ಜಮಖಂಡಿ

ಟಿಪ್ಪು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ನ್ಯಾಮಗೌಡ

ಟಿಪ್ಪು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಶಾಸಕ ನ್ಯಾಮಗೌಡ

ಲೋಕದರ್ಶನ ವರದಿ

ಜಮಖಂಡಿ 21: ದೇಶಕ್ಕೆ ಸ್ವಾತಂತ್ರ್ಯಗಾಗಿ, ಸಮಾನತೆಗೆ ಹೋರಾಟ ಮಾಡಿದ ವೀರರು, ಶೂರರು, ದೇಶ ಪ್ರೇಮಿಗಳ ಜಯಂತಿಗಳನ್ನು ಆಚರಣೆ ಮಾಡುವದರಿಂದ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವದು ಅವಶ್ಯಕತೆ ಇದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ನಡೆದ ಹಜರತ ಟಿಪ್ಪು ಸುಲ್ತಾನ್ ಅವರ 273 ನೇ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಟಿಪ್ಪು ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ಮಾತನಾಡಿದರು.

 ಡಾ.ಬಿ.ಆರ್.ಅಂಬೇಡ್ಕರ್,ಬಸವಣ್ಣನವರ, ಮಹ್ಮದ ಪೈಗಂಬರ, ಭಗವಾನ ಮಹಾವೀರ, ಅನೇಕರು ಜಾತಿ, ಮತ,ಪಂತಗಳನ್ನು ಹೋಗಲಾಡಿಸಿ ಸಮಾತನತೆಗಾಗಿ ಹೋರಾಟವನ್ನು ಮಾಡಿದ ಮಹಾನ ವ್ಯಕ್ತಿಗಳು. ಟಿಪು ಸುಲ್ತಾನ್ ಅವರು ಚಿಕ್ಕ ವಯಸ್ಸಿನಲ್ಲಿ ವೀರ, ಶೂರರಾಗಿದ್ದವರು. ದೇಶಕ್ಕಾಗಿ ಬ್ರೀಟಿಷರ ವಿರುದ್ಧ ಹೋರಾಟ ನಡೆಸಿದ ವ್ಯಕ್ತಿಯಾಗಿದರು. ಆದರೆ ಕಳೆದ ಎಂಟು ವರ್ಷದಲ್ಲಿ ವೀರ ಹೋರಾಟಗಾರನ ಹೆಸರು ತಿರುಚಿ. ಅವರಿಗೆ ಅಪಮಾನ ಮಾಡುತ್ತಿದ್ದಾರೆ. ಅಂತಹವರು ಅವರ ಬಗ್ಗೆ ಇತಿಹಾಸವನ್ನು ತಿಳಿದುಕೊಳ್ಳುವ ಕಾರ್ಯವನ್ನು ಮಾಡಬೇಕು ಎಂದರು.

ಟಿಪ್ಪು ಅವರು ಜನರಿಗೆ ನೀರಿನ ಅನುಕೂಲತೆಗಾಗಿ ಕೆರೆ,ಕಟ್ಟೆಗಳನ್ನು ಕಟ್ಟಿಸಿದವರು. ಕಂದಾಯವನ್ನು ಹೆಚ್ಚಿಸಿ ಸರಕಾರಕ್ಕೆ ಆದಾಯ ಮಾಡಿದರು.ಮೊದಲಿಗೆ ರಾಕೇಟ್ ತಂದವರು ಯಾರಾದರು ಇದ್ದರೆ ಅದು ಟಿಪ್ಪು ಅವರು. ನಾಲ್ಕು ಬಾರಿ ಯುದ್ಧನ್ನು ಮಾಡಿದ ವ್ಯಕ್ತಿ. ಜೀವನದಲ್ಲಿ ಶಿಸ್ತು, ಬದ್ದವನ್ನು ಹೊಂದಿದವರು. ಅವರಂತೆ ಇಂದಿನ ಯುವಕರು ಜೀವನದಲ್ಲಿ ಶಿಸ್ತು,ಬದ್ಧಗಳನ್ನು ಹಾಗೂ ಅವರ ಆದರ್ಶಗಳನ್ನು ಜೀವನ ಅಳವಡಿಕೊಂಡರೆ ಮಾತ್ರ ಜಯಂತಿ ಆಚರಣೆ ಮಾಡಿದಕ್ಕೆ ಸ್ವಾರ್ಥಕತೆಯಾಗುತ್ತದೆ. ಡಿಜೆ ಹಾಡುಗಳನ್ನು ಹಾಕಿ ಕುಣಿದು ಕುಪ್ಪಳಿಸುವ ಬದಲು ಅವರ ಆದರ್ಶಗಳನ್ನು ಪಾಲಿಸಬೇಕು. ಮುಂಬರುವ ಕಾರ್ಯಕ್ರಮದಲ್ಲಿ ಅವರ ಕುರಿತು ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡುವದು ಅವಶ್ಯಕತೆ ಇದೆ. ಕಾರ್ಯಕ್ರಮ ಆಯೋಜಕರಿಗೆ ಕರೆಯನ್ನು ನೀಡಿದರು. 

ಸಲ್ಮಾನ ಪಾರಥಳ್ಳಿ. ಮಾಜಿ ನಗರಸಭೆ ಅಧ್ಯಕ್ಷ ಸಿದ್ದು ಮೀಶಿ. ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ. ಮೌಲಾನಾ ಮಾತನಾಡಿದರು.

ಅಂಜುಮನ್ ಇಸ್ಲಾಂ ಕಮೀಟಿ ಅಧ್ಯಕ್ಷ ಜಾಕೀರ ಹುಸೇನ ನಧಾಪ ಮಾತನಾಡುತ್ತಾ ಟಿಪ್ಪು ಸುಲ್ತಾನ್ ಜಯಂತಿ ದಿನದಂದು ಹಿಂದು, ಮುಸ್ಲಿಂ ಭೇದ ಭಾವಗಳನ್ನು ಮರೆತು ಎಲ್ಲರೂ ಸೇರಿ ಸಹೋದರಂತೆ ಆಚರಣೆ ಮಾಡಲಾಗುತ್ತಿತು. ಆದರೆ ಇಂದಿನ ದಿನಗಳಲ್ಲಿ ಜಾತಿ. ಜಾತಿಗಳ ನಡುವೆ ವಿಷ ಬೀಜಗಳನ್ನು ಬಿತ್ತಿ ಹಿಂದು.ಮುಸ್ಲಿಂ ನಡುವೆ ಕೋಮು ಗಲಭೆಯನ್ನು ಸೃಷ್ಠಿಸುತ್ತಿದ್ದಾರೆ ಎಂದರು.

ಮಾಜಿ ಜವಳಿ ನಿಗಮ ಉಪಾಧ್ಯಕ್ಷ ನಜೀರ ಕಂಗನೋಳ್ಳಿ ಮಾತನಾಡುತ್ತಾ ಪೊಲೀಸ್ ಇಲಾಖೆಯವರು ಎಲ್ಲ ಜಯಂತಿಗಳಿಗೆ ಬ್ಯಾಂಜೋ, ಡಿಜೆಗಳಿಗೆ ಅನುಮತಿ ನೀಡುತ್ತಿದ್ದಾರೆ. ಆದರೆ ಮುಸ್ಲಿಂ ಸಮಾಜದ ಯಾವುದೇ ಕಾರ್ಯಕ್ರಮಗಳು ಹಾಗೂ ಟಿಪ್ಪು ಸುಲ್ತಾನ್ ಅವರ ಜಯಂತಿಗೆ ಅನುಮತಿ ನೀಡಲು ನಿರಾಕರಿಸುತ್ತಿರುವುದು ಸರಿ ಅಲ್ಲ. ಟಿಪ್ಪು ಜಯಂತಿ ದಿನ ಮಾತ್ರ ಕಾನೂನುಗಳು ಅರಿವು ಆಗುತ್ತದೆ. ಉಳಿದ ಜಯಂತಿಗಳ ದಿನದಂದ ಕಾನೂನು ನೆನಪಾಗುವುದಿಲ್ಲ. ಟಿಪ್ಪು ಅವರು ತಮ್ಮ ಆಡಳಿತದಲ್ಲಿ ಬೇಧ ಭಾವ ಮಾಡದೆ. ದೇಶದ ಹೋರಾಟಕ್ಕೆ ಹೋರಾಡಿದ ಮಾಹಾನ ವ್ಯಕ್ತಿಯಾಗಿದ್ದರು. ಇಂದು ಭೇಧ ಭಾವಗಳನ್ನು ಹುಟ್ಟಿಸುತ್ತಿದ್ದಾರೆ. ಪ್ರತಿಯೊಬ್ಬ ಯುವಕರು ಟಿಪ್ಪು ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವುದು ಅವಶ್ಯಕತೆ ಇದೆ. ಡಿಜೆ ಹಾಡುಗಳನ್ನು ಹಾಕಿ ಕುಣಿದು ಕುಪ್ಪಳಿಸುವದನ್ನು ಬಿಡಬೇಕೆಂದು ಸಲಹೆಯನ್ನು ನೀಡಿದರು.

ರಫೀಕ ಬಾರಿಗಡ್ಡಿ, ಮುಬಾರಕ ಅಪರಾದ, ದಿಲಾವರ ಶಿರೋಳ, ಸೋಯಭ ನಂದ್ಯಾಳ, ಸಾಧೀಕ ಬಂಟನೂರ, ದಾವಲ ಅವಟಿ, ಹಾಸೀಮ ಅವಟಿ, ಸೇರಿದಂತೆ ಅನೇಕರು ವೇದಿಯಲ್ಲಿ ಉಪಸ್ಥಿತರಿದ್ದರು.

ಬಾಕ್ಸ್ : ಕಾರ್ಯಕ್ರಮ ಪ್ರಾರಂಭವಾಗುತ್ತಿದಂತೆ ಕೆಲವಂದಿಷ್ಟು ಯುವಕರು ಡಿಜೆ ಗೋಸ್ಕರ ವೇದಿಕೆಯಿಂದ ಎದ್ದು ಹೋಗುತ್ತಿದಂತೆ ನಜೀರ ಕಂಗನೋಳ್ಳಿ. ಜಾಕೀರಹುಸೇನ ನಧಾಪ ಗದ್ದಲ.ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು. ಶಾಸಕ ಮಾತನಾಡುತ್ತಿದಂತೆ ಡಿಜೆ, ಡಿಜೆ ಎಂದು ಕೂಗಾಟ,ಚಿರಾಟ ಮಾಡುತ್ತಿದ್ದ ಯುವಕರು. ನಾನು ಡಿಜೆ ಹಾಕಿ ಅಂತ ಹೇಳಲು ಬಂದಿರುವುದಿಲ್ಲ. ಭಾಷಣ ಮಾಡಲು ಬಂದಿರುವೆ. ನೀವುಗಳು ಎಷ್ಟೇ ಕೂಗಾಟ ನಡೆಸಿದರು ಸಹ ನಾನು ಕೇಳುವುದಿಲ್ಲ ಎಂದು ಖಡಕ್ಕಾಗಿ ಮಾತನಾಡಿದ ಘಟನೆ ನಡೆಯಿತು. 

ಜಾಕೀರ ಹುಸೇನ ನಧಾಪ ಮಾತನಾಡಿ. ಟಿಪ್ಪು ಸುಲ್ತಾನ್ ಜಯಂತಿ ದಿನದಂದು ಹಿಂದು ಮುಸ್ಲಿಂ ಎಲ್ಲರೂ ಕೂಡಿ ಸಹೋದರಂತೆ ಆಚರಣೆ ಮಾಡಲಾಗುತ್ತಿತ್ತು. ಆದರೆ ಇಂದಿನ ದಿನಗಳಲ್ಲಿ ಜಾತಿ.ಜಾತಿಗಳ ವಿಷ ಬೀಜಗಳನ್ನು ಬಿತ್ತಿ ಹಿಂದು.ಮುಸ್ಲಿಂ ನಡುವೆ ಕೋಮು ಗಲಭೆಯನ್ನು ಸೃಷ್ಠಿಸುತ್ತಿದ್ದಾರ.ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಟಿಪ್ಪು ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದರು.

ನಜೀರ ಕಂಗನೋಳ್ಳಿ ಮಾತನಾಡಿ. ಪೋಲಿಸ್ ಇಲಾಖೆಯವರು ಎಲ್ಲ ಜಯಂತಿಗೆ ಅನುಮತಿ ನೀಡುತ್ತಿದ್ದಿರಿ. ಆದರೆ ಟಿಪ್ಪು ಸುಲ್ತಾನ್ ಜಯಂತಿಗೆ ಅನುಮತಿ ನೀಡಲು ನಿರಾಕರಿಸುತ್ತಿರುವುದು ಸರಿ ಅಲ್ಲ. ಎಲ್ಲ ಜಯಂತಿಗಳು ಅದ್ದೂರಿಯಾಗಿ ಆಚರಿಸುತ್ತಾರೆ.ಆದರೆ ಟಿಪ್ಪು ಜಯಂತಿ ದಿನ ಮಾತ್ರ ಕಾನೂನು ಬರುತ್ತದೆ. ಉಳಿದ ಜಯಂತಿಗಳ ಕಾನೂನು ನೆನಪಾಗುವುದಿಲ್ಲ. ಟಿಪ್ಪು ಅವರು ತಮ್ಮ ಆಡಳಿತದಲ್ಲಿ ಬೇಧ ಭಾವ ಮಾಡದ ದೇಶದ ಹೋರಾಟಕ್ಕೆ ಹೋರಾಡಿದ ಮಾಹಾನ ವ್ಯಕ್ತಿಯಾಗಿದ್ದರು. ಇಂದು ಭೇಧ ಭಾವಗಳನ್ನು ಹುಟ್ಟಿಸುತ್ತಿದ್ದಾರೆ. ಪ್ರತಿಯೊಬ್ಬ ಯುವಕರು ಟಿಪ್ಪು ಅವರ ಜೀವನ ಚರಿತ್ರೆಯನ್ನು ತಿಳಿದುಕೊಳ್ಳುವುದು ಅವಶ್ಯಕತೆ ಇದೆ. ಡಿಜೆ ಹಾಡುಗಳನ್ನು ಹಾಕಿ ಕುಣಿದು ಕುಪ್ಪಳಿಸುವದನ್ನು ಬಿಡಬೇಕು ಎಂದು ಸಲಹೆಯನ್ನು ನೀಡಿದರು.

ರಫೀಕ ಬಾರಿಗಡ್ಡಿ. ನಜೀರ ಕಂಗನೊಳ್ಳಿ. ಮುಬಾರಕ ಅಪರಾದ.ದಿಲಾವರ ಶಿರೋಳ. ಜಾಕೀರಹುಸೇನ ನಧಾಪ.ಸೋಯಭ ನಂದ್ಯಾಳ. ಸಾಧೀಕ ಬಂಟನೂರ.ದಾವಲ ಅವಟಿ .ಹಾಸೀಮ ಅವಟಿ.ಸೇರಿದಂತೆ ಅನೇಕರು ವೇದಿಯಲ್ಲಿ ಉಪಸ್ಥಿತರಿದ್ದರು. 

ಸುದ್ದಿ ಓದಿ