ಮುಧೋಳ

ಯುವ ನಾಯಕನ ಜನ್ಮದಿನ ಸರಳವಾಗಿ ಆಚರಣೆ

ಯುವ ನಾಯಕನ ಜನ್ಮದಿನ ಸರಳವಾಗಿ ಆಚರಣೆ

ಮುಧೋಳ 24: ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರ ಪುತ್ರ  ಮತ್ತು ಮುಧೋಳ ಮತಕ್ಷೇತ್ರದ ಯುವ ನಾಯಕರಾದ ಅರುಣ  ಕಾರಜೋಳ ಅವರ 43ನೇ ಹುಟ್ಟುಹಬ್ಬವನ್ನು ಸರಳವಾಗಿ ಅರ್ಥಪೂರ್ಣವಾಗಿ ಕ್ಷೇತ್ರದ ವಿವಿಧೆಡೆ  ಆಚರಿಸಲಾಯಿತು. ಅರುಣ್ ಕಾರಜೋಳ ಅವರ ಅಭಿಮಾನಿಗಳು ಮುಧೋಳ ನಗರದ ಅನಾಥಾಶ್ರಮದ ಮಕ್ಕಳಿಗೆ ಟ್ರ್ಯಕ್ ಶೂಟ್ ಮತ್ತು ಶೂಗಳನ್ನು ವಿತರಿಸಿ ಮಕ್ಕಳಿಗೆ ಉಪಹಾರ ನೀಡಿ ಅವರ ಜೊತೆಗೆ ತಾವು ಉಪಹಾರ ಸೇವಿಸಿದರು. ಮತ್ತು ಅರುಣ್ ಅವರ ಅಭಿಮಾನಿಗಳು ಲೋಕಾಪುರದ ಲೋಕನಾಥೇಶ್ವರ ದೇವಾಲಯ ಮತ್ತು ದುರ್ಗಾದೇವಿ ದೇವಸ್ಥಾನದಲ್ಲಿ ಅವರ ಹೆಸರಿನಲ್ಲಿ ಪೂಜೆ ಮಾಡಿಸಿದರು ಅದೇ ರೀತಿ ಬೆಳಗಾವಿಯ ಮಹೇಶ್ ಫೌಂಡೇಶನದ    ಮಕ್ಕಳಿಗೆ ಒಂದು ದಿನದ ಊಟದ ವ್ಯವಸ್ಥೆ ಮಾಡಿಸಿದರು.ಕ್ಷೇತ್ರದ ಅಭಿಮಾನಿಗಳು ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಅರುಣ್ ಅವರ ಸ್ವಗೃಹಕ್ಕೆ ಬಂದು ತಮ್ಮ ನೆಚ್ಚಿನ ಯುವ ನಾಯಕನಿಗೆ ಸಿಹಿ ಹಂಚಿದರು. 


ಸುದ್ದಿ ಓದಿ