ಕುಕನೂರ್

ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಮನವಿ

ಹಮಾಲಿ ಕಾರ್ಮಿಕರ ಬೇಡಿಕೆಗಳನ್ನು  ಈಡೇರಿಸಲು ಮನವಿ

ಲೋಕದರ್ಶನ ವರದಿ 

ಕುಕನೂರ 11: ಪ್ರಸ್ತುತ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ರಾಜ್ಯದ ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ  ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ  ನಿಂಗಪ್ಪ ಗೊರ್ಲೆಕೊಪ್ಪ ಆಗ್ರಹಿಸಿದರು. ಪಟ್ಟಣದ ಸಚಿವರ ಕಚೇರಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ರವರಿಗೆ ರುದ್ರಮುನೀಶ್ವರ ಹಮಾಲರ ಕಾರ್ಮಿಕರ ಸಂಘದ ವತಿಯಿಂದ ಮನವಿ ಸಲ್ಲಿಸಿ ಮಾತನಾಡಿದ ಅವರು.   

ಕಾರ್ಮಿಕರು ಅತ್ಯಂತ ಶ್ರಮದಾಯಕ ಕೆಲಸ ನಿರ್ವಹಿಸುವ ವ್ಯಾಪಾರ ವಹಿವಾಟಿನಲ್ಲಿ ಹಾಗೂ ಸರಕು ಹಾಗೂ ಸಾಗಾಣಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರ ಬದುಕಿನ ಆಸರೆಗಾಗಿ ಈ ಬಾರಿ ನಡೆಯುವ ಚಳಿಗಾಲದ ಬೆಳಗಾವಿ ಸುವರ್ಣಸೌಧದಲ್ಲಿ  ನಡೆಯಲಿರುವ ಪ್ರಸ್ತುತ ಅಧಿವೇಶನದಲ್ಲಿ  ಕೋವಿಡ್ ಅಲೆಯ  ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಕನಿಷ್ಠ 10 ಸಾವಿರೂ ಆರ್ಥಿಕ ನೆರವು, 6ತಿಂಗಳು ರೇಷನ್, 60 ವರ್ಷ ಆಗ ಹಮಾಲಿ ಕಾರ್ಮಿಕರಿಗೆ  ಒಂದು  ಬಾರಿ ಕನಿಷ್ಠ  1 ಲಕ್ಷ ರೂಪಾಯಿಗಳ ನಿವೃತ್ತಿ ಪರಿಹಾರ , ಹಮಾಲಿ ಕಾರ್ಮಿಕರಿಗೆ ಯೋಗ್ಯವಾದ ವಸತಿ ಯೋಜನೆ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಪಿಂಚಣಿ ಯೋಜನೆ ಜಾರಿ, ಸಾಮಾಜಿಕ ಭದ್ರತಾ ಸೌಲಭ್ಯ ಹಮಾಲಿ ಕಾರ್ಮಿಕರ ಪ್ರತ್ಯೇಕ ಮಂಡಳಿ ರಚಿಸಿ ಅಗತ್ಯ ಸೌಲಭ್ಯಗಳು ಜಾರಿ,ಅಂಬೇಡ್ಕರ್ ಸಹಾಯಹಸ್ತ ಸ್ಮಾರ್ಟ್‌ ಕಾರ್ಡ್‌ ಗಳನ್ನು ಸಮರ​‍್ಕವಾಗಿ ಕೂಡಲೇ ಕಾರ್ಮಿಕರಿಗೆ ಉಚಿತವಾಗಿ ಜಾರಿ ,ಕೇಂದ್ರ ಸರ್ಕಾರ ಜಾರಿ ಮಾಡಿರುವ ಪ್ರಧಾನಮಂತ್ರಿ ಜೀವನ್ ಬಿಮಾ ಮತ್ತು ಸುರಕ್ಷಾ ಯೋಜನೆಗಳು ರಾಜ್ಯದ ಅಸಂಘಟಿತ ಕಾರ್ಮಿಕರಿಗೆ ಉಚಿತವಾಗಿ  ಜಾರಿ ಉದ್ಯೋಗ ಖಾತ್ರಿ ಯೋಜನೆಯನ್ನು ಕೂಲಿ ಮತ್ತು ಕೆಲಸದ ದಿನಗಳು ಹೆಚ್ಚಿಸಿ ಯೋಜನೆಯನ್ನು  ನಗರ  ಪ್ರದೇಶಕ್ಕೂ ವಿಸ್ತರಿಸವುದು  ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸಿ ಕಾರ್ಮಿಕರ ಕಲ್ಯಾಣಕ್ಕೆ ನೆರವಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಹಮಾಲಿ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ವಿರುಪಾಕ್ಷಪ್ಪ ಭಂಡಾರಿ ದೇವಪ್ಪ ಗುಡದಳ್ಳಿ  ರಾಜಪ್ಪ ರಮೇಶ ಶಿವಪ್ಪ ಯಲ್ಲಪ್ಪ ದೊಡ್ಡೀರ​‍್ಪ ಆರಬೆರಳಿನ ಸೇರಿದಂತೆ ಇನ್ನಿತರರು ಇದ್ದರು. 


ಸುದ್ದಿ ಓದಿ