ಸ್ಥಗಿತಗೊಂಡ ಜಮಖಂಡಿ ಶುಗರ್ಸ್ ಕಾರ್ಖಾನೆಯನ್ನು ಪ್ರಾರಂಭಿಸುವಂತೆ ಮನವಿ
ಜಮಖಂಡಿ 18: ನಗರದ ದೇಸಾಯಿ ವೃತ್ತದಲ್ಲಿ ಕೃಷ್ಣಾ ತೀರ ರೈತ ಸಂಘದಿಂದ ಮಾನವ ಸರಪಳಿಯಿಂದ ಕೆಲಕಾಲ ರಸ್ತೆ ತಡೆಯನ್ನು ನಡೆಸಿ, ಸ್ಥಗಿತಗೊಂಡ ಜಮಖಂಡಿ ಶುಗರ್ಸ್ ಮತ್ತು ಉಳಿದ ಕಾರ್ಖಾನೆಗಳನ್ನು ಕೂಡಲೇ ಮರಳಿ ಪ್ರಾರಂಭಿಸಬೇಕೆಂದು ಸರಕಾರವನ್ನು ಒತ್ತಾಯಿಸಿ, ತಹಸೀಲ್ದಾರ ಸದಾಶಿವ ಮಕ್ಕೋಜಿ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ರೈತ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ಪ್ರಸಕ್ತ ಸಾಲಿನ 2022-23 ನೇ ಹಂಗಾಮಿಗಾಗಿ ಪೂರೈಕೆಯಾಗುವ ಜಮಖಂಡಿ ಶುಗಸರ್್ ಆಡಳಿತ ಮಂಡಳಿ ಪ್ರತಿ ಟನ್ಗೆ ರೂ.2800 ದರದಂತೆ ನೀಡಲು ಒಪ್ಪಿಕೊಂಡಿದೆ. ಅದರಂತೆ ನಾವು ನಿಗದಿ ಪಡಿಸಿದ ಕಬ್ಬಿನ ಬಿಲ್ಲ ಸ್ವೀಕರಿಸಲು ಒಪ್ಪಿಕೊಂಡಿದ್ದೇವು. ಅಕ್ಟೋಬರ್,22 ರಲ್ಲಿ ಕಬ್ಬು ಪೂರೈಸಿದ ಎಲ್ಲ ರೈತರಿಗೆ ಹಣ ಸಂದಾಯ ಮಾಡಿದ್ದು ನಮಗೆಲ್ಲ ಖುಷಿಯಾಗಿದೆ. ಕಾಖರ್ಾನೆಯು ಪ್ರಾರಂಭವಾಗಿನಿಂದ ಇವರೆಗೆ ಆಡಳಿತ ಮಂಡಳಿ ಘೋಷಣೆ ಮಾಡಿದ ಪ್ರತಿ ಬಿಲ್ಲಗಳನ್ನು ಕೊಡುತ್ತಾ ಬಂದಿದೆ. ಕಾರ್ಖಾನೆಯ ಹಳೆಯ ಯಾವುದೇ ಬಿಲ್ಲ ಕೊಡುವುದು ಬಾಕಿ ಉಳಿಸಿಕೊಂಡಿರುವುದಿಲ್ಲ. ಇದರಿಂದಾಗಿ ನಮಗೆ ಕಾರ್ಖಾನೆಯ ಮೇಲೆ ಸಂಪೂರ್ಣ ವಿಶ್ವಾಸವಿರುತ್ತದೆ ಎಂದರು.
ಒಂದು ವೇಳೆ ಕಾರ್ಖಾನೆಯನ್ನು ಸ್ಥಗಿತ ಮಾಡುವುದರಿಂದ ಬಿಸಿಲು ಹೆಚ್ಚಾಗಿ ಕಬ್ಬು ಕಟಾವು ಆಳುಗಳ ಲಭ್ಯತೆಯು ಕಡಿಮೆಯಾಗಿ ನಮಗೆ ಕಟ್ಟು ಕಟಾವು ಮಾಡಲು ಅತೀವ ತೊಂದರೆಯಾಗುತ್ತದೆ. ಹಾಗೂ ಪ್ರತಿ ಗ್ಯಾಂಗಿಗೆ ಹತ್ತರಿಂದ ಹದಿನೈದು ಲಕ್ಷ ಮುಂಗಡ ಹಣ ಕೊಟ್ಟು ನಾವು ತಂದಿರುವ ಕಟ್ಟು ಕಟಾವು ಮಾಡುವ ಕೂಲಿಗಾರರಿಗೆ, ಟ್ರ್ಯಾಕ್ಟರ್ ಮಾಲಕರಿಗೆ ಹಾಗೂ ರೈತರಿಗೆ ತೀವ ಹಾನಿಯಾಗುತ್ತಿದೆ. ಕಾಖರ್ಾನೆಯನ್ನು ಬೇಗನೆ ಪ್ರಾರಂಭ ಮಾಡುವುದರಿಂದ ನಮ್ಮ ಕಬ್ಬು ಬೇಗನ ಕಟಾವಾಗಿ ಕಾಖರ್ಾನೆಗೆ ಪೂರೈಕೆಯಾಗಿ ನಮಗೆ ಕಬ್ಬಿನ ಬಿಲ್ಲ ಬೇಗನೆ ಸಂದಾಯವಾಗುತ್ತದೆ. ಕಾಖರ್ಾನೆ ಪ್ರಾರಂಭ ಮಾಡದೆ ಹೋದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದರು.

ಶಾಸಕರ ನಿವಾಸದ ಮುಂದೆ ಪ್ರತಿಭಟನೆ : ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಅವರ ನಿವಾಸದ ಮುಂದೆ. ಕೃಷ್ಣಾ ತೀರ ರೈತ ಸಂಘದವರು ಕಾರ್ಖಾನೆಯನ್ನು ಇಂದೇ ಪ್ರಾರಂಭಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆಯನ್ನು ನಡೆಸಿ, ಶಾಸಕ ಆನಂದ ನ್ಯಾಮಗೌಡ ಅವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಶಾಸಕ, ಕಾಖರ್ಾನೆಯ ಆಡಳಿತ ಮಂಡಳಿಯ ಜೊತೆ ಚಚರ್ಿಸಿ ಬೇಗನೆ ಪ್ರಾರಂಭ ಮಾಡುವದಾಗಿ ಭರವಸೆಯನ್ನು ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆದರು.
ಇದೇ ಸಂಧರ್ಭದಲ್ಲಿ ಅಜರ್ುನ ದಳವಾಯಿ, ವರ್ಧನಮಾನ ನ್ಯಾಮಗೌಡ, ಕಲ್ಲಪ್ಪ ಗಿರಡಿ, ಅಣ್ಣಪ್ಪ ಶಿರಟ್ಟಿ, ಸುಭಾಸ ಪಾಟೋಳೆ, ನಿಂಗಪ್ಪ ಕಡಪಟ್ಟಿ, ಬಸು ಇಟ್ಟಿ, ಪ್ರಕಾಶ ಕನಬೂರ, ಹೂವ್ವಪ್ಪ ಉಷಾಕರ, ನಾಗಪ್ಪ ಹೆಗಡೆ, ಧರೇಪ್ಪ ಮಂಟೂರ, ಸಂಜು ಗಪ್ಪರಿ, ಸಿದ್ದು ಕುರಣಿ, ಹಣಮಂತ ಲಿಗಾಡಿ, ಕಾಸು ಸನದಿ, ಬಾಹುಬಲಿ ಆಲಗೂರ, ಮಾದೇವ ಮೂಡಲಗಿ, ಭರತೇಶ ಖೀದ್ರಾಪೂರ, ಅಪ್ಪಣ್ನಹಸರಡ್ಡಿ, ಶಾಂತು ಗುಬ್ಬಚಿ, ಮಾಳಾಪ್ಪ ತುಬ್ಬಚಿ, ರಮೇಶ ತೇಲಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.