ಜಮಖಂಡಿ

ಜಮಖಂಡಿ ಶುಗರ್ಸ್ ನಿಂದ ಪ್ರತಿ ಟನ್ ಕಬ್ಬಿಗೆ 2800 ರೂ.

ಜಮಖಂಡಿ ಶುಗರ್ಸ್ ನಿಂದ ಪ್ರತಿ ಟನ್ ಕಬ್ಬಿಗೆ 2800 ರೂ.

ಲೋಕದರ್ಶನ ವರದಿ,

ಜಮಖಂಡಿ 29: ಹಿರೇಪಡಸಲಗಿಯ ಜಮಖಂಡಿ ಶುಗರ್ಸ್ ಪ್ರಸಕ್ತ ಸಾಲಿನ ಕಬ್ಬು ಪೂರೈಕೆಗೆ ಪ್ರತಿಟನಗೆ 2800 ರೂ. ಗಳನ್ನು ನೀಡಲಾಗುವುದು ಎಂದು ಕಾರ್ಖಾನೆ  ಅಧ್ಯಕ್ಷ, ಶಾಸಕ ಆನಂದ ನ್ಯಾಮಗೌಡ ಹೇಳಿದರು.

ನಗರದ ರಮಾ ನಿವಾಸದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ತಾಲೂಕಿನ ಹಿರೇಪಡಸಲಗಿಯ ಜಮಖಂಡಿ ಶುಗರ್ಸ್ ಆವರಣದಲ್ಲಿ ನಡೆದ ಕಬ್ಬು ಬೆಳೆಗಾರರ ಮತ್ತು ರೈತರ ಸಭೆಯಲ್ಲಿ ಚರ್ಚಿಸಲಾಗಿ ರೈತರು ಕಾರ್ಖಾನೆ ಬಂದ್ ಮಾಡಬಾರದು ವಿಷಯಕ್ಕೆ ಕಾಖರ್ಾನೆ ಆಡಳಿತ ಮಂಡಳಿ ಸಹಮತ ವ್ಯಕ್ತಪಡಿಸಿದೆ. ಜಿಲ್ಲೆಯಲ್ಲಿ ಯಾವುದೇ ಖಾಸಗಿ ಸಕ್ಕರೆ ಕಾರ್ಖಾನೆ  ನಮ್ಮ ಕಾರ್ಖಾನೆ ಗಿಂತ ಹೆಚ್ಚಿನ ದರ ನೀಡಿದಲ್ಲಿ ಹೆಚ್ಚುವರಿ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲಾಗುವದು ಒಪ್ಪಂದಕ್ಕೆ ಒಪ್ಪಿರುವ ಹಿನ್ನಲೆಯಲ್ಲಿ ಜಮಖಂಡಿ ಶುಗರ್ಸ್ ಕಬ್ಬು ನುರಿಸಲಿದೆ ಎಂದರು.

ರೈತರ ಮತ್ತು ಕಾರ್ಖಾನೆ  ಆಡಳಿತ ಮಂಡಳಿ ಸಭೆಯಲ್ಲಿಕಾರ್ಖಾನೆಗೆ ಕಬ್ಬು ಕಳಿಸುವ ಎಲ್ಲ ರೈತರ ಒಪ್ಪಿಗೆ ಪಡೆದು ಸಕ್ಕರೆ ಉತ್ಪಾದನೆಯಲ್ಲಿ ತೊಡಗಿಕೊಳ್ಳಲಿದೆ. ರೈತರ ಪ್ರಮುಖ ಮೂರು ಬೇಡಿಕೆಗೆ ಕಾರ್ಖಾನೆ ಸ್ಪಂದಿಸುವ ಭರವಸೆ ನೀಡಿದೆ. ರೈತರು ಯಾವುದೇ ಆತಂಕಕ್ಕೆ ಒಳಗಾಗದೇ ಕಬ್ಬು ಕಳುಹಿಸಬೇಕು ಎಂದರು 

ಸುದ್ದಿ ಓದಿ