ಅವಿರೋಧವಾಗಿ ಆಯ್ಕೆ
ಜಮಖಂಡಿ 29: ನಗರದ ಶ್ರೀನಿಕೇತನ ಪತ್ತಿನ ಸೌಹಾರ್ದ ಸಹಕಾರಿ ಸಂಘದ ನಿದರ್ೇಶಕ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಮೃತ ದೇಸಾಯಿ, ನರಸಿಂಹ ಕನಕೇರಿ, ನಿತೀನ ಹುಲ್ಯಾಳಕರ, ಬಂಡು ಕಲಕೇರಿ, ಭರತ ಕುಲಕರ್ಣಿ , ಭೀಮ ಮೊಖಾಶಿ, ರಾಘವೇಂದ್ರ ದಿಡ್ಡಿ, ವಾರೀಶ ಜಾಲಿಹಾಳ, ಶ್ರೀನಿವಾಸ ಬಾದರಾಯಣಿ, ಕಲ್ಯಾಣಿ ಸಂತೋಷ ಹಲ್ಯಾಳ, ಪಲ್ಲವಿ ನರಹರಿ ಕುಲಕರ್ಣಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನರಸಿಂಹ ಕಲಕೇರಿ ಉಪಾಧ್ಯಕ್ಷರಾಗಿ ಭೀಮ ಮೊಖಾಶಿ ಆಯ್ಕೆಗೊಂಡಿದ್ದಾರೆಂದು ಚುನಾವಣಾ ಅಧಿಕಾರಿ ಸಹಕಾರ ಸಂಘಗಳ ಸಹಾಯಕ ನಿಭಂದಕ ಎಸ್.ಆರ್.ಬಾಡಗಿ ತಿಳಿಸಿದ್ದಾರೆ.