ಮುಧೋಳ

ಮೋಬೈಲ ಕಳ್ಳರ ಬಂಧನ: ಒಟ್ಟು 2.85.000 ರೂ. ಮೌಲ್ಯದ ವಸ್ತು ವಶ

ಮೋಬೈಲ ಕಳ್ಳರ ಬಂಧನ: ಒಟ್ಟು 2.85.000 ರೂ. ಮೌಲ್ಯದ ವಸ್ತು ವಶ

ಮುಧೋಳ 05: ಮಂಗಳವಾರ ನಗರದ ಬಸ್ ನಿಲ್ದಾಣದ ಹತ್ತಿರ ಸಂಶಯಾಸ್ಪದವಾಗಿ ಸಿಕ್ಕ ಆಪಾದಿತರಾದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ಅನಕೇರಿ ವೆಂಕಟೇಶ   ರಾಮಣ್ಣ   ವಡ್ಡರ (40)ಭದ್ರಾವತಿಯ  ಶ್ರೀಕಾಂತ ಸಣ್ಣ ತಿಮ್ಮಪ್ಪ (31)  ದರ್ಶನ್  ಬಾಗ್ಯವಂತ ಗುಜ್ಜರ(24 ) ಇವರು ಮುಧೋಳ ಹಾಗೂ ಜಮಖಂಡಿ ಹಾಗೂ ತೇರದಾಳ ಶಹರದ ಮಾರ್ಕೇಟಗಳಲ್ಲಿ ಕಳ್ಳತನ ಮಾಡಿದ ಒಟ್ಟು ಅಂದಾಜು 85,000 ಬೆಲೆ ಬಾಳುವ 8 ವಿವಿಧ ಕಂಪನಿಯ ಮೋಬೈಲ ಪೋನುಗಳನ್ನು ಹಾಗೂ ಕಳ್ಳತನಕ್ಕೆ ಬಳಸುತ್ತಿದ್ದ ಅಂದಾಜು 2.00.000  ರೂ ಬೆಲೆಬಾಳುವ ಸ್ವಿಷ್ಟ ಡಿಜೈರ ಕಾರನ್ನು ಸೇರಿ ಒಟ್ಟು 2.85.000 ರೂ ಬೆಲೆ ಬಾಳುವ ಕಾರು ಹಾಗೂ ಮೋಬೈಲ್‌ನ್ನು  ಬಾಗಲಕೋಟೆಯ ಎಸ್‌.ಪಿ, ಜಮಖಂಡಿಯ ಡಿವೈಎಸ್ಪಿ ಹಾಗೂ ಮುಧೋಳ ಸಿಪಿಐ ಎಚ್ ಆರ್ ಪಾಟೀಲ್  ರವರ ಮಾರ್ಗದರ್ಶನದಲ್ಲಿ ಮುಧೋಳದ ಪಿಎಸ್‌ಐ ದಿನೇಶ ಜವಳಕರ ಕ್ರೈಂ ಪಿಎಸ್‌ಐ  ಕೆ . ಜಿ. ಮಾಂಗ ,ಪ್ರೊ ಪಿಎಸ್‌ಐ ಅಶೋಕ ದಿದ್ದಿಗೆ, ಆರಿ​‍್ಬ ಕಟಗೇರಿ,ಬಿ.ಪಿ ಕುಸನಾಳೆ, ಸದಾಶಿವ ಎಂ ಬಡಿಗೇರ ,ಮಾರುತಿ ದಳವಾಯಿ,ಬೀರ​‍್ಪ ಕುರಿ ಸಿಬ್ಬಂದಿಗಳು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂದಿಸಿದ್ದಾರೆ. ಮುಧೋಳ ಠಾಣೆ ಇವರಿಗೆ ಮಾನ್ಯ ಎಸ್‌.ಪಿ ಸಾಹೇಬರು ಬಾಗಲಕೋಟ ರವರು ಶ್ಲಾಘನೆ ವ್ಯಕ್ತ ಪಡಿಸಿ , ಸೂಕ್ತ ಬಹುಮಾನ ಘೋಷಿಸಿರುತ್ತಾರೆ. 

ಸುದ್ದಿ ಓದಿ