ಕಾರು ಅಡ್ಡಗಟ್ಟಿ 225 ಗ್ರಾಂ ಚಿನ್ನ, 1 ಲಕ್ಷ ನಗದು ದೋಚಿದ್ದ 8 ಜನ ಬಂಧನ, 40.50 ಲಕ್ಷ ಸಾಮಗ್ರಿ ವಶಕ್ಕೆ
8 people arrested for robbing 225 grams of gold and Rs 1 lakh in cash by intercepting a car, goods w
ಲೋಕದರ್ಶನ ವರದಿ
ಬೆಳಗಾವಿ 30: ಕಾರಿನಲ್ಲಿ ಗೋವಾ ರಾಜ್ಯಕ್ಕೆ ತೆರಳುತ್ತಿದ್ದ ಚಿನ್ನಾಭರಣ ತಯಾರಿಕೆ ವ್ಯಾಪಾರಿಯ ಕಾರು ತಡೆದು ಪಿಸ್ತೂಲ, ಚಾಕುವಿನಿಂದ ಹೆದರಿಸಿ 1 ಲಕ್ಷ ರೂ. ನಗದು ಮತ್ತು 225 ಗ್ರಾಂ ಚಿನ್ನವನ್ನು ದೋಚಿದ್ದ 8 ಖದೀಮರನ್ನು ಖಾನಾಪೂರ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಬಂಧಿತರಿಂದ 40,50,200 ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜೆಲ್ಲಾ ಪೊಲೀಸ ವರಿಷ್ಠಾಧಿಕಾರಿ ಕ.ರಾಮರಾಜನ್ ಇಂದಿಲ್ಲಿ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಶನಿವಾರ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ಕೆ.ಇಬಾದುಲ್ (ಸಾ: ಪಶ್ಚಿಮಬಂಗಾಲ, ಹಾಲಿ ಶಹಾಪೂರ ಬೆಳಗಾವಿ) ಇವರು ಬೆಳಗಾವಿಯಲ್ಲಿ ಭಂಗಾರದ ಆಭರಣದ ತಯಾರಿಕೆ ಕೆಲಸ ಮಾಡಿಕೊಂಡಿದ್ದು ಇವರು ದಿ. 20ರಂದು ತನ್ನ ಸ್ನೇಹಿತರಾದ ರಬಿಯುಲ್ ಘಾಜಿ ಹಾಗೂ ಅಲಿ ಹುಸೇನ ಮಂಡಲ (ಹಾಲಿ ದಾಣೆಗಲ್ಲಿ ಶಹಾಪೂರ ಬೆಳಗಾವಿ) ಇವರೊಂದಿಗೆ ಗೋವಾಕ್ಕೆ ಹೋಗುತಿದ್ದರು.
ಖಾನಾಪೂರ ತಾಲೂಕಿನ ಉಚವಡೆ ಗ್ರಾಮದ ಬೈಲೂರು ಕ್ರಾಸ್ ಹತ್ತಿರ ಕಾರನ್ನು ಅಡ್ಡಗಟ್ಟಿ ಪಿಸ್ತೂಲ್ ಹಾಗೂ ಚಾಕೂವಿನಿಂದ ಹೆದರಿಸಿ ಪಿರ್ಯಾದಿ, ಸ್ನೇಹಿತರ ಬಳಿ ಇದ್ದ 1,00,200 ಹಣವನ್ನು ದರೋಡೆ ಮಾಡಿದ್ದಲ್ಲದೇ ರುಯುಲ್ ಘಾಜಿ ಇವನಿಂದ 225 ಗ್ರಾಂ ಬಂಗಾರ ದರೋಡೆ ಮಾಡಿದ್ದರು. ಈ ಬಗ್ಗೆ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ: 146/2026 ಕಲಂ: 310(2), 310(4), 312 ಬಿ.ಎನ್.ಎಸ್: 2023 ಮತ್ತು ಕಲಂ: 25 27 ಇಂಡಿಯನ್ ಆರ್ಮ್ ಆಕ್ಟ್ ನೇದ್ದರಡಿಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು.
ತನಿಖೆಯಲ್ಲಿ ಪಿರ್ಯಾದಿಯ ಸ್ನೇಹಿತರಾದ ರಬಿಯುಲ್ ಘಾಜಿ ಹಾಗೂ ಹುಸೇನ ಮಂಡಲ ಇವರು ಗೋವಾಕ್ಕೆ ಹೋಗುವಾಗ ದರೋಡೆ ಮಾಡುವ ಸಂಚು ಮಾಡಿ ಸಾದೀಕ ತೋರಗಲ್ (ಸಾ: ಶಹಾಪೂರ) ಇವನೊಂದಿಗೆ ಸೇರಿ ದರೊಡೆ ಮಾಡಲು ವಿವೇಕ ಪಾಟೀಲ (ಸಾ: ಶಹಾಪೂರ ಬೆಳಗಾವಿ) ಇವನಿಗೆ 3 ಲಕ್ಷ ರೂಪಾಯಿಗೆ ಸುಪಾರಿ ಕೊಟ್ಟಿದ್ದರಿಂದ ವಿವೇಕ ಪಾಟೀಲ ಇವನು ತನ್ನ 4 ಜನ ಸಹಚರರೊಂದಿಗೆ ದರೋಡೆ ಮಾಡಿರುತ್ತಾರೆ ಎಂದು ತಿಳಿದಿದೆ.
ದರೋಡೆ ಮಾಡಿದ ರಬಿಯುಲ್ ರೂಹುಲ್ ಅಮೀನ ಘಾಜಿ, (29 ಸಾ: ಪಶ್ಚಿಮ ಬಂಗಾಳ ಹಾಲಿ: ದಾಣಿಗಲ್ಲಿ ಶಹಾಪೂರ), ಹುಸೇನ ಕ್ಙರುದ್ದೀನ ಮಂಡಲ, (27 ಸಾ: ಪಶ್ಚಿಮಬಂಗಾಳ ಹಾಲಿ ಭಾರತ ನಗರ ಖಾಸಭಾಗ), ಸಾದೀಕ ಅಬ್ದುಲ್‌ರೇಹಮಾನ ತೋರಗಲ್, (37 ಸಾ: ಶಹಾಪೂರ), ವಿವೇಕ ಚಂದ್ರಕಾಂತ ಪಾಟೀಲ, (33, ಸಾ: ಕಪಿಲೇಶ್ವರ ಮಂದಿರದ ಹತ್ತಿರ), ಪ್ರಶಾಂತ ಚವ್ಹಾಣ, (37 ಸಾ: ತಾಂಗಡಿ ಗಲ್ಲಿ), ನೀತೀನ ಚವ್ಹಾಣ, (36 ಸಾ: ಖಾಸಭಾಗ), ದಿಗಂಬರ ಪಾಟೀಲ, (26 ಸಾ: ಆನಗೋಳ ಹಾಗೂ ದರೋಡೆಗೆ ವಿವೇಕ ಪಾಟೀಲನಿಗೆ ಕಂಟ್ರಿ ಪಿಸ್ತೂಲ್ ನೀಡಿದ ಮಯೂರ ಘಾಡಿ (26 ವರ್ಷ ಸಾ: ಶಹಾಪೂರ) ಹೀಗೆ ಒಟ್ಟು 8 ಆರೋಪಿತರಿಗೆ ದಸಗಿರಿ ಮಾಡಲಾಗಿದೆ ಎಂದರು.
ದರೋಡೆ ಮಾಡಿದ ಆಪಾದಿತರಿಂದ ಸುಜುಕಿ ಬ್ರೇಜಾ ಕಾರ ಮೌಲ್ಯ 3,00,000, ಎರಿಟಗಾ ಕಾರ ಮೌಲ್ಯ 3,50,000, ಐ20 ಕಾರ 2,50,000, ದರೋಡೆ ಮಾಡಿದ ನಗದು ಹಣ 1,00,200 ರೂಪಾಯಿ, ಕಂಟ್ರಿ ಪಿಸ್ತೂಲ್ ಒಂದು, ಚಾಕೂ ಒಂದು, ಮೊಬಾಯಿಲಗಳು-8, ಮೋಟರ ಸೈಕಲ್ ಒಂದು ಮೌಲ್ಯ 50,000, 205 ಗ್ರಾಂ ತೂಕದ ನಕಲಿ ಬಂಗಾರದ ಅಸ್ತೇಟ ಒಂದು ಮೌಲ್ಯ 27,00,000 ಹಾಗು 28 ಗ್ರಾಂ ತೂಕದ ನಕಲಿ ಬಂಗಾರದ ಬಳೆಗಳು-02 ಮೌಲ್ಯ 3,00,000 ಹೀಗೆ ಬಂಧಿತರಿಂದ ಒಟ್ಟು 40,50,200 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಜಿಲ್ಲಾ ಪೊಲೀಸ ವರಿಷ್ಠ ಕೆ. ರಾಮರಾಜನ ಹಾಗೂ ಹೆಚ್ಚುವರಿ ಎಸ್‌ಪಿ ರಾಮಗೊಂಡ ಬಸರಗಿ ಇವರ ಮಾರ್ಗದರ್ಶನದಲ್ಲಿ ಬೈಲಹೊಂಗಲ ಡಿಎಸ್‌ಪಿ ವೀರಯ್ಯ ಹಿರೇಮಠ ಇವರ ನೇತೃತ್ವದಲ್ಲಿ ತಂಡ ರಚಿಸಿ ಖಾನಾಪೂರ ಪಿಐ ಎಲ್.ಎಚ್.ಗೌಂಡಿ ಇವರು ತನಿಖೆ ಕೈಕೊಂಡು ಆರೋಪಿತರನ್ನು ಪತ್ತೆ ಮಾಡಿರುತ್ತಾರೆ ಎಂದು ತಿಳಿಸಿದರು.
ಆರೋಪಿತರನ್ನು ಪತ್ತೆ ಮಾಡುವ ತಂಡದಲ್ಲಿ ನಂದಗಡ ಪಿಐ ರವಿಕುಮಾರ ದರ್ಮಟ್ಟಿ, ಕಿತ್ತೂರ ಪಿಎಸ್‌ಐ ಭರತ, ಎ.ಓ.ನಿರಂಜನಸ್ವಾಮಿ ಪಿಎಸ್‌ಐ, ಬಸವರಾಜ ಎಂ ಪ್ರೋಬೇಶನರಿ ಪಿಎಸ್‌ಐ ಹಾಗೂ ಸಿಬ್ಬಂದಿ ಜನರಾದ ಎಸ್.ಎ.ತೋಲಗಿ ಎಎಸ್‌ಐ, ಜೆ.ಐ.ಕಾದ್ರೋಳ್, ಎಸ್.ಎಚ್.ಈರಗಾರ, ಕೆ.ಎಸ್.ಕೋಟ್ರೆ, ಈಶ್ವರ ಜಿನ್ನವ್ವಗೋಳ, ಎಂ.ಎಲ್.ಮುಸ4, ಮತ್ತು ಎಸ್.ಎಸ್.ತುರಮಂದಿ ಹಾಗೂ ಜಿಲ್ಲಾ ಟೆಕ್ನಿಕಲ ವಿಭಾಗದ ಸಚೀನ ಪಾಟೀಲ ಇವರು ಇದ್ದರು. ಈ ತಂಡದ ಕಾರ್ಯಕ್ಕೆ ಎಸ್‌ಪಿ ಶ್ಲಾಘನೆ ವ್ಯಕ್ತಪಡಿಸಿರುತ್ತಾರೆ.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 