ಪಾಕಿಸ್ತಾನ: ಅಮೃತಶಿಲೆ ಗಣಿ ಕುಸಿತದಲ್ಲಿ 19 ಮಂದಿ ಸಾವು
ಇಸ್ಲಾಮಾಬಾದ್, ಸೆ 08(ಯುಎನ್ಐ) ಮೊಹ್ಮಂಡ್ ಜಿಲ್ಲೆಯ ಜಿಯಾರತ್ ಘರ್ ಪರ್ವತದಲ್ಲಿರುವ ಆರು ಅಮೃತಶಿಲೆಯ ಗಣಿಗಳು ಕುಸಿದಿದ್ದು, ಒಟ್ಟು 19 ಮಂದಿ ಮೃತಪಟ್ಟಿದ್ದಾರೆ.
ಆರಂಭದಲ್ಲಿ 12 ಗಣಿಗಾರರು ಸಾವನ್ನಪ್ಪಿರುವುದಾಗಿ ವರದಿಯಾಗಿತ್ತಾದರೂ, ನಂತರದ ರಕ್ಷಣಾ ಕಾರ್ಯಾಚರಣೆ ವೇಳೆ ಇನ್ನೂ ಏಳು ಶವಗಳನ್ನು ಪತ್ತೆ ಮಾಡಲಾಗಿದೆ ಎಂದು ಜಿಯೋ ನ್ಯೂಸ್ ಪ್ರಸಾರ ಮಾಡಿದೆ.
ಶೋಧ ಮತ್ತು ಪಾರುಗಾಣಿಕಾ ಕಾರ್ಯಾಚರಣೆ ನಡೆಯುತ್ತಿದ್ದು, ಭಾರಿ ಯಂತ್ರೋಪಕರಣಗಳು ಮತ್ತು ಹೆಚ್ಚಿನ ಮಾನವಶಕ್ತಿಯನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ.
ಅವಶೇಷಗಳ ಅಡಿಯಲ್ಲಿ ಇನ್ನೂ 15ರಿಂದ20 ಜನರು ಸಿಲುಕಿರಬಹುದು ಎಂಬ ಆತಂಕವಿರುವುದಾಗಿ ಜಿಲ್ಲಾ ಪೊಲೀಸ್ ಅಧಿಕಾರಿ ಮೊಹಮ್ಮದ್ ತಾರಿಕ್ ಹಬೀಬ್ ಹೇಳಿದ್ದಾರೆ.