ಅ.ಗ್ರಾ ಪಂಚಾಯತಿಯಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ
Krishnaraja Wodeyar Jayanti celebrated in Agra Panchayat
ಲಕ್ಷ್ಮೇಶ್ವರ 04: ತಾಲೂಕಿನ ಅಡರಕಟ್ಟಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಗುರುವಾರ ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರೊಂದಿಗೆ ಆಚರಿಸಲಾಯಿತು. ನಾಲ್ವಡಿ ಕೃಷ್ಣರಾಜ ಒಡೆಯರ ಜಯಂತಿಯನ್ನು ಆಚರಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮಾಡಳ್ಳಿ ಅವರು ಜೂನ್ 1884 - 3 ಆಗಸ್ಟ್ 1940 ಕಾಲದಲ್ಲಿ ಮೈಸೂರು ಸಂಸ್ಥಾನವನ್ನು ಆಳಿದ 24ನೇ ಮಹಾರಾಜರು. ಇವರ ಆಳ್ವಿಕೆಯ ಕಾಲವನ್ನು (1902-1940) ’ಮೈಸೂರಿನ ಸುವರ್ಣ ಯುಗ’ ಮತ್ತು ಇವರನ್ನು ’ಆಧುನಿಕ ಮೈಸೂರಿನ ನಿರ್ಮಾತೃ’ ಎಂದು ಇತಿಹಾಸದಲ್ಲಿ ಬಣ್ಣಿಸಲಾಗಿದೆ.
ಇವರ ಜನಪರ ಹಾಗೂ ಧರ್ಮನಿರಪೇಕ್ಷ ಆಡಳಿತವನ್ನು ಮೆಚ್ಚಿ ಮಹಾತ್ಮ ಗಾಂಧೀಜಿಯವರು ಇವರನ್ನು ’ರಾಜರ್ಷಿ’(ಸಂತ ರಾಜ) ಎಂದು ಕರೆದಿದ್ದರು. 1894ರಲ್ಲಿ ತಮ್ಮ ತಂದೆಯ ನಿಧನದ ನಂತರ ಕೇವಲ ಹತ್ತು ವರ್ಷದ ಬಾಲಕರಾಗಿದ್ದಾಗಲೇ ಇವರು ಪಟ್ಟಾಭಿಷಿಕ್ತರಾದರು. 1902ರಲ್ಲಿ ನೇರ ಆಡಳಿತದ ಜವಾಬ್ದಾರಿ ವಹಿಸಿಕೊಂಡರು. ಸರ್ ಎಂ. ವಿಶ್ವೇಶ್ವರಯ್ಯ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಅವರಂತಹ ದಕ್ಷ ದಿವಾನರ ನೆರವಿನಿಂದ ಮೈಸೂರನ್ನು ಏಷ್ಯಾ ಖಂಡದ ಮಾದರಿ ರಾಜ್ಯವನ್ನಾಗಿ ರೂಪಿಸಿದರು. ಅವರ ಕಾಲದ ಪ್ರಮುಖ ಸಾಧನೆಗಳು ಶಿಕ್ಷಣ ಮತ್ತು ಸಾಹಿತ್ಯ 1915 ರಲ್ಲಿ ’ಕನ್ನಡ ಸಾಹಿತ್ಯ ಪರಿಷತ್ತು’ ಮತ್ತು 1916 ರಲ್ಲಿ ’ಮೈಸೂರು ವಿಶ್ವವಿದ್ಯಾನಿಲಯ’ವನ್ನು ಸ್ಥಾಪಿಸಿದರು. ಭಾರತದಲ್ಲಿ ಬ್ರಿಟಿಷ್ ಆಡಳಿತದ ಹೊರಗೆ ಸ್ಥಾಪನೆಯಾದ ಮೊದಲ ವಿವಿಯಾಗಿದೆ.
ಕೈಗಾರಿಕೆ ಮತ್ತು ಮೂಲಸೌಕರ್ಯ ಕಾವೇರಿ ನದಿಗೆ ಅಡ್ಡಲಾಗಿ ಕೃಷ್ಣರಾಜಸಾಗರ (ಕೆ.ಆರ್.ಎಸ್) ಅಣೆಕಟ್ಟನ್ನು ನಿರ್ಮಿಸಿ ನೀರಾವರಿಗೆ ಒತ್ತು ನೀಡಿದರು. ಮೈಸೂರು ಬ್ಯಾಂಕ್, ಭದ್ರಾವತಿಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಗಂಧದ ಎಣ್ಣೆ ಕಾರ್ಖಾನೆ ಹಾಗೂ ಮೈಸೂರು ಸಾಬೂನು ಕಾರ್ಖಾನೆಗಳು ಇವರ ದೂರದೃಷ್ಟಿಯ ಫಲಗಳುಸೇರಿದಂತೆ ಇನ್ನು ಅನೇಕ ಕೊಡುಗೆಯನ್ನು ನೀಡಿದ್ದಾರೆ. ಇಂಥ ಮಹಾರಾಜರ ಜಯಂತಿ ಆಚರಣೆ ಮಾಡುವ ಮೂಲಕ ಎಲ್ಲರೂ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ ಎಂದರು. ಈ ಸಮಯದಲ್ಲಿ ಪಂಚಾಯ್ತಿಯ ಕಾರ್ಯದರ್ಶಿ ಶರಣಪ್ಪ ಡಂಬಳ ವಿಶ್ವನಾಥ ಮತ್ತಿಕಟ್ಟಿ ಶೇಖರ್ ಮರಾಠೆ ಶರಣಗೌಡ ಪಾಟೀಲ ರೇಣುಕಾ ಒಡವಿ ಫಕೀರೇಶ ಹರಿಜನ ಗ್ರಾಮದ ಮುಖಂಡರಾದ ಮುತ್ತುರಾಜ ಗಡಯ್ಯಪ್ಪನವರ ಮಲಕಾಜಗೌಡ ಪಾಟೀಲ ಕಲ್ಲಪ್ಪ ಮತ್ತಿಕಟ್ಟಿ ಅವರು ಇದ್ದರು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 