ಕಬ್ಬು ಬೆಳೆಗಾರರು ಹಾಗೂ ರೈತ ಸಂಘದಿಂದ ಬಂದ್ ಕರೆ
ಕಬ್ಬು ಬೆಳೆಗಾರರ, ಕಾರ್ಖಾನೆ ಮಾಲೀಕರ ಹಾಗೂ ಸರ್ಕಾರದ ಸಭೆ ವಿಫಲ

ಜಮಖಂಡಿ 17: ಬಾಗಲಕೋಟೆಯಲ್ಲಿ ನಡೆದ ಕಬ್ಬು ಬೆಳೆಗಾರರ, ಸಕ್ಕರೆ ಕಾರ್ಖಾನೆ ಮಾಲೀಕರ ಹಾಗೂ ಸರ್ಕಾರದ ನಡುವೆ ನಡೆದ ಸಭೆ ವಿಫಲವಾದ ಕಾರಣ ನ.16ರಂದು ಕಬ್ಬು ಬೆಳೆಗಾರರು ಹಾಗೂ ರೈತ ಸಂಘದಿಂದ ಬಂದ್ ಕರೆಯನ್ನು ನೀಡಲಾದ ಹಿನ್ನಲೆಯಲ್ಲಿ ನಗರದ ಎ,ಜಿ,ದೇಸಾಯಿ ವೃತ್ತದಲ್ಲಿ ರೈತರು ರಸ್ತೆ ತಡೆಯನ್ನು ನಡೆಸಿ, ಟೈಯರ್ಗೆ ಬೆಂಕಿ ಹಚ್ಚುವ ಮೂಲಕ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ರಾಜ್ಯದ ಕಬ್ಬು ಬೆಳೆಗಾರರಿಗೆ ವೈಜ್ಞಾನಿಕ ಮತ್ತು ನ್ಯಾಯಯುತ ಬೆಲೆಯನ್ನು ರಾಜ್ಯ ಸಕರ್ಾರ ನೀಡಬೇಕೆಂದು ಒತ್ತಾಯಿಸಿ ರಸ್ತೆ ತಡೆಯನ್ನು ನಡೆಸಿದ ರೈತರು. ರಸ್ತೆಯಲ್ಲಿ ಕುಳಿತು ಅಲ್ಪೋಪಹಾರವನ್ನು ಮಾಡುವ ಮೂಲಕ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದರು. ನಂತರ ಟೈಬಂದ್ ಕರೆಯಿಂದ ಸಂಪೂರ್ಣವಾಗಿ ಬಸ್ ಸಂಚಾರ ಸ್ಥಗಿತಗೊಂಡಿತು. ಬೇರೆ ಕಡೆಗೆ ಪ್ರಯಾಣಿಸಬೇಕಾದ ಪ್ರಯಾಣಿಕರು ಬಸ್ಗಾಗಿ ಪರದಾಡುವ ಪರಿಸ್ಥಿತಿ ಉಂಟಾಯಿತು. ಶಾಲಾ, ಕಾಲೇಜುಗಳು ಹಾಗೂ ವ್ಯಾಪಾರ ವಹಿವಾಟಗಳು ದಿನದ ಎಂದಿನಂತೆ ಸಾಮಾನ್ಯವಾಗಿತ್ತು.