ವಿದ್ಯಾರ್ಥಿಗಳಿಗೆ ಗ್ರಾಮೀಣ ಜನರ ಬದುಕಿನ ಬಗ್ಗೆ ಜಾಗೃತಿ ಶಿಬಿರ
ಲೋಕದರ್ಶನ ವರದಿ
ಮುಂಡರಗಿ 14: ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಅತ್ಯವಶ್ಯವಾದ ಗ್ರಾಮೀಣ ಸೊಗಡು, ಜನರ ಬದುಕು, ಜೀವನ ಶೈಲಿ, ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಜಾಗೃತಿ ಮೂಡಿಸುವದಕ್ಕಾಗಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಸಂತೋಷ ಕುಮಾರ ಹೇಳಿದರು.
ತಾಲೂಕಿನ ಮೇವುಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರದೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯವು ಇತ್ತಿಚೆಗೆ ಹಮ್ಮಿಕೊಂಡ "ರೂರಲ್ ಇಮರ್ಶನ್" ಶಿಬಿರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿರುವಂತಹ ಪಂಚಾಯತ್ ರಾಜ್ ಸಭಲೀಕರಣಕ್ಕೆ ಹಾಗೂ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಪೂರ್ವಕವಾಗಿ ರಾಜ್ಯ ಸರ್ಕಾರವು ವಿಧ್ಯಾರ್ಥಿಗಳಿಗೆ ಕಲಿಸುವದಕ್ಕಾಗಿ ಗದಗ ಜಿಲ್ಲೆಯಲ್ಲಿ ವಿಶ್ವ ವಿಧ್ಯಾಲಯವನ್ನು ಪ್ರಾರಂಭಿಸಿದ್ದು, ಆದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿರುವಂತಹ ವಿದ್ಯಾರ್ಥಿಗಳಿಗೆ ಗ್ರಾಮೀಣ ಭಾಗದ ಸ್ಥೀತಿ,ಗತಿಗಳ ಬಗ್ಗೆ , ಅಧ್ಯಾಯನ ಮಾಡುವದಕ್ಕಾಗಿ ಒಂದು ತಿಂಗಳ ಕಾಲ ಗ್ರಾಮದಲ್ಲಿಯೇ ವಾಸವಾಗಿದ್ದು ಅಧ್ಯಾಯವನ್ನು ಮಾಡುವರು, ಸಾರ್ವಜನಿಕರು ಅಧ್ಯಾಯನ ಮಾಡುವಂತಹ ವಿದ್ಯಾರ್ಥಿಗಳಿಗೆ ಸಹಾಯ, ಸಹಕಾರ ನೀಡುವದರೊಂದಿಗೆ ಶಿಬಿರಕ್ಕೆ ಬಂದ ವಿದ್ಯಾರ್ಥಿಗಳಿಗೆ ಸಂಪೂರ್ಣ ಗ್ರಾಮೀಣ ಪ್ರದೇಶ ಅರಿವು ಮಾಡಿಸಿಕೊಡಬೇಕು ಎಂದು ಹೇಳಿದರು.
ಶಿಬಿರಾರ್ಥಿ ವಿದ್ಯಾರ್ಥಿಗಳು ಗ್ರಾಮೀಣ ಜನರ ಸೊಗಡನ್ನು ಅಧ್ಯಯನ ಮಾಡುವದರೊಂದಿಗೆ ಗ್ರಾಮಸ್ಥರೊಂದಿಗೆ ಬರದೂರು ಗ್ರಾಮದಲ್ಲಿ ಓಣಿಗಳ ಸ್ವಚ್ಛೆ, ಬಸ್ ನಿಲ್ದಾಣ ಸ್ವಚ್ಛತೆ ಮಾಡುವದರೊಂದಿಗೆ ಗ್ರಾಮದ ಜನರಿಗೆ ಸ್ವಚ್ಛೆತೆಯ ಅರಿವು ಮೂಡಿಸುವದರೊಂದಿಗೆ ಶಿಬಿರಕ್ಕೆ ಚಾಲನೆ ನೀಡಿದರು.
ಈ ವೇಳೆ ಬಸವರಾಜ ಎಲಿಗಾರ, ಬಸವರಾಜ ಬಾರಕೇರ, ಈಶ್ವರ್ಪ ಹಿರೇಗೌಡ್ರ, ವಿಶ್ವನಾಥ ಉಳ್ಳಾಗಡ್ಡಿ, ಬಸವರಾಜ ಹೆಬಸೂರು ವಿಶ್ವವಿದ್ಯಾಲಯದ ಬೋಧಕರು, ಗ್ರಾ.ಪಂ. ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.