ಕ್ಯಾಮರೂನ್‌ನಲ್ಲಿ ಆತ್ಮಾಹುತಿ ದಾಳಿ: 6 ನಾಗರಿಕರ ಸಾವು
ಯೌಂಡೆ, ಸೆಪ್ಟೆಂಬರ್ 13: ಕ್ಯಾಮರೂನ್‌ನ ಜೆಲೆವೆಡ್ ಎಂಬಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 6 ನಾಗರಿಕರು ಸಾವನ್ನಪ್ಪಿದ್ದು, ಇತರೆ 10 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.
ಈ ದಾಳಿಯನ್ನು ಸ್ಥಳೀಯ ಅಧಿಕಾರಿಗಳು ದಾಳಿಯನ್ನು ದೃಡಪಡಿಸಿದ್ದಾರೆ ಮತ್ತು ಶುಕ್ರವಾರ ತಡವಾಗಿ ಸಂಭವಿಸಿದ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಸಾಂಪ್ರದಾಯಿಕ ಆಡಳಿತಗಾರ ಮತ್ತು ಅವರ ಪತ್ನಿ ಸಹ ಸೇರಿದ್ದಾರೆ ಎಂದು ಹೇಳಿದರು.
ಬೊಕೊ ಹರಮ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ ಎಂದು ಸ್ಥಳೀಯ ಪತ್ರಕರ್ತ ರೊಬ್ಬರು ಹೇಳಿದ್ದಾರೆ.
ಬುಧವಾರ, ಫಾರ್ ನಾರ್ತ್ ಪ್ರದೇಶದಲ್ಲಿ ಗ್ರೆನೇಡ್ ಸ್ಫೋಟದಿಂದ ಏಳು ನಾಗರಿಕರು ಗಾಯಗೊಂಡಿದ್ದರು ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.