ಕುಕನೂರ್

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಮನವಿ

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತ ಸಂಘದಿಂದ ಮನವಿ

ಕುಕನೂರು 16: ರೈತ ನಾಯಕ  ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಕುಕನೂರು ತಾಲೂಕು ಘಟಕದ ವತಿಯಿಂದ  ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕುಕನೂರ್ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.  

ನೂತನ ಕುಕನೂರು ತಾಲೂಕು ಆಗಿ ಸುಮಾರು ವರ್ಷಗಳ ಕಳೆದರೂ ತಾಲೂಕಿಗೆ ಅವಶ್ಯವಿರುವ ಎಲ್ಲಾ  ತಾಲೂಕ ಕಛೇರಿಗಳು ಇನ್ನು ಕುಕನೂರಿನಲ್ಲಿ ಕಾರ್ಯಾರಂಭ ಮಾಡುತ್ತಿಲ್ಲ,ಕೃಷಿ ಕಾಯ್ದೆ ತಿದ್ದುಪಡಿ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ,  ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಕುಕನೂರು ಎಪಿಎಂಸಿ ಪ್ರಾಂಗಣದಲ್ಲಿ  ಟೆಂಡರ್ ಮೂಲಕ  ಖರೀದಿಸುವ ಕ್ರಮ ಕೈಗೊಳ್ಳಬೇಕು. ಕೃಷಿ ಮಾರುಕಟ್ಟೆಯ ಹೊರಗಡೆ ವ್ಯವಹರಿಸುವ  ವರ್ತಕರಿಂದ ಅನ್ಯಾಯವನ್ನು ತಡೆಯಬೇಕು.  ಪ್ರಾಂಗಣದಲ್ಲಿ ವಿವರಿಸುವಂತೆ  ವರ್ತಕರಿಗೆ ನೋಟಿಸ್ ನೀಡಬೇಕು. ಮಾರಾಟವಾದ ರೈತರ ಉತ್ಪನ್ನಗಳಿಗೆ ಕೃಷಿ ಮಾರುಕಟ್ಟೆಯ ರಸೀದಿ ನೀಡಬೇಕು. ಕುಕನೂರು ತಾಲೂಕಿನ ದೊಡ್ಡ ಗ್ರಾಮವಾದ ಇಟಗಿ ಗ್ರಾಮವನ್ನು ಹೋಬಳಿ ಕೇಂದ್ರವನ್ನಾಗಿ ಘೋಷಿಸಬೇಕು.. ಇಟಗಿ ಗ್ರಾಮದಲ್ಲಿರುವ ಐತಿಹಾಸಿಕ ಸ್ಮಾರಕವಾದ ಮಹೇಶ್ವರ ದೇವಾಲಯವನ್ನು ಜೀರ್ಣೋದ್ದಾರ ಅಭಿವೃದ್ಧಿಪಡಿಸಬೇಕು,  ಮತ್ತು ಕುಕುನೂರು ತಾಲ್ಲೂಕಿನ ದ್ಯಾಂಪುರ ಗ್ರಾಮದಲ್ಲಿ ಕಳೆದ ಮೂರು ತಿಂಗಳ ಹಿಂದೆ ರೈತ ಮಹಿಳೆ ಪ್ರೇಮ ಮುದುಗಲ್ ಇವರ ಕಡಲೆ ಬೆಳೆಗೆ ಕಿಡಿಗೇಡಿಗಳು ಬೆಂಕಿ ಇಟ್ಟು ಸುಮಾರು 10ರಿಂದ 12 ಲಕ್ಷ ರೂಪಾಯಿಗಳು  ನಷ್ಟವಾಗಿದೆ. ಕೂಡಲೇ ಸರ್ಕಾರ  ರೈತ ಮಹಿಳೆಗೆ ಪರಿಹಾರ ನೀಡಬೇಕು. ಸರ್ಕಾರ ಮತ್ತು ಜನಪ್ರತಿನಿಧಿಗಳು ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಮಾನದಲ್ಲಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆಂದು ಎಚ್ಚರಿಸಿದರು.  ಮತ್ತು ಕಡಲೆ ಬೆಳೆಗೆ ಬೆಂಕಿಯಿಟ್ಟ  ತಪ್ಪಿತಸ್ಥರ ಪತ್ತೆ ಹಚ್ಚಿ ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಪತ್ರದಲ್ಲಿ ಉಲ್ಲೇಖಿಸಿ ಒತ್ತಾಯಿಸಿದರು.  

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕುಕುನೂರು, ತಾಲೂಕು ಅಧ್ಯಕ್ಷ ಅಂದಪ್ಪ ಹುರಳಿ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಕೊಡ್ಲಿ, ಗೌರವಾಧ್ಯಕ್ಷರಾದ  ಮಹೇಶಪ್ಪ ಬೆದವಟ್ಟಿ ಉಪಾಧ್ಯಕ್ಷರಾದ ಮಂಜುನಾಥ್ ಶೆಟ್ಟಿ ಗಣಪ ಪೂಜಾರ್, ಸಂಘಟನಾ ಕಾರ್ಯದರ್ಶಿಯಾದ ಕಳಕಪ್ಪ ಕುಂಬಾರ್ ,  ಸಹ ಕಾರ್ಯದರ್ಶಿ  ಬಸವರಾಜ ಹೂಗಾರ್,  ಪ್ರಗತಿಪರ ರೈತರಾದ ಬಸವನಗೌಡ ಪೊಲೀಸ್ ಪಾಟೀಲ್, ಶ್ರೀಶೈಲಪ್ಪ ಜವಳಿ, ಕಳಕಪ್ಪ ಕ್ಯಾದಗುಂಪಿ, ರಾಜಣ್ಣ ಹೊಂಬಾಳ, ವಜೀರಸಾಬ ತಳಕಲ್ಲ, ಗವಿಸಿದ್ದಪ್ಪ ಜೀನಿನ್, ಹುಚಿರ​‍್ಪ ಕೌದಿ,  ಗವಿಸಿದ್ದಪ್ಪ ಮುದ್ದಾಬಳ್ಳಿ. ಇನ್ನೂ ಅನೇಕ ರೈತ ಪದಾಧಿಕಾರಿಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ