ಅಮದಳ್ಳಿ , ಮಲ್ಲಾಪುರದಲ್ಲಿ ಅಬಕಾರಿ ದಾಳಿ : ಪ್ರಕರಣ ದಾಖಲು
Abakari daali
ಅಮದಳ್ಳಿ , ಮಲ್ಲಾಪುರದಲ್ಲಿ ಅಬಕಾರಿ ದಾಳಿ : ಪ್ರಕರಣ ದಾಖಲು
ಕಾರವಾರ, ಅಗಸ್ಟ್ 24 :ತಾಲೂಕಿನ ಮಲ್ಲಾಪೂರ ಗ್ರಾಮ ಹಾಗೂ ಅಮದಳ್ಳಿಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮಾಡಿ 1.75 ಲಕ್ಷಕ್ಕೂ ಹೆಚ್ಚನ ಮೊತ್ತದ ಮದ್ಯ ವಶಪಡಿಸಿಕೊಂಡಿದ್ದಾರೆ. ಲಕ್ಷ್ಮೀ ನಗರದಲ್ಲಿರುವ ಪಣೀಕರ ಎಂಬುವವರ ಮಾಲಿಕತ್ವದಲ್ಲಿದ್ದ ತಗಡಿನ ಶೆಡ್ಡಿನಲ್ಲಿ ಅಬಕಾರಿ ತಂಡವು ಇತ್ತಿಚಿಗೆ ದಾಳಿ ನಡೆಸಿ, ಗೋವಾ ರಾಜ್ಯದ ಮದ್ಯವನ್ನು ಅಕ್ರಮವಾಗಿ ಮಾರಾಟ ಮಾಡಲು ದಾಸ್ತಾನಿಸಿಟ್ಟಿರುವುದನ್ನು ಜಪ್ತು ಪಡಿಸಿಕೊಂಡಿದೆ.
ಅಂದಾಜು 85,302 ಮೌಲ್ಯದ 183.960 ಲೀಟರ್ ಗೋವಾ ಮದ್ಯ ಹಾಗೂ 99.000 ಲೀಟರ್ ಗೋವಾ ಫೆನ್ನಿಯನ್ನು ವಶಪಡಿಸಿಕೊಂಡಿರುತ್ತದೆ. ಅದೇ ರೀತಿ ಅಮದ್ದಳ್ಳಿ ಗ್ರಾಮ ಗಾಂವಕ್ಕರವಾಡದ ವಿಷ್ಣು ಅನಂತ ತಳೆಕರ ಇವರ ಮನೆಯ ಹಿಂದುಗಡೆ ಇರುವ ಶೆಡ್ಡಿನಲ್ಲಿ ದಾಳಿ ನಡೆಸಿ ಅಂದಾಜು 90,300 ಮೌಲ್ಯದ 203.400 ಲೀಟರ್ ಗೋವಾ ಮದ್ಯ 40.000 ಲೀಟರ್ ಗೋವಾ ಬಿಯರ್‍ನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರು ತಲೆಮರಿಸಿಕೊಂಡಿರುತ್ತಾರೆ.
ಈ ಬಗ್ಗೆ ಕಾರವಾರ ವಲಯದ ಅಬಕಾರಿ ನಿರೀಕ್ಷಕರು ಈ ಎರಡೂ ಪ್ರಕರಣಗಳನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ. ದಾಳಿ ಸಂದರ್ಭದಲ್ಲಿ ಅಬಕಾರಿ ನಿರೀಕ್ಷಕರಾದ ಗಣೇಶ ನಾಯ್ಕ ಅಧಿನ ಸಿಂಬ್ಬಂದಿಗಳಾದ ಪ್ರವೀಣ ಕುಮಾರ ಕಲ್ಲೋಳಿ, ಶಿವಾನಂದ ಕೋರಡ್ಡಿ, ನಾಗರಾಜ ಹೂವಿನಾಳ, ವಿರೇಶ ಕುರಿ, ವಾಹನ ಚಾಲಕರಾದ ರವಿಚಂದ್ರ ನಾಯ್ಕ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 