ಸದ್ಗುರು ರುದ್ರಾವಧೂತರ ಪುಣ್ಯಾರಾಧನೆ: ಪ್ರವಚನ ಕಾರ್ಯಕ್ರಮ
ಲೋಕದರ್ಶನ ವರದಿ,
ಜಮಖಂಡಿ 02: ಸದ್ಗುರು ರುದ್ರಾವಧೂತರ 92 ನೇ ಪುಣ್ಯಾರಾಧನೆ ಹಾಗೂ 37 ನೇ ವೇದಾಂತ ಪರಿಷತ್ ಡಿ.3 ರಿಂದ 5 ವರಗೆ ಪ್ರವಚನ ಕಾರ್ಯಕ್ರಮ ಜರುಗಲಿದ್ದು. ಪ್ರೋ. ಬ್ರ. ವೇದಾಂತಾಚಾರ್ಯ ಸಹಬಾನಂದ ಅವಧೂತರು ಮುಂಬಯಿ, ದಿವ್ಯಸಾನಿಧ್ಯ ವಹಿಸುವರು. ಪ್ರೊ.ಬ್ರ. ಅಭಿನವ ಸಿದ್ಧಾರೂಢ ಮಹಾಸ್ವಾಮಿಗಳು ಶಾಂತಾಶ್ರಮ ಹುಬ್ಬಳ್ಳಿ, ಷಣ್ಣುಖಾರೂಢಮಠ ವಿಜಯಪೂರ ಸಾನಿಧ್ಯ ವಹಿಸುವರು. ನಾಗೇಶ್ವರ ಮಹಾಸ್ವಾಮಿಗಳು ಸಿದ್ಧಾರೂಢಮಠ ಉಪ್ಪಾರಟ್ಟಿ, ಪರಳಿಗಟ್ಟಿ, ಅಮರೇಶ್ವರ ಸ್ವಾಮಿಗಳು ಸಿದ್ಧಗಿರಿ ಸಿದ್ಧಾಶ್ರಮ ಹಣಮಾಪೂರ ಕವಲಗುಡ್ಡ, ಜ್ಞಾನೇಶ್ವರ ಸ್ವಾಮಿಗಳು, ಪರಮಾನಂದ ಯೋಗಾಶ್ರಮ, ನಾಗರಾಳ, ಸ್ವರೂಪಾನಂದ ಸ್ವಾಮಿಗಳು, ಶಿವಪತ್ರ ಅಪಧೂರರು ಶಿವಪುತ್ರ ಅವಧೂತ ಮಠ ಲಿಂಗಸೂರ, ಚಿನ್ಮಯಾನಂದ ಸ್ವಾಮಿಗಳು ಸಿದ್ಧಾರೂಢ ಮಠ ಗಣಿ, ಪ್ರಭುದೇವರು ಶಿವಲಿಂಗೇಶ್ವರ ಸಿದ್ಧಾಂತ ಆಕ್ರಮ, ಹುಣಶ್ಯಾಳ ಪಿ.ಟಿ. ಪ್ರತಿ ದಿನ ಬೆಳಗ್ಗೆ ಮತ್ತು ಸಾಂಯಕಾಲ ಪ್ರವಚನವನ್ನು ನೀಡಲಿದ್ದಾರೆ ಎಂದರು.
ಶನಿವಾರ 3 ರಂದು ಮುಂಜಾನೆ 6 ಘಂಟೆಯಿಂದ ಓಂಕಾರ ನಡೆಯುವದು ಹಾಗೂ ಸಾಯಂಕಾಲ 4 ಘಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ರುದ್ರಾವಧೂತರ ಭಾವಚಿತ್ರ ಮತ್ತು ಮಹಾತ್ಮರ ಮೆರವಣಿಗೆ ನಡೆಯುತ್ತದೆ. ಅಂದು ಸಾಯಂಕಾಲ 7 ಘಂಟೆಯಿಂದ 10 ಘಂಟೆಯವರೆಗೆ ಮಹಾತ್ಮರಿಂದ ಪ್ರವಚನ ನಂತರ ಅನ್ನಪ್ರಸಾದ ಸೇವೆ. ರವಿವಾರ 4 ರಂದು ಮುಂಜಾನೆ 8 ಘಂಟೆಗೆ ಉಪಹಾರ ಸೇವೆ, ಮುಂಜಾನೆ 10 ಘಂಟೆಯಿಂದ 12,30 ವರೆಗೆ ಮಹಾತ್ಮರಿಂದ ಪ್ರವಚನ, ನಂತರ ಸಾಮೂಹಿಕ ವಿವಾಹ, ಮಧ್ಯಾಹ್ನ 1 ಘಂಟೆಗೆ ಅನ್ನ ಸಂತರ್ಪಣೆ. ಸಾಯಂಕಾಲ 7 ಘಂಟೆಯಿಂದ 10 ಘಂಟಿಯವರೆಗೆ ಮಹಾತ್ಮರಿಂದ ಪ್ರವಚನ ಹಾಗೂ ರಾತ್ರಿ 10 ಘಂಟೆಯಿಂದ ಭಜನಾ ಕಾರ್ಯಕ್ರಮ ನಡೆಯುವದು. ಸೋಮವಾರ 5 ರಂದು ಮುಂಜಾನೆ 8 ಘಂಟೆಗೆ ಉಪಹಾರ ಸೇವೆ, ಮುಂಜಾನೆ 10 ರಿಂದ 12 ವರೆಗೆ ಮಹಾತ್ಮರಿಂದ ಪ್ರವಚನ ಮಧ್ಯಾಹ್ನ 12 ಘಂಟೆಗೆ ಪಲ್ಲಕ್ಕಿ ಉತ್ಸವ ನಂತರ ಅನ್ನಸಂತರ್ಪಣೆ ನಡೆಯುತ್ತದೆ ಎಂದು ಮಠದ ಪೀಠಾಧಿಕಾರಿ ಕೃಷ್ಣಾನಂದ ಅವಧೂತರು ಪ್ರಕಟನೆಗೆ ತಿಳಿಸಿದ್ದಾರೆ.