ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ
ಜಮಖಂಡಿ 04: ರೈತರು ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ತಿನ್ನುವ ಆಹಾರ ವಿಷಪುರಿತವಾಗಿ ಮನುಷ್ಯನ ದೇಹ ಸೇರುತ್ತಿದೆ. ಹುಟ್ಟುವ ಪ್ರತಿಯೊಂದು ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ ಎಂದು ಧಾರವಾಡ ಓಷಧ ಮತ್ತು ಆಹಾರ ತಜ್ಞ ಡಾ, ಶ್ರೀಶೈಲ ಬದಾಮಿ ಹೇಳಿದರು.
ತಾಲೂಕಿನ ಮರೇಗುದ್ದಿ ಗ್ರಾಮದಲ್ಲಿ ನಡೆದ ಕೃಷಿ ಇಲಾಖೆ, ಜಿಲ್ಲಾ ಕೃಷಿ ತಂತ್ರಜ್ಞರ ಸಂಸ್ಥೆ, ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಮಿತಿಯ ಸಹಯೋಗದಲ್ಲಿ ಆತ್ಮ ಯೋಜನೆಯಡಿಯಲ್ಲಿ ನಡೆದ ಸಾವಯವ ಕೃಷಿ ಪದ್ಧತಿಗಳ ಕುರಿತು, ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಸರ್ಕಾರದ ವಿವಿಧ ಯೋಜನೆಗಳಡಿ ಸಾವಯವ ಕೃಷಿಗೆ ಸಂಬಂಧಿಸಿದ ಘಟಕಗಳನ್ನು ಅಳವಡಿಸಿಕೊಂಡಲ್ಲಿ ರಾಸಾಯನಿಕಗಳ ಬಳಕೆ ಕಡಿಮೆಯಾಗಿ ಉತ್ತಮ ವಾತಾವರಣದೊಂದಿಗೆ ಕೃಷಿಯನ್ನು ಮಾಡಬಹುದಾಗಿದೆ ಎಂದರು.
ಹುಕ್ಕೇರಿಯ ಕೃಷಿ ಸಂಶೋಧನಾ ಕೇಂದ್ರ ಕಬ್ಬು ವಿಜ್ಞಾನಿ ಡಾ, ಸುನೀಲಕುಮಾರ ನೂಲಿ ಮಾತನಾಡಿ, ಈ ಭಾಗದಲ್ಲಿ ಪ್ರಮುಖ ಬೆಳೆಯಾಗಿದ್ದು ಕಬ್ಬು. ಕಬ್ಬು ನಾಟಿ ಮಾಡುವ ಮುನ್ನ ರೈತರು ತಳಿಗಳ ಆಯ್ಕೆ ಬಗ್ಗೆ ಹೆಚ್ಚಿನ ಮಹತ್ವ ನೀಡಬೇಕು. ಅದರಲ್ಲಿ ಕಬ್ಬು 8,9 ತಿಂಗಳುಳ್ಳ ಕಬ್ಬನ್ನು ಆಯ್ಕೆ ಮಾಡಿ ತುಂಡು ಬೀಜೋಪಚಾರ ಮಾಡುವದು ಹೇಗೆ ಎಂದು ತಿಳಿಸಿದರು.
ತಾಲೂಕು ಮಟ್ಟ ಮತ್ತು ಜಿಲ್ಲಾ ಮಟ್ಟ ಆತ್ಮ ಶ್ರೇಷ್ಟ ಕೃಷಿಕ ಪ್ರಶಸ್ತಿಯನ್ನು ನೀಡಲಾಯಿತು, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಂ, ಎಸ್, ಬುಜರುಖ್ ಪ್ರಾಸ್ತವಿಕ ಮಾತನಾಡಿದರು, ಗುರುಪಾದ ಶ್ರೀಗಳು ದಿವ್ಯಸಾನಿಧ್ಯ ವಹಿಸಿ ಆರ್ಶೀವಚನ ನೀಡಿದರು. ಸಹಾಯಕ ತಾಂತ್ರಿಕ ವ್ಯವಸ್ಥಾಪಕ ನಜೀರ ಜಮಖಂಡಿ ಸ್ವಾಗತಿಸಿದರು, ಸಂಗನಗೌಡ ಪಾಟೀಲ ನಿರೂಪಿಸಿದರು, ಪ್ರವೀಣ ಕೊಪ್ಪದ ವಂದಿಸಿದರು. ಎ,ಬಿ, ತಾಲೂಕಿನ ಮರೇಗುದ್ದಿ ಗ್ರಾಮದಲ್ಲಿ ನಡೆದ ಕೃಷಿ ಇಲಾಖೆ, ಜಿಲ್ಲಾ ಕೃಷಿ ತಂತ್ರಜ್ಞರ ಸಂಸ್ಥೆ, ಅಡವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಸಮಿತಿಯ ಸಹಯೋಗದಲ್ಲಿ ಆತ್ಮ ಯೋಜನೆಯಡಿಯಲ್ಲಿ ನಡೆದ ಸಾವಯವ ಕೃಷಿ ಪದ್ಧತಿಗಳ ಕುರಿತು, ಕೃಷಿ ವಿಚಾರ ಸಂಕೀರಣ ಧಾರವಾಡ ಓಷಧ ಮತ್ತು ಆಹಾರ ತಜ್ಞ ಡಾ, ಶ್ರೀಶೈಲ ಬದಾಮಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು,