ಮುಧೋಳ

ಪರೀಕ್ಷಾ ಕೇಂದ್ರಗಳಿಗೆ ಬಿಇಓ ಪತ್ತಾರ್ ಭೇಟಿ

ಪರೀಕ್ಷಾ ಕೇಂದ್ರಗಳಿಗೆ ಬಿಇಓ ಪತ್ತಾರ್ ಭೇಟಿ

ಮುಧೋಳ 17: ಜು. 19 ಮತ್ತು 22 ರಂದು ನಡೆಯುವ 2020 - 21ನೇ ಸಾಲಿನ  ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಪರೀಕ್ಷಾ ಕೇಂದ್ರಗಳಾದ  ಸರಕಾರಿ ಪ್ರೌಢಶಾಲೆ ಕೆಸರಗೋಪ್ಪ,  ಜೇಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಹಾಲಿಂಗಪುರ  ಮತ್ತು ರನ್ನಬೆಳಗಲಿಯ ಮುರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ಮುಧೋಳದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ ಎಂ ಪತ್ತಾರ್ ಹಾಗೂ ಐ ಡಿ ಶೇಗುಣಶಿ ಭೇಟಿ ನೀಡಿ ಮೂಲಭೂತ ಸೌಕರ್ಯ ಮತ್ತು ಪರೀಕ್ಷಾ ಸಿದ್ಧತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಎಸ್‌ಎಸ್‌ಎಲ್ಸಿ ಪರೀಕ್ಷೆ ಗಳು ವಿದ್ಯಾರ್ಥಿಗಳ ಗುರಿ ಸಾಧಿಸಲು ಜೀವನದ ಅತಿ ಮಹತ್ವ  ಘಟ್ಟವಾಗಿದ್ದು ಆದ್ದರಿಂದ ಅವರ ಆರೋಗ್ಯ ಸೇರಿದಂತೆ ವೈಯಕ್ತಿಕ ಕಾಳಜಿ ವಹಿಸಿ ಕೇಂದ್ರಗಳ ಎಲ್ಲ ವಿದ್ಯಾರ್ಥಿಗಳು ಯಾವುದೇ ಆತಂಕ ಒತ್ತಡವಿಲ್ಲದೆ ನಿರಾಂತಕವಾಗಿ ಪರೀಕ್ಷೆಗಳನ್ನು ಬರೆಯುವಂತಹ  ವಾತಾವರಣ ನಿರ್ಮಾಣ ಮಾಡಬೇಕೆಂದು ಸರಕಾರಿ ಪ್ರೌಢಶಾಲೆ ಕೆಸರಗೋಪ್ಪ ದ ಮುಖ್ಯ ಅಧೀಕ್ಷಕರಾದ ಸಿ ವಿ ಚೌಧರಿ ,ಕಸ್ಟೋಡಿಯನ್ ಎಂ ಎಂ ಚಿಮ್ಮಡ ಹಾಗೂ ಜೆಸಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಹಾಲಿಂಗಪುರದ ಮುಖ್ಯ ಅಧೀಕ್ಷಕರಾದ ಎಂ ಎಸ್ ಗಾಣಿಗೇರ, ಕೌಜಲಗಿ, ಬೆನಕಟ್ಟಿ.   ಶಿಕ್ಷಣ ಸಂಯೋಜಕ ಎಸ್ ಎಸ್ ಹಾದಿಮನಿ  ಮತ್ತು ಬ್ಯಾಳಿ ಇವರಿಗೆ ಹೇಳಿದರು.  ವಿವಿಧ ಶಾಲೆಯ ಕೊಠಡಿ ಮೇಲ್ವಿಚಾರಕರು ಸ್ಕೌಟ್ ಗೈಡ್ಸ್‌ ಸಿಬ್ಬಂದಿಗಳು ದೈಹಿಕ ಶಿಕ್ಷಕರು ಮತ್ತು ಮೊಬೈಲ್ ಸ್ವಾಧೀನ ಅಧಿಕಾರಿಗಳು ಇದ್ದರು. ಮಹಾಲಿಂಗಪುರ್ ವಲಯದ ಶಿಕ್ಷಣ ಸಂಯೋಜಕರಾದ ಹಾದಿಮನಿರವರು ಸಾಮಾಜಿಕ ಅಂತರ ಕಾಪಾಡಿಕೊಂಡು ಸ್ಯಾನಿಟೈಸರ್  ಮಾಡಿ ಆರೋಗ್ಯಯುತ ರೀತಿಯಲ್ಲಿ ಪರೀಕ್ಷೆ ನಡೆಸುತ್ತೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಭರವಸೆ ನೀಡಿದರು 


ಸುದ್ದಿ ಓದಿ