ಅಂತರರಾಷ್ಟ್ರೀಯ

ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೋ ದುಬೆ ಅಂತಿಮ ವಿದಾಯ

ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೋ ದುಬೆ ಅಂತಿಮ ವಿದಾಯ

ಟೋಕಿಯೋ: ಜುಲೈ 12 : ಜಪಾನ್ ಮಾಜಿ ಪ್ರಧಾನ ಮಂತ್ರಿ ಶಿಂಜೋ ದುಬೆ ಅವರಿಗೆ ಮಂಗಳವಾರ ನಾಗರೀಕರು ಅಂತಿಮ ವಿದಾಯ ಸಲ್ಲಿಸಿದರು.

ಶುಕ್ರವಾರ ಚುನಾವಣಾ ಪ್ರಚಾರದ ಭಾಷಣ ವೇಳೆ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಹತ್ಯೆಗೈದಿದ್ದರು. ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.

ಜೊಜೊಜಿ ದೇವಸ್ಥಾನ ಬಳಿ ಅಂತಿಮ ಸಂಸ್ಕಾರ ನಡೆದಿದ್ದು, ಪತ್ನಿ ಅಕಿ ದುಬೇ ಇತರ ಕುಟುಂಬ ಸದಸ್ಯರು ಮತ್ತು ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಪಕ್ಷದ ಹಿರಿಯ ನಾಯಕರು ಮಾತ್ರ ಭಾಗವಹಿಸಿದ್ದರು. ನಾಗರೀಕರು ತಮ್ಮ ನೆಚ್ಚಿನ ನಾಯಕನಿಗೆ ಕೈ ಬೀಸಿ ವಿದಾಯ ಹೇಳಿದರು. ಇನ್ನು ಕೆಲವರು ತಮ್ಮ ಮೊಬೈಲ್ ನಲ್ಲಿ ಅಂತಿಮಯಾತ್ರೆಯನ್ನು ಸೆರೆಹಿಡಿದರು. ‘

ಶವ ವಾಹನವು ಪಕ್ಷದ ಪ್ರಧಾನ ಕಛೇರಿಯಾದ ನಾಗತಾ-ಚೋ ಕಡೆಗೆ ಸಾಗಿತು. ಅಲ್ಲಿ ಅಬೆ ಅವರು 1991 ರಲ್ಲಿ ಮೊದಲ ಬಾರಿಗೆ ಆಯ್ಕೆಯಾದಾಗಿನಿಂದ ಮೂರು ದಶಕಗಳಿಗೂ ಹೆಚ್ಚು ಕಾಲ ಕಳೆದರು.

ಸುದ್ದಿ ಓದಿ