ಮುಧೋಳ

ಕೃಷಿ ಕುಟುಂಬದ ಅಶ್ವಿನಿ ಕರಿತಮ್ಮ ಅದ್ಬುತ ಸಾಧನೆ: ರಾಜ್ಯಕ್ಕೆ ತೃತೀಯ ಸ್ಥಾನ

ಕೃಷಿ ಕುಟುಂಬದ ಅಶ್ವಿನಿ ಕರಿತಮ್ಮ ಅದ್ಬುತ ಸಾಧನೆ: ರಾಜ್ಯಕ್ಕೆ ತೃತೀಯ ಸ್ಥಾನ
ಮುಧೋಳ ತಾಲ್ಲೂಕಿನ ಉತ್ತೂರ ಗ್ರಾಮದ ಕು.ಅಶ್ವಿನಿ ಮಲ್ಲಪ್ಪ ಕರಿತಮ್ಮ 623 ಅಂಕ ಪಡೆದು ರಾಜ್ಯಕ್ಕೆ ತೃತೀಯ ಸ್ಥಾನ ಪಡೆದ ಪ್

ನಿತ್ಯವೂ ಒಂದು ಕಿ.ಮಿ ನಡಿಗೆ ಸರ್ಕಾರಿ ಬಸ್ ಪ್ರಯಾಣ 

ಮುಧೋಳ 10; ಮನೆಯಲ್ಲಿ  ಎಲ್ಲ ಕೆಲಸ ಮಾಡಿ ಸತತ 5 ವರ್ಷದಿಂದ ನಿತ್ಯವೂ ಒಂದು ಕಿ.ಮಿ ಕಾಲ್ನಡಿಗೆ ನಂತರ 8ಕಿ.ಮಿ ಸರ್ಕಾರಿ ಬಸ್ ಪ್ರಯಾಣ ಮಾಡಿ 2020-21 ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಕು. ಅಶ್ವಿನಿ ಮಲ್ಲಪ್ಪ  ಕರಿತಮ್ಮ ಎಂಬ ಕೃಷಿ ಕುಟುಂಬದ ಗ್ರಾಮೀಣ ವಿದ್ಯಾರ್ಥಿನಿ 625ಕ್ಕೆ 623 ಅಂಕ ಪಡೆದು ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾಳೆ 

ಮಲ್ಲಪ್ಪ ಹಾಗೂ ಸಾವಿತಿ ಕರಿತಮ್ಮ ದಂಪತಿಗಳ ಪುತ್ರಿ ಕು.ಅಶ್ವಿನಿ ಮಲ್ಲಪ್ಪ  ಕರಿತಮ್ಮ ಬಾಗಲಕೋಟ ಜಿಲ್ಲೆ ಮುಧೋಳ ತಾಲ್ಲೂಕಿನ ಉತ್ತೂರ ಗ್ರಾಮದವಳಾಗಿದ್ದು ಮೂಡಲಗಿ ತಾಲ್ಲೂಕಿನ ಕೊಪದಟ್ಟಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಬರೆದು ಈ ಸಾಧನೆ ಮಾಡಿದ್ದಾಳೆ. 

ರಾಜ್ಯಕ್ಕೆ ತೃತೀಯ ಸ್ಥಾನ ಮೂಡಲಗಿ ತಾಲೂಕಿನ ಕನ್ನಡ ಮಾಧ್ಯಮದ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಈ ವಿದ್ಯಾರ್ಥಿ ಮೂಲತ: ಮುಧೋಳ ತಾಲೂಕಿನ ಉತ್ತೂರು ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದು. ಪ್ರತಿದಿನ ಒಂದು ಕಿಲೋಮೀಟರ್ ನಡೆದುಕೊಂಡು ಮೆಟಗುಡ್ಡ ಕ್ರಾಸವರೆಗೆ ಬಂದು ಅಲ್ಲಿಂದ ಬಸ್ಸಿನಲ್ಲಿ ಸರ್ಕಾರಿ ಪ್ರೌಢಶಾಲೆ ಕೊಪದಟ್ಟಿಗೆ ಬಂದು ವ್ಯಾಸಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿಯ ಒಂದನೇ ತರಗತಿಯಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದ ಶಾಲೆಗಳಾದ ಉತ್ತೂರ ಬಸವನಗರದ ಸ.ಕಿ.ಪ್ರಾ.ಶಾಲೆ ಕೊಪದಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕೊಪದಟ್ಟಿಯ ಸರ್ಕಾರಿ ಪ್ರೌಢಶಾಲೆ ನಿರಂತರವಾಗಿ ಅಧ್ಯಯನ ಮಾಡಿ. ಒಂದನೇ ತರಗತಿಯಿಂದ ಪ್ರತಿ ಶೈಕ್ಷಣಿಕ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆಯುತ್ತ  2020-21  ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ 625 ಅಂಕಗಳಿಗೆ 623 ಅಂಕಗಳನ್ನು ಪಡೆದು ಪ್ರತಿಶತ 99.68ದೊಂದಿಗೆ ರಾಜ್ಯಕ್ಕೆ ತೃತೀಯ ಹಾಗೂ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಳೆ. 

ತಂದೆ ಮಲ್ಲಪ್ಪ ತಾಯಿ ಸಾವಿತ್ರಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಗುರು ಬಳಗದ ಅತ್ಯುತ್ತಮ ಶೈಕ್ಷಣಿಕ ಮಾರ್ಗದರ್ಶನದಿಂದ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ತೃತೀಯ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರಿಂದ ಮೂಡಲಗಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಸಿ.ಮನ್ನಿಕೇರಿ ವಿದ್ಯಾರ್ಥಿಯ ಮನೆವರೆಗೆ ಬಂದು ಸತ್ಕರಿಸಿ ಮಗುವಿನ ಉನ್ನತ ವ್ಯಸಂಗದ ಕುರಿತು ಪಾಲಕರಿಗೆ ಮನವರಿಕೆ ಮಾಡಿ ಅರ್ಧಕ್ಕೆ ಶಿಕ್ಷಣ ನಿಲ್ಲಿಸದೆ ಅವಳ ಆಸೆ ವೈದ್ಯಕೀಯ ಶಿಕ್ಷಣ ಕೊಡಿಸಿ ಎಂದು ಹೇಳಿದ್ದಾರೆ.ಅಲ್ಲದೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ದೂರವಾಣಿ ಮೂಲಕ ಮಾತನಾಡಿಸಿ ಅವಳಿಗೆ ಬೇಕಾದ ಸಹಕಾರ ನೀಡುವದಾಗಿ ಹೇಳಿ ಅಭಿನಂದಿಸಿದ್ದಾರೆ. 

“ ನಾನು ವೈದ್ಯಳಾಗಿ ಗ್ರಾಮೀಣ ಜನರ ಆರೋಗ್ಯವನ್ನು ಕಾಪಾಡಬೇಕು ಬಡ ಹಾಗೂ ಮದ್ಯಮ ವರ್ಗದವರಿಗೆ ವೈದ್ಯಕೀಯ ಸೇವೆ ನೀಡಬೇಕು ಈ ಕಾರಣಕ್ಕಾಗಿ ನಾನು ಓದಿದ್ದು ನನಗೆ ನಾನು ಪ್ರಾಥಮಿಕ ಶಾಲೆಯಿಂದ ಇಲ್ಲಿವರೆಗೆ ಎಲ್ಲ ಶಿಕ್ಷಕರು ಸಹಕಾರ ನೀಡಿದ್ದು ಮುಖ್ಯವಾಗಿ ನನ್ನ ತಂದೆ-ತಾಯಿಯ ಪ್ರೋತ್ಸಾಹ ನನ್ನನ್ನು ಈ ಸಾಧನೆ ಮಾಡಲು ಪ್ರೇರೆಪಿಸಿತು.” 

ಕು.ಅಶ್ವಿನಿ ಮಲ್ಲಪ್ಪ ಕರಿತಮ್ಮ ವಿದ್ಯಾರ್ಥಿನಿ 

  “ ಅವಳಲ್ಲಿ ಅದ್ಬುತ ಪ್ರತಿಭೆ ಇದ್ದು ಅವಳಿಗೆ ವೈದ್ಯಳಾಗುವ ಹುಮ್ಮಸ್ಸು ಇದ್ದು ಅವಳ ಆಸೆ  ಫಲಿಸಲಿ ಅವಳಿಗೆ ನಮ್ಮ ಎಲ್ಲ ಸಹಕಾರ ಇರುತ್ತದೆ” 

ಎ.ಸಿ.ಮನ್ನಿಕೇರಿ ಬಿಇಓ ಮೂಡಲಗಿ 

ಸುದ್ದಿ ಓದಿ