ಜಮಖಂಡಿ

ಬ್ರಾಹ್ಮಣರಿಗೆ ಶೇ.10ರಷ್ಟು ಮೀಸಲಾತಿ ಸೌಲಭ್ಯ ನೀಡಬೇಕು: ಸಂದೀಪ

ಬ್ರಾಹ್ಮಣರಿಗೆ ಶೇ.10ರಷ್ಟು ಮೀಸಲಾತಿ ಸೌಲಭ್ಯ ನೀಡಬೇಕು: ಸಂದೀಪ
ಜಮಖಂಡಿ ಅಪ್ಟೆವಾಡಾದಲ್ಲಿ ನಡೆದ ತಾಲೂಕಾ ಮಟ್ಟದ ಯುವ ಬ್ರಾಹ್ಮಣ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಬ್ರಾಹ್ಮಣ ಮ

ಲೋಕದರ್ಶನ ವರದಿ,

ಜಮಖಂಡಿ 28: ರಾಜ್ಯ ಸಕರ್ಾರ ಕೆಲ ಸಮಾಜಕ್ಕೆ ನೀಡುತ್ತಿರುವ ಮೀಸಲಾತಿಯೂ ಶೇ.50 ಕ್ಕಿಂತ ಹೆಚ್ಚಾಗಬಾರದೆಂದು ಸುಪ್ರಿಂ ಕೋರ್ರ್ಟ ನಿರ್ದೇಶಿಸಿದೆ. ಈ ಆದೇಶವನ್ನು ಸರ್ಕಾರ ಗಳು ಮೀರಬಾರದು. ಅಲ್ಲದೆ ಕೇಂದ್ರ ಸರ್ಕಾರ  ಮತ್ತು ಸುಪ್ರಿಂ ಕೋರ್ಟ್   ನೀಡಿರುವ ಆದೇಶದಂತೆ ಬ್ರಾಹ್ಮಣರಿಗೆ ಶೇ.10 ಮೀಸಲಾತಿ ಸೌಲಭ್ಯವನ್ನು ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಂಚಾಲಕ ರವಿ ಸಂದೀಪ ಹೇಳಿದರು.

ಅಪ್ಟೆವಾಡ ಸಭಾಭವನದಲ್ಲಿ ನಡೆದ ಜಿಲ್ಲಾ ಹಾಗೂ ತಾಲೂಕಾ ಮಟ್ಟದ ಯುವ ಬ್ರಾಹ್ಮಣ ಸಂಘದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ರಾಹ್ಮಣರು ಸಂಘಟನೆಯಲ್ಲಿ ತಮ್ಮ, ತಮ್ಮ ವೈಯಕ್ತಿಕ ಪ್ರತಿಷ್ಠೆಯನ್ನು ಬಿಟ್ಟು ಸಂಘಟಿತರಾಗಿ ಸಮಾಜವನ್ನು ಮುನ್ನಡೆಯಿಸಬೇಕು. ಸಂಘಟನೆ, ಸ್ವಾಭಿಮಾನ, ಸಂಸ್ಕಾರ ಇವುಗಳು ನಮ್ಮ ಧ್ಯೇಯಗಳಾಗಬೇಕು. ಬ್ರಾಹ್ಮಣರು ಸ್ವಾವಲಂಭಿಗಳಾಗಿ, ಸಂಸ್ಕಾರಯುತರಾಗಿ ಬಾಳ್ವೆ ಮಾಡಬೇಕು.ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಬ್ರಾಹ್ಮಣ ಸಮೂದಾಯವಿದ್ದರೂ ಕೆಲವು ಕ್ಷೇತ್ರದಲ್ಲಿ ವಮ್ಮ ಯುವಕರು ವಂಚಿತರಾಗುತ್ತಿದ್ದು, ಇದನ್ನು ತಪ್ಪಿಸಲು ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕು ಎಂದು ಕರೆ ನಿಡಿದರು.

ಅತಿಥಿಗಳಾಗಿದ್ದ ಶಿಕ್ಷಕ ನಾರಾಯಣಶಾಸ್ತ್ರಿ ಮಾತನಾಡಿ, ಬ್ರಾಹ್ಮಣ್ಯ ಉಳಿಯಬೇಕಾದರೆ ನಾವೂಗಳು ಸಂಘಟಿತರಾಗಬೇಕು. ನಮ್ಮಲ್ಲಿರುವ ಭೇದ, ಭಾವ ಹೋಗಲಾಡಿಸಿ,ಸಮಾಜದ ಅಭಿವೃದ್ದಿಗೆ ಹೋರಾಟ ನಡೆಸಬೇಕು. ಬ್ರಹ್ಮ ತೇಜಸ್ಸುವುಳ್ಳ ಬ್ರಾಹ್ಮಣರು ಇಡೀ ಜಗತ್ತನ್ನೆ ಎತ್ತರಿಸಬಲ್ಲರು ಎಂದು ಹೇಳಿದರು.

ವಿನಯ ದೇಶಪಾಂಡೆ, ಮಾಧವ ದೇಶಪಾಂಡೆ ಮಾತನಾಡಿದರು. ವೇದನೂರ್ತಿ  ರಂಗಾಚಾರ್ಯ ಜೋಶಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಾಧನೆಗೈದ ಸಾಧಕರನ್ನು ಹಾಗೂ ನೂತನವಾಗಿ ಆಯ್ಕೆಗೊಂಡ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಭಾಸ್ಕರ ಮನಗೂಳಿ, ಸಂತೋಷ ಹಲ್ಯಾಳ,ನವೀನ ಕುಲಕರ್ಣಿ  ವೇದಿಕೆಯಲ್ಲಿದ್ದರು. ರಂಜನಿ ಹುಲ್ಯಾಳಕರ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ರಾಜೇಂದ್ರ ಹುಲ್ಯಾಳಕರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ನಿತೀನ ಹುಲ್ಯಾಳಕರ ವಂದಿಸಿದರು.  ಪ್ರವೀಣ ಕುಲಕರ್ಣಿ ನಿರೂಪಿಸಿದರು. 


ಸುದ್ದಿ ಓದಿ