ಭಗೀರಥ ಜಯಂತಿ ಆಚರಣೆ

ಭಗೀರಥ ಜಯಂತಿ ಆಚರಣೆ Bhagirath Jayanti celebration

ಲೋಕದರ್ಶನ ವರದಿ 

ಸವದತ್ತಿ   23: ನಗರದ ಪ್ರಮುಖ ವೃತ್ತವಾದ ಭಗೀರಥ ಸರ್ಕಲ್‌ನಲ್ಲಿ ತಾಲೂಕು ಆಡಳಿತದ ವತಿಯಿಂದ ಶ್ರೀ ಭಗೀರಥ ಜಯಂತಿಯನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಕಾಂಗ್ರೆಸ್ ಮುಖಂಡ ಅಶ್ವಥ್ ವೈದ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಮಾಜದ ಮುಖಂಡರು ಪಾಲ್ಗೊಂಡು, ಶ್ರೀ ಭಗೀರಥ ಮಹರ್ಷಿಗಳ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಮರ​‍್ಿಸಿದರು. ಬಳಿಕ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ, ಮಾತನಾಡಿದ ಅವರು ಭಗೀರಥ ಮಹರ್ಷಿಗಳ ಸಾಧನೆ ಅನನ್ಯವಾದುದು. ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ತಂದ ಅವರ ಪರಿಶ್ರಮ ಮತ್ತು ಛಲ ನಮಗೆಲ್ಲರಿಗೂ ಪ್ರೇರಣೆ. ಅವರ ತತ್ವ ಸಿದ್ಧಾಂತ ಹಾಗೂ ಆದರ್ಶಗಳು ಸಮಾಜಕ್ಕೆ ದಾರೀದೀಪವಾಗಿದ್ದು, ಪ್ರತಿಯೊಬ್ಬರೂ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಅಶ್ವಥ್ ವೈದ್ಯ ಮಾತನಾಡಿ, ಭಗೀರಥ ಜಯಂತಿಯು ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ; ಇದು ಇಡೀ ಮಾನವಕುಲಕ್ಕೆ ಹಿತೈಷಿಯಾದ ದಿನ. ಸಮಾಜದ ಬಾಂಧವರು ಒಗ್ಗಟ್ಟಿನಿಂದ ಸಾಗಿದಾಗ ಮಾತ್ರ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದರು.ಈ ಸಂದರ್ಭದಲ್ಲಿ ತಾಪಂ.ಇಒ ಆನಂದ ಬಡಕುಂದ್ರಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ, ಪಿಎಸ್‌ಐ ಲಕ್ಷ್ಮಣ್ ಗೌಡಿ, ಆರ್‌.ಆರ್‌. ಕುಲಕರ್ಣಿ, ಶಿವಪ್ರಕಾಶ್ ಪಾಟೀಲ, ಅಲ್ಲಮಪ್ರಭು ಪ್ರಭುನವರ, ಮಂಜುನಾಥ ಪಾಚಂಗಿ, ಶ್ರೇಷ ಮಾಮನಿ, ಯಲ್ಲಪ್ಪ ಬಜೇರಿ, ಬಸವರಾಜ ಆಯಟ್ಟಿ ಸೇರಿದಂತೆ ಉಪ್ಪಾರ ಸಮಾಜದ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು, ಉಪಸ್ಥಿತರಿದ್ದರು.