ಜಮಖಂಡಿ

ಕ್ಷುಲಕ ಕಾರಣಕ್ಕೆ ಯುವಕ ಮಧ್ಯೆ ಗಲಾಟೆ: ಇಬ್ಬರಿಗೆ ಗಾಯ

ಕ್ಷುಲಕ ಕಾರಣಕ್ಕೆ ಯುವಕ ಮಧ್ಯೆ ಗಲಾಟೆ: ಇಬ್ಬರಿಗೆ ಗಾಯ

ಜಮಖಂಡಿ 24: ನಗರದ ರಾಮದೇವ ಗಲ್ಲಿಯಲ್ಲಿ ಯುವಕರು ಕ್ಷುಲಕ ಕಾರಣಕ್ಕೆ ಬಡಿದಾಡಿಕೊಂಡ ಹಿನ್ನಲೆಯಲ್ಲಿ ತಲೆಗೆ ಮತ್ತು ಮುಖಭಾಗಕ್ಕೆ ಗಂಭೀರ ಗಾಯಗೊಂಡು ಇಬ್ಬರು ಯುವಕರು ಸರಕಾರಿ ಆಸ್ಪತ್ರೆ ಮತ್ತೊರ್ವನು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. 

ನಗರದ ರಾಮದೇವ ಗಲ್ಲಿಯಲ್ಲಿ ಯುವಕನೊರ್ವನ ಜೊತೆಗೆ ಮಾತಿಗೆ ಮಾತು ಬೆಳೆದುಕೊಂಡು ವಿಕೋಪಕ್ಕೆ ತಿರುಗಿ. ಕಲ್ಲುಗಳಿಂದ ಬಡಿದಾಡಿಕೊಂಡು. ಓರ್ವ ಯುವಕನಿಗೆ ಮುಖಭಾಗಕ್ಕೆ ಗಂಭೀರ ಗಾಯಗೊಂಡು ರಕ್ತಸಾವ್ರದಲ್ಲಿ ಇರುವಷ್ಟರಲ್ಲಿ. ಇಬ್ಬರಿಗೆ ತಲೆಭಾಗಕ್ಕೆ ಹಾಗೂ ಕೈಗಳಿಗೆ ಗಂಭೀರ  ಗಾಯಗೊಂಡ ಪರಿಸ್ಥಿತಿಯಲ್ಲಿ ಸ್ಥಳೀಯರು ಸೇರಿ ಸರಕಾರಿ ಆಸ್ಪತ್ರೆಗೆ ಕರೆದೊದ್ದು ಚಿಕಿತ್ಸೆಯ ಕೊಡಿಸಿದ್ದಾರೆ. ಗಂಭೀರ ಗಾಯಗೊಂಡ ಮತ್ತೊರ್ವ ಯವಕನನ್ನು ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ. 

ಗಾಯಗೊಂಡ ಯುವಕರು ಸರಕಾರಿ ಆಸ್ಪತ್ರೆಗೆ ದಾಖಲಾಗುತ್ತಿದಂತೆ ಎರಡು ಗುಂಪಿನ ನೂರಾರು ಯುವಕರು ಜಮಾಯಿಸಿಕೊಂಡು. ಆಸ್ಪತ್ರೆಯಲ್ಲಿ ಮತ್ತೇ ಗಲಾಟೆ ಮಾಡುವ ಸಮಯದಲ್ಲಿ ಶಹರ ಪೋಲಿಸರು ಸ್ಥಳಕ್ಕೆ ಆಗಮಿಸಿ ಎಲ್ಲರನ್ನು ಚದುರಿಸಿ ಶಾಂತಗೊಳಿಸಿದರು ಸಹ ಬುದ್ದಿಮುಚ್ಚಿದ ಕೆಂಡದಂತೆ ಇರುತ್ತದೆ. ಸರಕಾರಿ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆ ಮುಂದೆ ಮತ್ತೇ ಗಲಾಟೆ ನಡೆಯದಂತೆ ಮುಂಜಾಗ್ರತ ಕ್ರಮವಾಗಿ ಪೋಲಿಸರು ಬಂದೋಬಸ್ತ್‌ನಲ್ಲಿ ಬಿಡಾರ ಹೂಡಿ ತನಿಖೆಯನ್ನು ಮುಂದುವರಿಸಿದ್ದಾರೆ. 


ಸುದ್ದಿ ಓದಿ