ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ
354th Aradhana Mahotsav of Raghavendra Swami
ಕೊಪ್ಪಳ 13: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಅಂಗವಾಗಿ ಇಲ್ಲಿನ ರಾಯರ ಮಠದಲ್ಲಿ ಸೋಮವಾರ ವಿವಿಧ ಧಾರ್ಮಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.ಮಧ್ಯಾರಾಧನೆ ಅಂಗವಾಗಿ ರಾಯರ ವೃಂದಾವನಕ್ಕೆ ಸುಪ್ರಭಾತ, ಅಷ್ಟೋತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ, ಅಲಂಕಾರ, ತೀರ್ಥಪ್ರಸಾದ ಸೇರಿದಂತೆ ಜರುಗಿದವು.
ಸಂಜೆ ಹುಬ್ಬಳ್ಳಿಯ ವಿಜಯಕುಮಾರ ಪಾಟೀಲ ಅವರಿಂದ ಭಕ್ತಿ ಸಂಗೀತ, ಪಂಡಿತ್ ಪುರಸ್ಕಾರ, ರಾಘವೇಂದ್ರ ವಿಜಯ ಪ್ರವಚನ ಮಂಗಲ ಮಹೋತ್ಸವ ಇದ್ದವು. ರಾತ್ರಿ ನಡೆದ ಲಘು ರಥೋತ್ಸವದ ಸುತ್ತಲೂ ಸಾಗಿ ಭಕ್ತರು ತಮ್ಮ ಭಕ್ತಿ ಸಮರ್ಿಸಿದರು. ಈ ವೇಳೆ ರಾಯರ ಹಾಡುಗಳನ್ನು ಸ್ತುತಿಸಲಾಯಿತು. ಬಳಿಕ ಮಹಿಳೆಯರು ಕೋಲಾಟವಾಡಿದರು. ತೊಟ್ಟಿಲು ಸೇವೆಯಲ್ಲಿ ಮಹಿಳೆಯರು ತೊಟ್ಟಿಲು ತೂಗಿ ನಮಸ್ಕರಿಸಿದರು. ಎರಡು ದಿನಗಳಿಂದ ನಡೆಯುತ್ತಿರುವ ಆರಾಧನೆಯಲ್ಲಿ ಎಲ್ಲ ಜಾತಿಗಳ ಸಾವಿರಾರು ಸಂಖ್ಯೆಯ ಭಕ್ತರು ಮಠದಲ್ಲಿ ಬಂದು ಪ್ರಸಾದ ಸೇವಿಸಿದರು. ಮಧ್ಯಾಹ್ನ 1.30ರಿಂದ ಆರಂಭವಾದ ಪ್ರಸಾದ ಸಂಜೆ ತನಕ ನಡೆಯಿತು.
ಗೌರವ ಸನ್ಮಾನ: ಭಾನುವಾರ ರಾತ್ರಿ ನಡೆದ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಪತ್ರಿಕಾರಂಗ ಮತ್ತು ಹೋರಾಟ ಕ್ಷೇತ್ರದ ಸಾಧನೆಗೆ ಸಂತೋಷ ದೇಶಪಾಂಡೆ, ಶಂಕರ ಬಿನ್ನಾಳ (ಸಂಗೀತ), ಜಪದ ಮೇಲೆ ಪಿ.ಎಚ್ಡಿ ಮಾಡಿದ ಸಾಧಕ ಹನುಮಂತರಾವ್ ಕುಲಕರ್ಣಿ ಮತ್ತು ಶೈಕ್ಷಣಿಕ ಕ್ಷೇತ್ರದ ಸಾಧನೆಗೆ ಸುನಿತಾ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 