ಹುಣಶ್ಯಾಳದಲ್ಲಿ ಸುಂಗಠಾಣ ಸಿದ್ದೇಶ್ವರ ಪಲ್ಲಕ್ಕಿ ಉತ್ಸವಕ್ಕೆ ಅದ್ದೂರಿ ಸ್ವಾಗತ
A grand welcome to the Sungathana Siddeshwara Palakki Utsav in Hunashyal
ದೇವರಹಿಪ್ಪರಗಿ 07 : ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಸುಗುಂಟಾಣ (ಸುಂಗಠಾಣ) ಸಿದ್ದೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಡೊಳ್ಳು ಕುಣಿತ, ಬಾಜಿ ಭಜಂತ್ರಿ ವೈಭವಗಳೊಂದಿಗೆ ಅದ್ದೂರಿಯಾಗಿ ಪಲ್ಲಕ್ಕಿ ಮೆರವಣಿಗೆಗೆ ಗ್ರಾಮಸ್ಥರು ಸ್ವಾಗತಿಸಿದರು. ಶುಕ್ರವಾರ ಸಾಯಂಕಾಲ ಪುರ ಪ್ರವೇಶ ಮಾಡಿದ ಪವಾಡ ಸಿದ್ದೇಶ್ವರನ ಪಲ್ಲಕ್ಕಿ ಉತ್ಸವವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಜರುಗಿ ಭಕ್ತರ ಸಡಗರಕ್ಕೆ ಕಾರಣವಾಯಿತು. ಸುಂಗಠಾಣ ಪವಾಡ ಸಿದ್ದೇಶ್ವರ ಭಕ್ತರ ಪಾಲಿನ ಇತಿಹಾಸವಾಗಿದ್ದಾರೆ. ಸುಮಾರು 6ತಾಲೂಕು 3ಜಿಲ್ಲೆಗಳಲ್ಲಿ ಹಾದು ಹೋಗುವ ಪಲ್ಲಕ್ಕಿ ಉತ್ಸವ ಸುಮಾರು 15 ದಿನಗಳ ಕಾಲ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡ ಕೂಡಲಸಂಗಮದಲ್ಲಿ ಗಂಗಾ ಸ್ಥಾನ ಮಾಡುವ ಮೂಲಕ ಯುಗಾದಿ ಹಬ್ಬಕ್ಕೆ ಆಗಮಿಸುತ್ತಾರೆ.
ಶುಕ್ರವಾರ ಸಾಯಂಕಾಲ 4ಗಂಟೆಗೆ ಗ್ರಾಮದ ಗುತ್ತಪ್ಪಗೌಡ ಕೋಟಿಖಾನಿ ಅವರ ತೋಟದಲ್ಲಿ ಪ್ರಸಾದ ಸೇವೆಗೈದು ಹಾಡಕಿ ಹೇಳುವ ಸಾಂಪ್ರದಾಯ. ನಂತರ ಗ್ರಾಮದ ಗುಂಡನಬಾವಿ ಹತ್ತಿರ ವಿಶ್ರಾಂತಿ ಪಡೆದು, ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಕೋರಿ ಬಸ್ ನಿಲ್ದಾಣದ ಹತ್ತಿರ ಪ್ರಸಾದ ಹಾಗೂ ಸಾರ್ವಜನಿಕರಿಗೆ ದರ್ಶನ ನೀಡುವುದು ಹಾಗೂ ಹಾಡಕಿ, ಡೊಳ್ಳಿನ ಪದಗಳು ವಾಲಗ ಬಲ ಜೋರಾಗಿ ನಡೆಯುತ್ತದೆ ನಂತರ ಸುಂಗಠಾಣ ಸಿದ್ದೇಶ್ವರರ ಹೆಳಕಿ ಬರುವಂತ ದಿನಗಳಲ್ಲಿ ಮುಂಗಾರು,ಹಿಂಗಾರು ಮಳೆಗಳ ಬಗ್ಗೆ (ಕಾರ್ಣಿಕ) ನುಡಿಯುವವರು. ಶನಿವಾರ ಸೂರ್ಯೋದಯಕ್ಕಿಂತ ಮುಂಚೆ ಗ್ರಾಮದಿಂದ ಪಡೇಕನೂರ ಮಾರ್ಗವಾಗಿ ಕೂಡಲಸಂಗಮಕ್ಕೆ ಪಲ್ಲಕ್ಕಿ ಉತ್ಸವದ ಪಾದಯಾತ್ರೆ ಜರುಗುವುದು.ಇದೇ ಸಂದರ್ಭದಲ್ಲಿ ಹುಣಶ್ಯಾಳ ಗ್ರಾಮಸ್ಥರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 