ಜಮಖಂಡಿ

ಕಲಾವಿದರಿಗೆ ಹಾಗೂ ಕ್ರೀಡಾಪಟುಗಳಿಗೆ 10 ಸಾವಿರ ರೂ. ಮಾಶಾಸನ ನೀಡಲು ಮನವಿ

ಕಲಾವಿದರಿಗೆ ಹಾಗೂ ಕ್ರೀಡಾಪಟುಗಳಿಗೆ 10 ಸಾವಿರ ರೂ. ಮಾಶಾಸನ ನೀಡಲು ಮನವಿ

ಜಮಖಂಡಿ 07: ಭಜನಾ, ನಾಟಕ, ಚೌಡಕಿಪದ, ಸಂಗೀತ ಕಲಾವಿದರಿಗೆ ಹಾಗೂ ಕ್ರೀಡಾಪಟುಗಳಿಗೆ ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಕನಿಷ್ಠ 10 ಸಾವಿರ ರೂ. ಮಾಶಾಸನ ನೀಡಬೇಕೆಂದು ಜಿಪಂ ಮಾಜಿ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಹೇಳಿದರು. 

ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸ್ವಾತಂತ್ರ್ಯ ಸೇನಾನಿ ರಾಯಪ್ಪ ಬೆಳಗಲಿ ಪ್ರತಿಷ್ಠಾನವು ಆಯೋಜಿಸಿದ್ದ ಮಾಧವಾನಂಧ ಪ್ರಭುಗಳ 107 ನೇ ಜಯಂತಿಯೋತ್ಸವ ಅಂಗವಾಗಿ ತಾಲೂಕಾ ಮಟ್ಟದ ಭಜನಾ ಹಾಗೂ ಸಂಗೀತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು

ಇಂದಿನ ಕಾಲದಲ್ಲಿ ಧಾರವಾಹಿ, ಚಲನಚಿತ್ರಗಳ ನಟ-ನಟಿಯರನ್ನು ಕರೆಯಿಸಿ ಕೇಕೆ, ಸಿಳ್ಳೆಗಳನ್ನು ಹಾಕುವ ಬದಲು ಭಜನಾ ಕಲಾವಿದರನ್ನು ಉಳಿಸಿ ಬೆಳೆಸಬೇಕಾಗಿದೆ. ಜಾನಪದ ಕಲೆಗಳು ನಸಿಸಿ ಹೋಗುತ್ತಿವೆ. ಕೇಂದ್ರ ಸಕರ್ಾರ 4 ಸಾವಿರ ರೂ. ನೀಡುತ್ತಿದ್ದರೆ, ರಾಜ್ಯ ಸಕರ್ಾರ ಕೇವಲ 2 ಸಾವಿರ ರೂ. ನೀಡುತ್ತಿದೆ. ಆದರೆ ಬಡಕಲಾವಿದರು ತಮ್ಮ ಕುಟುಂಬ ನಿರ್ವಹಿಸಲು ಸಾಧ್ಯವಾಗದೆ ಕಷ್ಟ ಅನುಭವಿಸುತ್ತಿವೆಂದು ಹೇಳಿದರು.

ಅತಿಥಿಗಳಾಗಿದ್ದ ಹಿರಿಯ ವಕೀಲ ಎನ್.ಎಸ್.ದೇವರವರ ಮಾತನಾಡಿ, ಇಂಚಗೇರಿ ಸಂಪ್ರದಾಯ ಭಕ್ತಿಪಂತದ ಜೊತೆಗೆ ದೇಶಕ್ಕೆ ಸ್ವಾತಂತ್ರ್ಯ ತರುವಲಿ ಮುಂದಾಳತ್ವ ವಹಿಸಿದ ಸಂಪ್ರದಾಯವಾಗಿದೆ. ಸ್ವಾತಂತ್ರ್ಯ ಸೇನಾನಿ ಜೊತೆಗೆ ದೈವಿಭಕ್ತರಾಗಿದ ರಾಯಪ್ಪ ಬೆಳಗಲಿ ಅವರು ಜನತೆಯಲ್ಲಿ ಒಳ್ಳೆಯ ಸಂಬಂಧವನ್ನು ಹೊಂದಿದ್ದರು. ಇಂಚಗೇರಿ ಸಂಪ್ರದಾಯ ದೇಶಕ್ಕೆ ಅಪಾರ ಕೊಡುಗೆ ನೀಡಿದೆ. ದೇಶಕ್ಕೆ, ಜನತೆಗೆ ಗಂಡಾಂತರ ಬಂದ ಕಾಲದಲ್ಲಿ ಸಹಾಯ, ಸಹಕಾರ ನೀಡಿದ ಮಠವಾಗಿದೆ. ಜಾತಿ, ಮತ, ಪಂತಗಳನ್ನು ಹೋಗಲಾಡಿಸಿ ಸಮಾನತೆಗಾಗಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮುತ್ತಣ್ಣ ಹಿಪ್ಪರಗಿ ಮಾತನಾಡಿ, ಇಂದಿನ ಕಾಲದಲ್ಲಿ ಚಲನಚಿತ್ರಗಳನ್ನು ನೋಡಿಕೊಂಡು ಜೀವನ ಹಾಳು ಮಾಡಿಕೊಳ್ಳುವ ಬದಲು. ಭಜನಾ ಮತ್ತು ಸಂಗೀತ ಕಲೆಯನ್ನು ಉಳಿಸಿ ಬೆಳಸಬೇಕಾಗಿದೆ. ಬೆಳಗಲಿ ಕುಟುಂಬ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬವಾಗಿದೆ. 12 ನೇ ಶತಮಾನದಲ್ಲಿ ತನ್ನದೇ ಆದ ಕ್ರಾಂತಿ ಮಾಡಿದವರಲ್ಲಿ ಇಂಚಗೇರಿ ಸಂಪ್ರದಾಯ ಒಂದಾಗಿದೆ. ನಾವೆಲ್ಲರೂ ಸೇರಿ ಭಜನೆ, ಸಂಗೀತ ಕಲೆಯನ್ನು ಉಳಿಸಬೇಕಾಗಿದೆಂದರು.

ಸಾನಿಧ್ಯ ವಹಿಸಿದ್ದ ರೇವಣಸಿದ್ದೇಶ್ವರ ಮಹಾರಾಜರು, ಮಹಾದೇವ ಮಹಾರಾಜರು  ಆಶರ್ೀವಚನ ನೀಡಿದರು. ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ, ಡಾ. ಗೋಪಾಲಕೃಷ್ಣ ಹವಾಲ್ದಾರ, ಸಿದ್ದು ಉಪ್ಪಲದಿನ್ನಿ, ನಾಗರಾಜ ಯತ್ನಾಳ, ಲಕ್ಷ್ಮೀಬಾಯಿ ಕುಳಲಿ, ಮಹಾದೇವಪ್ಪ ಹುಲ್ಯಾಳ, ಬಾಪುಗೌಡ ಬುಲಗೌಡ, ಸುಮಿತ್ರಾ ಮರೇಗುದ್ದಿ, ರಾಯಪ್ಪ ಕುಂಬಾರ, ಸಂಗಮೇಶ ಗೆಣ್ಣೂರ, ಕಲ್ಲಪ್ಪ ತೆಲಸಂಗ. ರಾಜು ಮೆಲಿನಕೇರಿ, ಬಸವರಾಜ ಪಾಟೀಲ ವೇದಿಕೆಯಲ್ಲಿದ್ದರು.ಮುಕುಂದ ಪಂಪಕವಿ ಬೆಳಗಲಿ ಸ್ವಾಗ ತಿಸಿ-ಪ್ರಾಸ್ತಾವಿಕವಾಗಿ ಮಾತನಾಡಿದರು.ಚಂದ್ರಗುಪ್ತ ಬೆಳಗಲಿ ಪರಿಚಯಿಸಿದರು. ಪಂಡಿತ ಬಾಹುಬಲಿ ಉಪಾಧ್ಯೆ ನಿರೂಪಿಸಿದರು. ಸಂದೀಪ ಬೆಳಗಲಿ ವಂದಿಸಿದರು. 

 

ಸುದ್ದಿ ಓದಿ