ಕ್ಷೇತ್ರದ ಅಭಿವೃದ್ಧಿಗೆ ಬಸವರಾಜ ರಾಯರಡ್ಡಿ ಕೊಡುಗೆ ಅಪಾರ : ಗೊಲ್ಲರ
ಕುಕನೂರು 17: ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಮಾಜಿ ಸಚಿವ ಬಸವರಾಜ ರಾಯರಡ್ಡಿಯವರ ಕೊಡುಗೆ ಅಪಾರವಾಗಿದೆ ಎಂದು ಯಲಬುರ್ಗಾ ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಸಾವಿತ್ರಿ ಗೊಲ್ಲರ ಹೇಳಿದರು.
ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಗುರುವಾರ ನಡೆದ ಮಹಿಳಾ ಕಾಂಗ್ರೇಸ್ ಮುಖಂಡರ ಸಭೆ ಹಾಗೂ ಮಹಿಳಾ ಕಾಂಗ್ರೇಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಿಕ್ಷಣ, ರೈಲ್ವೆ, ನೀರಾವರಿ ಕ್ಷೇತ್ರಕ್ಕೆ ಮಾಜಿ ಸಚಿವ ಬಸವರಾಜ ರಾಯರಡ್ಡಿಯವರು ತಮ್ಮ ಆಡಳಿತಾವಧಿಯಲ್ಲಿ ಹೆಚ್ಚು ಒತ್ತು ಕೊಟ್ಟಿದ್ದಾರೆ. ವಿಶೇಷವಾಗಿ ಯರೇ ಭಾಗದ ಗ್ರಾಮಗಳಿಗೂ ಆದ್ಯತೆ ಕೊಟ್ಟು ಪ್ರತಿ ಗ್ರಾಮಗಳಲ್ಲಿ ಸಿಸಿ ರಸ್ತೆ, ಚರಂಡಿ, ಸಮರ್ಕ ಕುಡಿಯುವ ನೀರು ಪೂರೈಕೆಗೆ ವಿಶೇಷ ಅನುಧಾನ ನೀಡಿದ್ದಾರೆ. ಗದಗ-ವಾಡಿ ರೈಲ್ವೆ ಯೋಜನೆಯ ಯಶಸ್ಸು ವಿಶೇಷವಾಗಿ ರಾಯರಡ್ಡಿಯವರಿಗೆ ಸಲ್ಲುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಎಲ್ಲಾ ಸಮುದಾಯಗಳಿಗೂ ಆದ್ಯತೆ ನೀಡಿದ್ದಾರೆ. ಮಹಿಳೆಯರಿಗೂ ಜಿಪಂ, ತಾಪಂ, ಪಪಂ,ಎಪಿಎಂಸಿ,ಗ್ರಾಪಂ ಸೇರಿದಂತೆ ಪ್ರತಿಯೊಂದು ಚುನಾವಣೆಗಳಲ್ಲಿ ಟಿಕೆಟ್ ನೀಡಿ ಗೆಲ್ಲಿಸಿ ರಾಜಕೀಯವಾಗಿ ಬೆಳಸಿದ್ದಾರೆ. ಮಹಿಳೆಯರಿಗೆ ವಿಶೇಷ ಸ್ಥಾನಮಾನ ಕಲ್ಪಿಸಿಕೊಟ್ಟೊದ್ದಾರೆ. ಮಹಿಳಾ ಮತದಾರರು ಮುಂದಿನ ಚುನಾವಣೆಯಲ್ಲಿ ರಾಯರಡ್ಡಿಯವರನ್ನು ಶಾಸಕರನ್ನಾಗಿ ಮಾಡಬೇಕು ಎಂದರು.
ಪಪಂ ಸದಸ್ಯೆ ಡಾ.ನಂದಿತಾ ದಾನರಡ್ಡಿ ಮಾತನಾಡಿ ಕಾಂಗ್ರೇಸ್ ಪಕ್ಷದಿಂದ ಮಾತ್ರ ದೇಶದ ಅಭಿವೃದ್ದಿ ಸಾಧ್ಯವಾಗಿದೆ. ಮಾ.8ರಂದು ಯಲಬುರ್ಗಾ ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷದ ವತಿಯಿಂದ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಿದ್ದು ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ರಾಜ್ಯದಲ್ಲಿ ಬಿಜೆಪಿ ಸರಕಾರ ಉತ್ತಮ ಆಡಳತ ನೀಡುವಲ್ಲಿ ವಿಫಲವಾಗಿದ್ದು ಜನವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯ,ದೇಶದ ಅಭಿವೃದ್ದಿಯಾಗಬೇಕಾದರೇ ಕಾಂಗ್ರೇಸ್ ಅತ್ಯಅವಶ್ಯಕ ಎಂದು ಕರೆ ನೀಡಿದರು.
ತಾಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸುಭಾಷ ಮಾದಿನೂರು ಮಾತನಾಡಿ ಮಾಜಿ ಸಚಿವ ಬಸವರಾಜ ರಾಯರಡ್ಡಿಯವರು ಹಿಂದುಳಿದ ಯಲಬುರ್ಗಾ ವಿಧಾನಸಭಾ ಕ್ಷೇತ್ರವನ್ನು ಸಮಗ್ರ ಅಭಿವೃದ್ದಿ ಪಡಿಸಿದ ಕೀರ್ತಿ ರಾಯರಡ್ಡಿಯವರಿಗೆ ಸಲ್ಲುತ್ತದೆ. ಕಾಂಗ್ರೇಸ್ ಪಕ್ಷ ತಾಲೂಕಿನಾದ್ಯಂತ ಸಂಘಟನೆ ಬಲಿಷ್ಠಗೊಳ್ಳುತ್ತಿದೆ. ಮುಂಬರುವ 2023ರ ಚುನಾವಣೆಯಲ್ಲಿ ಬಸವರಾಜ ರಾಯರಡ್ಡಿಯವರು ಬಹುಮತಗಳ ಅಂತರದಿಂದ ಗೆಲವು ಸಾಧಿಸಲಿದ್ದಾರೆ. ಬಿಜೆಪಿ ಪಕ್ಷ ಜನತೆಗೆ ಬೇಸರ ತರಿಸಿದ್ದು ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದರು.
ಪಪಂ ಮಾಜಿ ಅಧ್ಯಕ್ಷೆ ಜಯಶ್ರೀ ಅರಕೇರಿ, ಮಾಜಿ ಸದಸ್ಯೆ ಶರಣಮ್ಮ ಪೂಜಾರ ಮಾತನಾಡಿದರು. ಕುಕನೂರು ಮಹಿಳಾ ಅಧುಕ್ಷೆ ಪರೀದಾಬೇಗಂ ತಂಬಾಕದ, ಮಹಾಲಕ್ಷ್ಮೀ, ಚಕ್ಕಡಿ, ಮಹಾದೇವಿ ಮಾಳೇಕೊಪ್ಪ, ಮುಖಂಡರಾದ ಡಾ.ಶಿವನಗೌಡ ದಾನರಡ್ಡಿ, ಸಂತೋಷ ಬೆಣಕಲ್, ಮಹೇಶ ಗಾವರಾಳ, ಅರವಿಂದ ಮುಂದಲಮನಿ, ಗುರ್ಪ ಪಂತರ, ಸಂತೋಷ ಮೆಣಸಿನಕಾಯಿ, ಪ್ರಕಾಶ ಕಮತರ, ಬಸವರಾಜ ಭಜೆಂತ್ರಿ, ಕೊಟೇಶ ಮೆಣಸಿನಕಾಯಿ, ಮಂಜುನಾಥ, ರವಿಕುಮಾರ, ಯರೇಹಂಚಿನಾಳ ಗ್ರಾಪಂ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಮಹಿಳೆಯರು ಸೇರಿದಂತೆ, ಮಹಿಳಾ ಗ್ರಾಪಂ ಸದಸ್ಯರು ಇತರರು ಇದ್ದರು.