ಭಕ್ತ ಕನಕದಾಸರ ಒನಕೆ ಓಬ್ಬವ್ವನವರ ಜಯಂತ್ಯೋತ್ಸವ
ಜಮಖಂಡಿ 12:ಭಕ್ತ ಕನಕದಾಸರ 535 ನೇ ಜಯಂತ್ಯೋತ್ಸವ ಮತ್ತು ಒನಕೆ ಓಬ್ಬವ್ವನವರ ಜಯಂತಿಯನ್ನು ವಿವಿಧ ಸಂಘ,ಸಂಸ್ಥೆಗಳು ಹಾಗೂ ತಾಲೂಕಾಡಳಿತ ಸಹಯೋಗದಲ್ಲಿ ಆಚರಣೆ ಮಾಡಲಾಯಿತು.
ನಗರದ ಹಳೆ ತಹಶೀಲ್ದಾರ ಕಚೇರಿಯಿಂದ ಭವ್ಯವಾದ ಮೆರವಣಿಗೆ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ. ಮಿನಿ ವಿಧಾನಸೌಧವನ್ನು ತಲುಪಿದರು. ವಿವಿಧ ಶಾಲಾ ಮಕ್ಕಳು ಭಕ್ತ ಕನಕದಾಸರು, ಓಬವ್ವ, ಸಂಗೋಳಿರಾಯಣ ವೇಷಭೂಷಣಗಳ ಉಡುಪುಗಳನ್ನು ತೊಟ್ಟು ನೋಡುಗರ ಗಮನ ಸೆಳೆದರು.
ಮಿನಿ ವಿಧಾನ ಸೌಧದ ಸಭಾ ಭವನದಲ್ಲಿ ಭಕ್ತ ಕನಕದಾಸರು, ಓಬವ್ವ, ಭಾವಚಿತ್ರಕ್ಕೆ ತಹಶೀಲ್ದಾರ ಸದಾಶಿವ ಮಕ್ಕೋಜಿ ಹಾಗೂ ಗಣ್ಯಮಾನ್ಯರು ಪೂಜೆಯನ್ನು ನೆರವೆಸಿದರು.
ಇದೇ ಸಂದರ್ಭದಲ್ಲಿ ಮಾಜಿ ಭೂಸೇನಾ ನಿಗಮದ ಅಧ್ಯಕ್ಷ ಶ್ರೀಶೈಲ ದಳವಾಯಿ, ನಾಡೋಜ ಜಗದೀಶ ಗುಡಗುಂಟಿ, ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ನಗರ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ನಾಗಪ್ಪ ಸನದಿ, ಎ,ಆರ್,ಶಿಂದೆ, ಕುರುಬ ಸಮಾಜದ ಅಧ್ಯಕ್ಷ ಮಲ್ಲು ಮೆಳ್ಳಿ, ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ, ಬಸವರಾಜ ನ್ಯಾಮಗೌಡ, ಬಸವರಾಜ ಕಲೂತಿ, ಒಇಓ ಎಮ್,ಸಿ, ನ್ಯಾಮಗೌಡ ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅಸ್ಟಗಿ, ಶಶಿಕಾಂತ ದೊಡಮನಿ, ಡಿ,ಎಸ್,ಎಸ್, ಜಿಲ್ಲಾ ಸಂಚಾಲಕ ಪರುಶರಾಮ ಕಾಂಬಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು, ಮಕ್ಕಳು ಇದ್ದರು,