ಕಂಡೆ ಮೀನು ಚುಚ್ಚಿದ ಪರಿಣಾಮ ಯುವಕನ ಸಾವು
A young man died after being bitten by a stingray
ಕಂಡೆ ಮೀನು ಚುಚ್ಚಿದ ಪರಿಣಾಮ ಯುವಕನ ಸಾವು
ಕಾರವಾರ 16 : ಕಾರವಾರ ಸಮೀಪದ ಮಾಜಾಳಿ ದಂಡೇಭಾಗ್ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಂಡೆ ಜಾತಿಯ ಮೀನು ಚುಚ್ಚಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅಕ್ಷಯ್ ಅನಿಲ್ ಮಜಾಳಿಕರ್ ( 24) ಸಾವನ್ನಪ್ಪಿದ್ದಾರೆ.ಅಕ್ಟೋಬರ್ 14 ಮಂಗಳವಾರ ಅಕ್ಷಯ್ ಪಾತಿ ದೋಣಿಯಲ್ಲಿ ಮೀನುಗಾರಿಕೆಗೆ ಹೋಗಿದ್ದಾಗ 8-10 ಇಂಚುಗಳಷ್ಟು ಉದ್ದದ ಕಂಡೆ (ಸಕ್ಕರ್ ಮೀನು) ಮೀನು ತೀಕ್ಷ್ಣವಾದ ಮುಳ್ಳಿನ ರೀತಿ ಮೊನಚಾದ ಮೂಗಿನ ಮೀನು ಸಮುದ್ರ ನೀರಿನಿಂದ ಹಾರಿ ಅಕ್ಷಯ ಹೊಟ್ಟೆಗೆ ಚುಚ್ಚಿತು. ಮೀನಿನ ತೀಕ್ಷ್ಣವಾದ ಮೂತಿಯಿಂದ ತಿವಿದ ಕಾರಣ ಅಕ್ಷಯಗೆ ತೀವ್ರವಾದ ಗಾಯವಾಗಿತ್ತು. ಅವರ ಕರುಳುಗೆ ತೀವ್ರ ಹಾನಿಯಾಗಿ ಆಂತರಿಕ ಬ್ಲೀಡಿಂಗ್ ಆಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ . ಅಕ್ಷಯ್ ಅವರನ್ನು ತಕ್ಷಣವೇ ಕಾರವಾರದ ಕ್ರಿಮ್ಸ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರಿಗೆ ಎರಡು ದಿನಗಳ ಕಾಲ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರು ಅವರ ಗಾಯಗಳಿಗೆ ಹೊಲಿಗೆ ಹಾಕಿ ಡಿಸ್ಚಾರ್ಜ್ ಮಾಡಿದ್ದರು . ಆದರೆ ನಿರಂತರ ನೋವಿನಿಂದಾಗಿ ಅಕ್ಷಯ ಅವರು ಆಸ್ಪತ್ರೆಯಲ್ಲಿಯೇ ಉಳಿದಿದ್ದರು. ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಅಕ್ಷಯ್ ಸಾವನ್ನಪ್ಪಿದ್ದಾರೆ . ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯವೇ ಅಕ್ಷಯ ಸಾವಿಗೆ ಕಾರಣ ಎಂದು ಅಕ್ಷಯ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 