ವಿಶ್ವ ಪೋಲಿಯೋ ದಿನಾಚರಣೆ : ರೋಟರಿ ಕ್ಲಬ್ ಆಯೋಜಿಸಿದ ಸೈಕ್ಲೋಥಾನ್ ಯಶಸ್ವಿ
World Polio Day: Cyclothon organized by Rotary Club is a success
ವಿಶ್ವ ಪೋಲಿಯೋ ದಿನಾಚರಣೆ : ರೋಟರಿ ಕ್ಲಬ್ ಆಯೋಜಿಸಿದ ಸೈಕ್ಲೋಥಾನ್ ಯಶಸ್ವಿ
ಕಾರವಾರ 24 : ವಿಶ್ವ ಪೋಲಿಯೋ ದಿನದ ಪ್ರಯುಕ್ತ ಕಾರವಾರ ರೋಟರಿ ಕ್ಲಬ್ ಪೋಲಿಯೋ ನಿರ್ಮೂಲನೆಗಾಗಿ ಪೆಡಲ್ ಹಿ ರೈಡ್ ಟು ಎಂಡ್ ಪೋಲಿಯೋ ಎಂಬ ಸಾರ್ವಜನಿಕ ಜಾಗೃತಿ ಸೈಕ್ಲೋಥಾನ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಜರುಗಿತು.ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕ್ರಿಮ್ಸ ಡೈರೆಕ್ಟರ್ ಡಾ. ಪೂರ್ಣಿಮಾ ಆರಿ್ಟ. ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ್ ಮಾತನಾಡಿ ರೋಟರಿಯ ಸಮುದಾಯ ಆರೋಗ್ಯ ಹಾಗೂ ಜಾಗತಿಕ ಮಾನವೀಯ ಸೇವೆಯಲ್ಲಿ ನೀಡುತ್ತಿರುವ ನಿರಂತರ ಕೊಡುಗೆಯನ್ನು ಸ್ಮರಿಸಿದರು. ಬೈಸಿಕಲ್ ಕ್ಲಬ್, 29ನೇ ಕರ್ನಾಟಕ ಎನ್‌ಸಿಸಿ ಘಟಕದ ಕಡೆಯಟ್‌ಗಳು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಸೇಂಟ್ ಜೋಸೆಫ್ಸ್ ಹಾಗೂ ಸೇಂಟ್ ಮೈಕೇಲ್ಸ್ ಶಾಲೆಯ ವಿದ್ಯಾರ್ಥಿಗಳು, ಭಾರತೀಯ ನೌಕಾಪಡೆಯ ಸದಸ್ಯರು ಮತ್ತು ಕಾರವಾರದ ನಾಗರಿಕರು ಉತ್ಸಾಹದಿಂದ ಭಾಗವಹಿಸ್ದಿರು.ಈ ಕಾರ್ಯಕ್ರಮದ ಉದ್ದೇಶ ಪೋಲಿಯೋ ಮುಕ್ತ ವಿಶ್ವದ ಸಂದೇಶವನ್ನು ಹರಡುವುದಾಗಿತ್ತು.ರೋಟರಿ ಕ್ಲಬ್ ಅಧ್ಯಕ್ಷ ಡಾ. ಅರ್ಜುನ್ ಉಪಾಧ್ಯಾಯ ಸಭಿಕರನ್ನು ಸ್ವಾಗತಿಸಿ ಪೋಲಿಯೋ ನಿರ್ಮೂಲನೆ ಎಂಬ ರೋಟರಿಯ ಶಾಶ್ವತ ಧ್ಯೇಯವನ್ನು ಒತ್ತಿಹೇಳಿದರು.ಕಾರ್ಯಕ್ರಮವನ್ನು ಕಾರ್ಯದರ್ಶಿ ರೋಟರಿಯನ್ ವಿನೋದ ಕೋಠಾರ್ಕರ್ , ರೋಟರಿಯನ್ ಯೋಗೆಶ್ ಭಂಡಾರ್ಕರ ಮತ್ತು ಪೋಲಿಯೋ ಕಾರ್ಯಕ್ರಮದ ಅಧ್ಯಕ್ಷ ಕೃಷ್ಣ ಕೆಲಸ್ಕರ್ ಕಾರ್ಯಕ್ರಮ ಸಂಘಟಿಸಿದ್ದರು. ಎಲ್ಲಾ ಸದಸ್ಯರು ಸಕ್ರಿಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಮೆರ್ಕ್ಯುರಿ ಶಿಪ್ ರಿಪೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ರೋಟರಿಯನ್ ಪಿ. ವಿ. ಪ್ರಜಿತ್ ಪ್ರಾಯೋಜಕರಾಗಿದ್ದರು. ರೋಟರಿಯನ್ ಫ್ರಾನ್ಸಿಸ್ ಫೆರ್ನಾಂಡಿಸ್, ಆನಂದ ನಾಯ್ಕ್, ನಾಗರಾಜ ಜೋಶಿ, ಅಮರನಾಥ ಶೆಟ್ಟಿ, ಅರ್ಚನಾ ಶೆಟ್ಟಿ, ಸಂಧ್ಯಾ ಬಾಡ್ಕರ್, ಮುರಳಿ ಗೋವೇಕರ್, ಅನ್ಮೋಲ್ ರೇವಣ್ಕರ್ (ಕಮ್ಯುನಿಟಿ ಸರ್ವೀಸ್ ಡೈರೆಕ್ಟರ್), ಪ್ರಸನ್ನ ತೆಂಡುಲ್ಕರ್, ಸುರೇಶ್ ನಾಯ್ಕ್, ಪಿ.ಎಸ್. ನಾಯ್ಕ್, ಗುರು ಹೆಗ್ಡೆ, ಕೃಷ್ಣಾನಂದ ಬಾಂದೆಕರ್, ಮೋಹನ್ ನಾಯ್ಕ್ ಮತ್ತು ಸುರಜ್ ಜೋಗ್ಳೇಕರ್ ಇದ್ದರು.ರೋಟರಿಯನ್ ಕೆ.ಡಿ. ಪೆದ್ನೇಕರ್ ಪೋಲಿಯೋ ಕುರಿತಂತೆ ಪ್ರೇರಣಾದಾಯಕ ಮಾತುಗಳನ್ನು ಆಡಿದರು.ಕಾರ್ಯಕ್ರಮ ನಾಗರಿಕರಲ್ಲಿ ಪೋಲಿಯೋ ಮುಕ್ತ ಭಾರತದ ಕನಸನ್ನು ನನಸು ಮಾಡುವ ಸ್ಪೂರ್ತಿಯನ್ನು ಮೂಡಿಸಿತು....
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 