3 ದಿನದ ಬದಲು 6 ದಿನಗಳ ಕಾಲ ಕಲಾಪ
Session to last 6 days instead of 3 days
ಲೋಕದರ್ಶನ ವರದಿ
ಯರಗಟ್ಟಿ 04: ತಾಲೂಕಿನ ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ವಾರದಲ್ಲಿ 3 ದಿನ ಮಾತ್ರ ಕೋರ್ಟ್ ಕಲಾಪ ನಡೆಯುತ್ತಿತ್ತು ಆದರೆ ಇನ್ಮುಂದೆ ವಾರದ 6 ದಿನಗಳ ಕಾಲ ಕಲಾಪ ನಡೆಸಲು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ ಆದರಿಂದ ಯರಗಟ್ಟಿ ಮತ್ತು ಸುತ್ತಮುತ್ತಲಿನ ಜನರಿಗೆ ದೊಡ್ಡ ಅನುಕೂಲ ಆಗಲಿದೆ. 3 ದಿನ ಮಾತ್ರ ಕೋರ್ಟ್ ಇರುವುದರಿಂದ ಪ್ರಕರಣಗಳು ವಿಳಂಬ ಆಗುತ್ತಿದ್ದವು, ವಕೀಲರು ಮತ್ತು ಕಕ್ಷಿದಾರರು ವಾರಗಟ್ಟಲೆ ಕಾಯಬೇಕಿತ್ತು. ಈಗ 6 ದಿನ ಕಲಾಪ ನಡೆದರೆ ಬಾಕಿ ಇರುವ ಪ್ರಕರಣಗಳ ವಿಲೇವಾರಿ ಬೇಗ ಆಗುತ್ತೆ. ಹಾಗೂ ನ್ಯಾಯಾಧೀಶರಾಗಿ ಕೃಷ್ಣಪ್ಪ ಪಮ್ಮಾರ ಅವರನ್ನೇ ಮುಂದುವರಿಸಿದೆ.
ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಇದೆ. ಸಿಬ್ಬಂದಿ ಕೊರತೆ ಮತ್ತು ನ್ಯಾಯಾಧೀಶರು ಬೇರೆ ಕೋರ್ಟ್‌ಗೆ ಹೆಚ್ಚುವರಿ ಜವಾಬ್ದಾರಿ ಹೊಂದಿದ್ದರಿಂದ ಹಲವು ತಾಲೂಕು ಮಟ್ಟದ ಕೋರ್ಟ್‌ಗಳಲ್ಲಿ ವಾರದ 2-3 ದಿನ ಮಾತ್ರ ಕಲಾಪ ನಡೆಯುವ ಪದ್ಧತಿ ಇತ್ತು. ಉಚ್ಚ ನ್ಯಾಯಾಲಯ ಈಗ ಹಂತಹಂತವಾಗಿ ಎಲ್ಲ ಕಡೆ 6 ದಿನ ಕಲಾಪಕ್ಕೆ ಕ್ರಮ ತೆಗೆದುಕೊಂಡಿದೆ ಎಂದು ಯರಗಟ್ಟಿ ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ರೆಬ್ಬನ್ನವರ ತಿಳಿಸಿದ್ದಾರೆ.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 