ಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆ*ಪತ್ರಿಕಾ ದಿನಾಚರಣೆ ಅದ್ದೂರಿ ಆಚರಣೆಗೆ ನಿರ್ಧಾರ :ರಾಜು ಬಿ ಆರ್

ಕೊಪ್ಪಳ ಕಾರ್ಯನಿರತ ಪತ್ರಕರ್ತರ ಸಂಘದ ಸಭೆ*ಪತ್ರಿಕಾ ದಿನಾಚರಣೆ ಅದ್ದೂರಿ ಆಚರಣೆಗೆ ನಿರ್ಧಾರ :ರಾಜು ಬಿ ಆರ್ Koppal Working Journalists Association meeting*Decision to celebrate Press Day in grand style: Raju

ಕೊಪ್ಪಳ  04: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜುಲೈ ಮೊದಲನೇ ಅಥವಾ ಎರಡನೇ ವಾರದಲ್ಲಿ ಅದ್ದೂರಿಯಾಗಿ  ಪತ್ರಿಕಾ ದಿನಾಚರಣೆ ಆಚರಿಸಲು ನಿರ್ಧರಿಸಲಾಯಿತು, ಗುರುವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರಿ​‍್ಡಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭೆಯಲ್ಲಿ ಸಂಘದ  ಜಿಲ್ಲಾಧ್ಯಕ್ಷರಾದ ಹನುಮಂತ್ ಹಳ್ಳಿಕೇರಿ ಅವರ ಅನುಪಸ್ಥಿತಿಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸ್ಥಾನದ ಜಿಲ್ಲಾ ಉಪಾಧ್ಯಕ್ಷ ರಾಜು ಬಿಆರ್ ನಿರ್ಧಾರ ಪ್ರಕಟಿಸಿದರು, ನಮ್ಮ ನಾಯಕ ಶಿವಾನಂದ ತಗೂಡೂರು ರವರು ಮೂರನೇ ಬಾರಿಗೆ ಸಂಘದ ರಾಜ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಈ ಶುಭ ಸಂದರ್ಭದಲ್ಲಿ ಅವರಿಗೆ ಅದ್ದೂರಿ ಸನ್ಮಾನ ಸೇರಿದಂತೆ ಜಿಲ್ಲೆಯ  ಪತ್ರಕರ್ತರಿಗೆ ದತ್ತಿ ನಿಧಿ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾ ದಿನಾಚರಣೆ ಅಂಗವಾಗಿ ಪತ್ರಕರ್ತರ  ಕ್ರೀಡಾಕೂಟ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಪತ್ರಕರ್ತರ ಕುಟುಂಬ ವರ್ಗದವರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲು ಚರ್ಚಿಸಿ ನಿರ್ಣಯಿಸಿ ಇದಕ್ಕೆಲ್ಲ ಉಪ ಸಮಿತಿಗಳ ರಚನೆ ಮಾಡಿ ಜವಾಬ್ದಾರಿ ನೀಡಲಾಯಿತು, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ ನಾಗರಾಜ ರವರು ಸಭೆಯ ಕಾರ್ಯಕ್ರಮವನ್ನು ನಿರ್ವಹಿಸಿದರು, ಸಂಘದ ಜಿಲ್ಲಾಧ್ಯಕ್ಷ ಹನುಮಂತ್ ಹಳ್ಳಿಕೇರಿ ಯವರು  ಯಶಸ್ವಿ ಚಿಕಿತ್ಸೆ  ಪಡೆದು ವಿಶ್ರಾಂತಿ  ಪಡೆಯುತ್ತಿದ್ದಾರೆ ಅವರು ಬೇಗ ಗುಣಮುಖರಾಗಿ ಸಂಘದ ಚುಕ್ಕಾಣಿ  ಹಿಡಿದು ಎಂದಿನಂತೆ ಕಾರ್ಯ ನಿರ್ವಹಿಸಲಿ ಎಂದು ಎಲ್ಲರೂ ಪ್ರಾರ್ಥಿಸಿದರು,

ಅಲ್ಲದೆ ಸಂಘದ ಸರ್ವ ಸದಸ್ಯರ ಸಹಕಾರ ಮತ್ತು ಪ್ರೋತ್ಸಾಹ ಹಾಗೂ ಶುಭ ಹಾರೈಕೆ ಅವರ ಜೊತೆಗೆ ಇದೆ ಎಂದು ಎಲ್ಲರೂ ತಿಳಿಸಿದರು, ವೇದಿಕೆ ಮೇಲೆ ಕೇಂದ್ರ ಸ್ಥಾನದ ಜಿಲ್ಲಾ ಕಾರ್ಯದರ್ಶಿ ರುದ್ರಗೌಡ ಪಾಟೀಲ್ ಉಪಸ್ಥಿತರಿದ್ದು ಸಭೆಯಲ್ಲಿ ಹಿರಿಯ ಸದಸ್ಯರಾದ ಜಿ.ಎಸ್‌. ಗೋನಾಳ್, ಎಚ್‌.ಎಸ್ ಹರೀಶ್, ಎಂ , ಸಾದಿಕ್ ಅಲಿ, ಎನ್, ಎಂ. ದೊಡ್ಡಮನಿ,  ಶಿವರಾಜ್ ನುಗಡೋಣಿ, ಸೇರಿದಂತೆ ಕಲೀಲ್ ಊಡೇವು, ಬ್ರಹ್ಮಾನಂದ ಬಡಿಗೇರ್ ಶಿವಕುಮಾರ್ ಹಿರೇಮಠ ಸಿದ್ದು ಹಿರೇಮಠ  ಎಂ ಎನ್ ಕುಂದಗೋಳ, ಮಂಜುನಾಥ ಪೂಜಾರ್ ಉಮೇಶ್ ಪೂಜಾರ್ ಸೇರಿದಂತೆ ಅನೇಕರು ಸಬೇಯಲ್ಲಿ ಉಪಸಿತರಿದ್ದರು