ಮುಧೋಳ

ಪದವಿ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಎಬಿವಿಪಿ ಮನವಿ

ಪದವಿ ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಎಬಿವಿಪಿ ಮನವಿ
ಬೆಳಗಾವಿ ಆರ್‍ಸಿಯು ವ್ಯಾಪ್ತಿಯ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ಮುಧೋಳ ಎಸ್.ಆರ್.ಕಂಠಿ ಕಾಲೇಜಿನ ಪ್ರಾಚಾ

ಮುಧೋಳ 06 : ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಎಬಿವಿಪಿ ಕಾರ್ಯಕರ್ತರು ಬೆಳಗಾವಿ ಆರ್.ಸಿ.ಯು ಕುಲಪತಿಗಳನ್ನು ಆಗ್ರಹಿಸಿದ್ದಾರೆ.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಧೋಳ ತಾಲೂಕಾ ಘಟಕದ ಪದಾ„ಕಾರಿಗಳು ಮುಧೋಳದ ಎಸ್.ಆರ್.ಕಂಠಿ ಕಾಲೇಜಿನ ಪ್ರಾಚಾರ್ಯ ಡಾ.ಜಗನ್ನಾಥ ವ್ಹಿ.ಚವ್ವಾಣ ಅವರ ಮೂಲಕ ಬೆಳಗಾವಿ ಆರ್.ಸಿ.ಯು ಕುಲಪತಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾರ್ಚ 15ರಿಂದ ಬೆಳಗಾವಿ ಆರ್.ಸಿ.ಯು ವ್ಯಾಪ್ತಿಯ ಎಲ್ಲ ಪದವಿ ಕಾಲೇಜುಗಳ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ವೇಳಾಪಟ್ಟಿ ಹೊರಡಿಸಿದೆ ಆದರೆ ಮಾರ್ಚ 17ರಿಂದ 27ರ ವರೆಗೆ ಸೇನಾ ನೇಮಕಾತಿ ರ‍್ಯಾಲಿ ನಡೆಯುತ್ತಿರುವ ಕಾರಣ ನೂರಾರು ವಿದ್ಯಾರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ ಇದರಿಂದ ವಿದ್ಯಾರ್ಥಿ ಗಳು ಪರೀಭೆ ಬರೆಯಲು ತೊಂದರೆಯಾಗುತ್ತದೆ ಹೀಗಾಗಿ ಬೆಳಗಾವಿ ಆರ್.ಸಿ.ಯು ಕುಲಪತಿಗಳು ಈ ಎಲ್ಲ ವಿಷಯವನ್ನು ಹಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಮುಂದೂಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಧೋಳ ತಾಲೂಕಾ ಘಟಕವು ನೀಡಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಇಲಾಖೆಯು ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಪರೀಕ್ಷೆಗಳು ಏಕಕಾಲಕ್ಕೆ ನಡೆಯುತ್ತಿವೆ,ತರಗತಿಗಳು ಮಾರ್ಚ 31ರ ವರೆಗೆ ನಡೆಯಲಿವೆ ಎಂಬ ಹೇಳಿಕೆಯನ್ನು ಗಮನದಲ್ಲಿ ಇಟ್ಟುಕೊಳ್ಳುವಂತೆ ಎಬಿವಿಪಿ ನೀಡಿರುವ ಮನವಿಯಲ್ಲಿ ಹೇಳಿದ್ದಾರಲ್ಲದೆ ಕಳೆದ ಕೆಲ ದಿನಗಳಿಂದ ಕಾಲೇಜು ಪ್ರಾರಂಭವಾದರು ಸಹಿತ ಕೋವಿಡ್-19ರ ನಿಯಮಾವಳಿಗಳಿಂದ ತರಗತಿಗಳು ಸರಿಯಾಗಿ ನಡೆದಿಲ್ಲ ಹಾಗೂ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ತಡವಾದ ಕಾರಣ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಪೂರ್ಣ ಪ್ರಮಾಣದ ವಿಷಯದ ಪಠ್ಯಕ್ರಮ ಬೋಧನೆ ಆಗಿರುವದಿಲ್ಲವೆಂದು ಮನವಿಯಲ್ಲಿ ತಿಳಿಸಲಾಗಿದೆ ಎಂದು ಎಬಿವಿಪಿ ನಗರ ಕಾರ್ಯದರ್ಶಿ ಭೂಷಣ ಖಟಾವಕರ ಹೇಳಿದ್ದಾರೆ.

ಕಾಲೇಜಿನ ಪ್ರಾಚಾರ್ಯ ಡಾ.ಜೆ.ವ್ಹಿ.ಚವ್ಹಾಣ ಎಬಿವಿಪಿ ಸಂಘಟನೆಯ ಕಾರ್ಯಕರ್ತರು ನೀಡಿರುವ ಮನವಿ ಪತ್ರ ಸ್ವಿಕರಿಸಿ ಮಾತನಾಡಿ ತಾವು ನೀಡಿರುವ ಮನವಿ ಪತ್ರವನ್ನು ಈ ಕೂಡಲೇ ಬೆಳಗಾವಿ ಆರ್.ಸಿ.ಯು ಕುಲಪತಿಗಳನ್ನು ಕಳಿಸುವದಾಗಿ ತಿಳಿಸಿದರು.

ಎಬಿವಿಪಿ ನಗರ ಘಟಕ ಅಧ್ಯಕ್ಷ ಸತೀಶ ಸಾರವಾಡ, ತಾಲೂಕಾ ಸಂಚಾಲಕ ಕೇಶವ ಬಡಿಗೇರ,ನಗರ ಕಾರ್ಯದರ್ಶಿ ಭೂಷಣ ಖಟಾವಕರ, ಕಾರ್ಯಕರ್ತರಾದ ಆನಂದ ಆಲಬಾಳ,ಚೇತನ ಹೂಗಾರ,ಸಂಜು ತುಂಗಳ, ಸುನೀಲ ರಾಠೋಡ, ಶ್ರೀಕಾಂತ ಬಳ್ಳೂರ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ