ಮುಧೋಳದಲ್ಲಿ ಪತ್ರ ಚಳುವಳಿ ಕಾಮಗಾರಿ ಆರಂಭವಾಗದಿದ್ದರೆ ಉಗ್ರ ಹೋರಾಟ: ಖಾಜಿ
ಮುಧೋಳ : ರೇಲ್ವೆ ಮಾರ್ಗ ಕಾಮಗಾರಿ ಆರಂಭಕ್ಕೆ ಆರಂಭಿಸಿರುವ ಪತ್ರ ಚಳುವಳಿಗೆ ಸರ್ಕಾರ ಕಿವಿಗೊಡದಿದ್ದರೆ ಬೆಳಗಾವಿ ಸುವರ್ಣಸೌಧ ದಲ್ಲಿ ನಡೆಯುವ ಅಧಿವೇಶನ ಮುಗಿಯುವದರೊಳಗೆ ಜಿಲ್ಲೆಯಾದ್ಯಂತ ಉಗ್ರ ಸ್ವರೂಪದ ಹೋರಾಟ ಮಾಡಲಾಗುವದು ಎಂದು ರಾಜ್ಯ ರೇಲ್ವೆ ಹೋರಾಟ ಸಮಿತಿಯ ಅಧ್ಯಕ್ಷ ಕುತ್ಬುದ್ದೀನ್ ಖಾಜಿ ಹೇಳಿದರು.
ಮಂಗಳವಾರ ನಗರದ ಅಂಬೇಡ್ಕರ್ ಸರ್ಕಲ್ ಹತ್ತಿರದ ಹಳೆ ಸರ್ಕಾರಿ ಅಸ್ಪತ್ರೆಯ ಪಕ್ಕದಲ್ಲಿ ನಡೆದ ಹೋರಾಟ ಸಭೆ ಹಾಗೂ ಪತ್ರ ಚಳುವಳಿ ಉದ್ದೇಶಿಸಿ ಮಾತನಾಡಿದರು. ಖಜ್ಜಿಡೋಣಿ ಯವರೆಗೆ ಮಾತ್ರ ಪೂರ್ಣಗೊಂಡ ಬಾಗಲಕೋಟೆ ರೈಲ್ವೆ ಮಾರ್ಗದ ಕಾಮಗಾರಿ ಪೂರ್ಣ ಪ್ರಮಾಣದ ಕಾಮಗಾರಿ ಪ್ರಾರಂಭಿಸಿ ಎಂದು ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಪತ್ರ ಹಮ್ಮಿಕೊಳ್ಳಲಾಗಿದೆ, ಕಳೆದ ಹತ್ತು ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸಲು ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಹೋರಾಟದ ಮುಖಾಂತರ ಗಮನಿಸಿದರು ಸಹ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ರೈಲ್ವೆ ಅಧಿಕಾರಿಗಳ ಮಲತಾಯಿ ಧೋರಣೆಯಿಂದ ರೈಲ್ವೆ ಮಾರ್ಗ ಖಜ್ಜಿಡೋಣಿ ಅವರಿಗೆ ಮಾತ್ರ ಪೂರ್ಣಗೊಂಡಿದೆ ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ವಿಷಯದ ಕುರಿತು ಚರ್ಚಿಸಿ ಮುಂದಿನ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು ಸರ್ಕಾರಕ್ಕೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಪತ್ರವಳಿ ಹಮ್ಮಿಕೊಳ್ಳಲಾಗಿದೆ ಸರಕಾರ ಆದಷ್ಟು ಬೇಗ ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪ್ರಾರಂಭಿಸಬೇಕು ಇಂದು ನಗರದಲ್ಲಿ ಮೂರು ಸಾವಿರ ಪತ್ರಗಳನ್ನು ಬರೆದು ಸಂಬಂಧಿಸಿದ ಅಧಿಕಾರಿಗಳಿಗೆ ಕಳಿಸಲಾಗಿದ್ದು ನಾಳೆ ಬೆಲಿಗ್ಗೆ 10-30ಕ್ಕೆ ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ನಡೆಸಲಾಗುವದು ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ್ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಜೆಪಿಯದೆ ಇದ್ದು ಸಂಸದರು ಮನಸು ಮಾಡಿ ಕಾಮಗಾರಿ ಅರಂಬಿಸಬೇಕು ಎಂದು ಹೇಳಿದರು ಮೈಬೂಬ್ ಬಿಸ್ತಿ ಕಾಂಗ್ರೆಸ್ ಯುವ ಮುಖಂಡ ವಿನಯ್ ತಿಮ್ಮಾಪೂರ, ಜಯಶ್ರೀ ಗುಳಬಾಳ ಶ್ರೀನಿವಾಸ ಬಳ್ಳಾರಿ ಮಾತನಾಡಿದರು.
ಮೈಬೂಬ ಬಿಸ್ತಿ, ನಬಿ ಮುಲ್ಲಾ,ಮೈನುದ್ದಿನ್ ಖಾಜಿ,ಚಿನ್ನು ಅಂಬಿ, ಪುಟ್ಟು ಬಿಳ್ಳೂರ,ಭೀಮಸಿ ಹುನ್ನೂರ,ಮಮತಾಜ ಬೇಗಂ ಸೌದಾಗರ ಸೇರಿದಂತೆ ಇತರರು ಇದ್ದರು. ಬೆಳಿಗ್ಗೆ ಯಿಂದ ಸಂಜೆಯವರೆಗೆ ಕಾಲೇಜ ವಿದ್ಯಾರ್ಥಿ, ಯುವಕರು ಸೇರಿದಂತೆ ಸುಮಾರು 3000 ಪತ್ರಗಳನ್ನು ಬರೆದು ಟಪಾಲು ಪೆಟ್ಟಿಗೆಗೆ ಹಾಕಲಾಯಿತು.