ರೈತ ಹೋರಾಟಕ್ಕೆ ಅಣ್ಣಪ ಸಾಹುಕಾರ ಖೈನೂರ ಬೆಂಬಲ
ಇಂಡಿ 24 : ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ಅಕ್ಕಲಕೋಟ -ವಿಜಯಪೂರ ರಾಷ್ಟ್ರೀಯ ಹೆದ್ದಾರಿ ಬಳಿ ಜೋಡಗುಡಿ ಹತ್ತಿರ ರೈತರು ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದೆ. ಈ ಹೋರಾಟಕ್ಕೆ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಅಣ್ಣಪಸಾಹುಕಾರ ಖೈನೂರ ಅವರು ಬೆಂಬಲಿಸಿ ಮಾತನಾಡಿದ ಅವರು ಇಂಡಿ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು ಹಾಗೂ ರೈತರಿಗೆ ಸಮರ್ಕವಾಗಿ ವಿದ್ಯುತ್ ಸರಬರಾಜು ಮಾಡಬೇಕು ಹಾಗೂ ಬೀಕರ ಬರಗಾಲದಿಂದ ಕಂಗಾಲಾಗಿದ್ದ ಹಾಗೂ ಬೆಳೆ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಶುಕ್ರವಾರ ಆಲಮಟ್ಟಿ ಕೃಷ್ಣಾ ಮೇಲ್ದಂಡೆ ಯೋಜನೆಯ ಸಿಓ ಅವರು ನಮ್ಮ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಬರುವುದಾಗಿ ಹೇಳಿದ್ದಾರೆ.
ಅವರು ಬಂದ ಬಳಿಕ ಹೋರಾಟದ ರೂಪ ರೇಶ್ ಬದಲಾಗಲಿದೆ ಎಂದು ಹೇಳಿದರು. ಇಂದಿನ ಈ ಹೋರಾಟದಲ್ಲಿ ಇಂಡಿ ತಾಲೂಕು ಕಿಸಾನ್ ಸಂಘದ ಅಧ್ಯಕ್ಷರಾದ ಈರ್ಪ ಗೋಟ್ಯಾಳ ದಸಗೀರಸಾಬ ಬಾಗವಾನ ಅಂಬಣ್ಣ ಖಸ್ಕಿ ಚನ್ನಪ್ಪ ಮಿರಗಿ ಶಿವಲಿಂಗಪ್ಪ ಕಟ್ಟಿ ಶಾಂತಪ್ಪ ಖಸ್ಕಿ ಬಾಬು ಡೊಂಬರ ಪ್ರಕಾಶ ಇಂಡಿ ಶರಣಪ್ಪ ತಾರಾಪೂರ ಅಂಬಣ್ಣ ಪಂತೋಜಿ ಶೇಂಕ್ರೇಪ್ಪ ರೂಗಿ ಭೀಮರಾಯ ಬುಕ್ಕಾಣಿ ಧರೇಪ್ಪ ಮೇತ್ರಿ ಗಂಗಪ್ಪ ಅಹಿರಸಂಗ ಚಿದಾನಂದ ಮದರಿ ಶಾಂತಪ್ಪ ರೂಗಿ ಶರಣು ಪಂತೋಜಿ ಚಂದ್ರಾಮ ಖಸ್ಕಿ ಶಿವಕಾಂತ ಖಸ್ಕಿ ಭೀಮಣ್ಣ ಕಪಾಲಿ ಸಿದ್ದಗೊಂಡ ತೆನ್ನಹಳ್ಳಿ ಚಂದ್ರಕಾಂತ ಮೇತ್ರಿ ಮಾದೇಪ್ಪ ಗೊಳ್ಳಗಿ ಗುರ್ಪ ಮೇತ್ರಿ ಮಳಸಿದ್ದಪ್ಪ ತಳವಾರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.