಾವನ್ನಪ್ಪಿದರೆ.ಸ್ಥಳಕ್ಕೆ ಶಹರ ಠಾಣಿಯ ಪೋಲಿಸರು ಭೇಟಿ ನೀಡಿ ತನಿಖೆಯನ್ನು ಮುಂದುವರಿಸಿದ್ದು. ಸರಕಾರಿ ಆಸ್ಪತ್ರೆಯ ಮುಂದೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟುವಂತೆ ಆಗಿತ್ತು.