ಫೆ 1 ರಿಂದ 5 ರವರೆಗೆ ಶ್ರೀ ಗಾಳೇಶ್ವರ ಮಠದ 52 ನೇ ಜಾತ್ರಾ ಮಹೋತ್ಸವ
52nd Jatra Mahotsav of Sri Galeshwar Mutt from Feb 1 to 5
ನೇಸರಗಿ 30: ಇಲ್ಲಿನ ನೇಸರಗಿ - ಮಲ್ಲಾಪೂರ ಕೆ ಎನ್ ಶ್ರೀ ಗಾಳೇಶ್ವರ ಮಠದ 52 ನೇ ವೇದ್ಧಾಂತ ಪರಿಷತ, ಸಾಮೂಹಿಕ ವಿವಾಹ ಹಾಗೂ ಮಹಾ ರಥೋತ್ಸವವು 01-02-2026 ರಿಂದ 05-02-2026 ರವರೆ ಅದ್ದೂರಿಯಾಗಿ ನೆರವೇರುಲಿದೆ. ಜಾತ್ರಾ ಮಹೋತ್ಸವದ ದಿವ್ಯ ಸಾನಿಧ್ಯವನ್ನು ಇಂಚಲ ಸಾಧು ಸಂಸ್ಥಾನ ಮಠದ ಶ್ರೀ ಡಾ. ಶಿವಾನಂದ ಭಾರತಿ ಮಹಾಸ್ವಾಮಿಗಳು ವಹಿಸುವರು. ಜಾತ್ರೆಯ ನೇತೃತ್ವವನ್ನು ನೇಸರಗಿ - ಮಲ್ಲಾಪೂರ ಕೆ ಎನ್ ಗ್ರಾಮಗಳ ಶ್ರೀ ಗಾಳೇಶ್ವರ ಮಠದ ಶ್ರೀ ಚಿದಾನಂದ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ನಡೆಯಲಿದೆ.
ಫೆ 1 ರಂದು ಬೆಳಿಗ್ಗೆ 5 ಘಂಟೆಗೆ ರುದ್ರಾಭಿಷೇಕ, ಅಗ್ನಿಪೂಜೆ, ಸಂಜೆ 6 ಘಂಟೆಗೆ ಕಳಸರೋಹಣ ನೆರವೇರುವದು. ಅದೇ ದಿನ ಸಂಜೆ ಶ್ರೀ ರೇವಣಸಿದ್ದೇಶ್ವರ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ ನಡೆಯಲಿದೆ. ಫೆ 2 ರಿಂದ ಫೆ 4 ರವರೆಗೆ ಪ್ರತಿದಿನ ಸಂಜೆ 7 ರಿಂದ 10 ಘಂಟೆಯವರೆಗೆ ಪ್ರವಚನ, ವೇದ್ಧಾಂತ ಪರಿಷತ, ಮಹಾಪ್ರಸಾದ ನಡೆಯಲಿದೆ. ಫೆ. 5 ರಂದು ಬೆಳಿಗ್ಗೆ 9 ಕ್ಕೆ ಶ್ರೀಗಳ ಪಲ್ಲಕ್ಕಿ ಉತ್ಸವ, ಮದ್ಯಾಹ್ನ 12 ಘಂಟೆಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಲಿದ್ದು, ಸಂಜೆ 5 ಘಂಟೆಗೆ ಮಹಾರಥೋತ್ಸವ ಜರುಗುವದು.
ಅದೇ ದಿನ ರಾತ್ರಿ ಕುಳ್ಳೂರ ಇವರಿಂದ ಶ್ರೀ ಶಿವಯೋಗಿಶ್ವರ ಗೀಗಿಮೇಳ, ಮಹಾಪ್ರಸಾದ ಜರುಗುವದು.ಫೆ. 6 ರಂದು ಮುತ್ತೇಶ್ವರ ಯುವಕ ಸಂಘದಿಂದ ದಟ್ಟ ಕುಣಿತ ಕಾರ್ಯಕ್ರಮ ಜರುಗಲಿದೆ.ಫೆಬ್ರವರಿ 1 ರಿಂದ ದಿ 6 ರವರೆಗೆ ದನಗಳ ಪ್ರದರ್ಶನ ಹಾಗೂ ಈ ಪ್ರದರ್ಶನದಲ್ಲಿ 5 ಜೋಡಿ ದನಗಳಿಗೆ ಬಹುಮಾನ ವಿತರಿಸಲಾಗುವದು. ಈ ಒಂದು 5 ದಿನಗಳ ಜಾತ್ರಾ ವೇದ್ಧಾಂತ ಪರಿಷತ್ ಪ್ರವಚನ ಕಾರ್ಯಕ್ರಮಕ್ಕೆ ನಾಡಿನ ಪ್ರಮುಖ ಪೂಜ್ಯರಾದ ಬೈಲಹೊಂಗಲ ಶ್ರೀ ಶಿವಾನಂದ ಮಠದ ಶ್ರೀ ಮಹಾದೇವ ಶ್ರೀ, ಅರಳಿಕಟ್ಟಿ ಶಿವಾನಂದ ಮಠದ ನಿಜಗುಣ ಶ್ರೀ, ಕುಳ್ಳೂರ ಶಿವಯೋಗಿಶ್ವರ ಮಠದ ಬಸವರಾಜ ಭಾರತಿ ಶ್ರೀ,
ಹಂಪಿ ಶಿವರಾಮ ಆಶ್ರಮದ ವಿದ್ಯಾನಂದ ಭಾರತಿ ಶ್ರೀ, ತೊಂಡಿಕಟ್ಟಿ ಗಾಳೇಶ್ವರ ಮಠದ ಅಭಿನವ ವೆಂಕಟೇಶ್ವರ ಶ್ರೀ, ಹುಣಶ್ಯಾಳ ಕೈವಾಲ್ಯಾಶ್ರಮ ನಿಜಗುಣದೇವ ಶ್ರೀ, ಇಂಚಲ ಮಠದ ಪೂರ್ಣನಂದ ಶ್ರೀ, ದತ್ತವಾಡ ಹೃಶಿಕೇಶನಂದ ಬಾಬಾ ಶ್ರೀ, ಹುಬ್ಬಳ್ಳಿ ಸಿದ್ದಾರೂಢ ಮಠದ ಸಚ್ಚಿದಾನಂದ ಶ್ರೀ, ಹೊಲಗೇರಿ ಸಿದ್ರಾಮೇಶ್ವರ ಮಠದ ವೀರಯ್ಯ ಶ್ರೀ ಕೋಟಬಾಗಿಯ ಸಿದ್ದಾರೂಢ ಮಠದ ಪ್ರಭು ಶ್ರೀ, ಕವಟಗಿಯ ನಿಂಗಯ್ಯ ಶ್ರೀ, ಹಡಗಿನಹಾಳದ ಮಲೇಶ್ವರ ಶರಣರು ಪಾಲ್ಗೊಳ್ಳಲಿದ್ದಾರೆ ಎಂದು ಜಾತ್ರಾ ಕಮಿಟಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 