ಎಲ್ಲ ಶರಣರು ಸಹಕಾರಿ ತತ್ವದಲ್ಲಿಯೇ ಬಾಳಿ ಬದುಕಿದ್ದಾರೆ: ಡಾ. ಮೃತ್ಯುಂಜಯ ಶೆಟ್ಟರ

ಎಲ್ಲ ಶರಣರು ಸಹಕಾರಿ ತತ್ವದಲ್ಲಿಯೇ ಬಾಳಿ ಬದುಕಿದ್ದಾರೆ: ಡಾ. ಮೃತ್ಯುಂಜಯ ಶೆಟ್ಟರ All Sharans have lived and survived on the principle of cooperation: Dr. Mrityunjaya Shettar

ಲೋಕದರ್ಶನ ವರದಿ 

ಶರಣರ ಚಿಂತನೆ, ವಿಚಾರದಾರೆಯ ಪ್ರಸಾರ ಅತ್ಯಗತ್ಯ: ಡಾ. ಸಿ.ಸೋಮಶೇಖರ 

ಧಾರವಾಡ 01ಶರಣರ ಚಿಂತನೆಯನ್ನ ಮತ್ತು ವಿಚಾರದಾರೆಯನ್ನ ವಚನ ಸಾಹಿತ್ಯದ ರೂಪದಲ್ಲಿ ಜಗತ್ತಿಗೆ ಕೊಟ್ಟಂಥಹ ಶರಣ ಸಾಹಿತ್ಯವನ್ನು ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವ ಹಂಬಲದೊಂದಿಗೆ 1986ರಲ್ಲಿ ಪೂಜ್ಯ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತಗೊಂಡ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಶರಣ ಸಾಹಿತ್ಯ ಪ್ರಸಾರದಲ್ಲಿ ಬಹಳಷ್ಟು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ನಿವೃತ್ಯ ಐ.ಎ.ಎಸ್‌.ಅಧಿಕಾರಿ ಹಾಗೂ ಅ.ಭಾ.ಶ.ಸಾ.ಪರಿಷತ್ ರಾಜ್ಯಾಧ್ಯಕ್ಷರಾದ ಡಾ.ಸಿ.ಸೋಮಶೇಖರ ಹೇಳಿದರು. 

ದಿ. 30ರಂದು ಸಂಜೆ ಧಾರವಾಡ ಶ್ರೀ ಸಾಯಿ ಪ.ಪೂ. ವಿಜ್ಞಾನ ಮಹಾವಿದ್ಯಾಲಯದ ಸಭಾಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಧಾರವಾಡ ಜಿಲ್ಲಾ ಘಟಕವು ಏರಿ​‍್ಡಸಿದ್ದ ವಿರುಪಾಕ್ಷಪ್ಪ ಶಿವಯೋಗಪ್ಪ ಬಸವನಾಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಾ.ಸಿ.ಸೋಮಶೇಖರ ಅವರು ಮಾತನಾಡಿದರು. 

ನಿವೃತ್ತ ಪ್ರಾಚಾರ್ಯರೂ ಖ್ಯಾತ ಹಿಂದೂಸ್ಥಾನಿ ಗಾಯಕರಾದ ಡಾ.ಮೃತ್ಯುಂಜಯ ಶೆಟ್ಟರ ‘ವಚನ ಸಾಹಿತ್ಯದಲ್ಲಿ ಸಹಕಾರ ತತ್ವ ಪ್ರತಿಪಾದನೆ’ ವಿಷಯದ ಕುರಿತು ಮಾತನಾಡುತ್ತ ಉತ್ತರ ಕರ್ನಾಟಕದ ಪ್ರಸಿದ್ಧ ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರಾಗಿ ಹಾಗೂ ಇತರೆ 70-80ಕ್ಕೂ ಹೆಚ್ಚಿನ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿ ಸಮಾಜಕ್ಕೆ ವಿಶಿಷ್ಠ ಕೊಡುಗೆಯನ್ನು ನೀಡಿದ ಶರಣ ವಿರುಪಾಕ್ಷಪ್ಪ ಶಿ. ಬಸವನಾಳರು ಪ್ರಾತಃಸ್ಮರಣೀಯರಾಗಿದ್ದಾರೆ. ಸಿ.ಶಿ.ಬಸವನಾಳರು ಹಾಗೂ ವಿ.ಶಿ.ಬಸವನಾಳರು ಕನ್ನಡ ನಾಡಿನ ಎರಡು ಕಣ್ಣುಗಳಾಗಿದ್ದರು ಎಂದರು.     

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಂಗಮನಾಥ ಲೋಕಾಪೂರ ಮಾತನಾಡುತ್ತ 20ನೇ ಶತಮಾನ ಕಂಡ ಅತ್ಯಂತ ತ್ಯಾಗಮಯಿ ಜೀವಿಗಳಾಗಿದ್ದವರು ಬಸವನಾಳ ಸಹೋದರರು.  ಎಲ್ಲ ಶರಣರು ಸಹಕಾರಿ ತತ್ವದಲ್ಲಿಯೇ ಬಾಳಿ ಬದುಕಿದ್ದಾರೆ. ಶರಣರ ಜೀವನವು ಕಾಯಕ ನಿಷ್ಠ ಜೀವನವಾಗಿದ್ದಿತು ಎಂದರು.   

ಶ್ರೀಸಾಯಿ ಪ.ಪೂ. ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಡಾ.ವೀಣಾ ಬಿರಾದಾರ ಮಾತನಾಡುತ್ತ ಎಲ್ಲ ಶರಣ ಚಿಂತಕರು ಒಂದೆಡೆ ಸೇರಿ ಇಂತಹ ಶರಣ ಗೋಷ್ಠಿ ಏರಿ​‍್ಡಸಿರುವುದು ಅನುಭವ ಮಂಟಪದ ಮಾದರಿಯ ಪರಿಕಲ್ಪನೆಯ ಭಾವವನ್ನು ಮೂಡಿಸುವಂತೆ ಭಾಸವಾಗಿದೆ ಎಂದರು.   

ಎಸ್‌.ಪಿ.ಹಿರೇಮಠ ನಿರೂಪಿಸಿದರು.  ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಶಿವಾನಂದ ಹೂಗಾರ ಪ್ರಾರ್ಥಿಸಿದರು. ಖಜಾಂಚಿ ಶ್ರೀಶೈಲ ರಾಚಣ್ಣವರ ವಂದಿಸಿದರು. ಡಾ. ರಾಮೂ ಮೂಲಕ ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು.  ದತ್ತಿದಾನಿಗಳಾದ ರವೀಂದ್ರ ಎಸ್‌. ಬಸವನಾಳರು ವೇದಿಕೆಯಲ್ಲಿ ಉಪಸ್ಥಿತರಿದ್ದರು.   

ಇದೇ ಸಂದರ್ಭದಲ್ಲಿ ಪ್ರಮೀಳಾ ಜಕ್ಕಣ್ಣವರ ಅವರಿಗೆ ಧಾರವಾಡ ಜಿಲ್ಲಾ ಕದಲಿ ವೇದಿಕೆಯ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಾಧ್ಯಕ್ಷರಾದ ಡಾ.ಸಿ.ಸೋಮಶೇಖರ ನೇಮಕಾತಿ ಪತ್ರ ನೀಡಿದರು.   

ಕಾರ್ಯಕ್ರಮದಲ್ಲಿ ಡಾ.ಡಿ.ಎಂ.ಹಿರೇಮಠ, ಬಸವರಾಜ ಮುಕ್ತಾಮಠ, ಶಶಿಧರ ಸಾಲಿ, ಪಿ.ಎಚ್‌.ನೀರಲಕೇರಿ, ಎಮ್‌.ಎಫ್‌.ಹಿರೇಮಠ, ಬಸಯ್ಯ ಶಿರೋಳ, ಸಿದ್ದಣ್ಣ ಕಂಬಾರ, ಶಿವಯೋಗಿ ಹಪ್ಪಳದ, ಮಾಧುರಿ ಚಿಕ್ಕೋಡಿ, ಡಾ.ರಾಜಶೇಖರ ಬಸೆಟ್ಟಿ, ಗುರುಸಿದ್ಧಪ್ಪ ಬಡಿಗೇರ ಹಾಗೂ ಧಾರವಾಡ ಜಿಲ್ಲಾ ಹಾಗೂ ಎಲ್ಲ ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.