ಜಮಖಂಡಿ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶಾಸಕರಿಗೆ ಮನವಿ
ನಗರದ ಶಾಸಕ ನಿವಾಸದಲ್ಲಿ ತಾಲೂಕಾ ಆಶಾ ಕಾರ್ಯಕತರ್ೆಯರು ತಮ್ಮ ವಿವಿಧ ಬೇಡಿಕೆಯನ್ನು ಸರಕಾರ ಈಡೇರಿಸಬೇಕೆಂದು ಒತ್ತಾಯಿಸಿ.

ಲೋಕದರ್ಶನ ವರದಿ

ಜಮಖಂಡಿ 16: ಕಳೆದ 13 ವರ್ಷಗಳಿಂದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತಾಯಿ-ಮಗಾವಿನ ಆರೈಕೆ, ಆರೋಗ್ಯದ ಬಗ್ಗೆ ಜನಸಾಮಾನ್ಯರಿಗೆ ಅರಿವು ನೀಡುವುದು, ಗ್ರಾಮ ನೈರ್ಮಲ್ಯ, ವಿವಿಧ ಸರ್ವೇಗಳನ್ನು ಕಾಲಕಾಲಕ್ಕೆ ಕೆಲಸ ಮಾಡುವುದು ಸೇರಿದಂತೆ ಅನೇಕ ಸೇವೆಗಳನ್ನು ತಾಲ್ಲೂಕಾ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದು. ಹಾಗೂ ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಶಾಸಕ ಆನಂದ ನ್ಯಾಮಗೌಡ ಅವರಿಗೆ ಮನವಿ ಸಲ್ಲಿಸಿದರು.

ನಗರದ ಶಾಸಕ ಆನಂದ ನ್ಯಾಮಗೌಡ ಅವರ ನಿವಾಸದಲ್ಲಿ ಮಾನವಿ ಸಲಿಸಿ ಮಾತನಾಡಿದ ಅವರು, ಕಾರ್ಯಕರ್ತೆಯರು ಹೆಚ್ಚುವರಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಸೇವೆಗೆ ತಕ್ಕಂತೆ ಗೌರವ ನೀಡಬೇಕು, ಸೇವಾ ನಿವೃತ್ತಿ ಮತ್ತು ಸೇವಾ ಅವಧಿಯಲ್ಲಿ ಸ್ವಯಂನಿವೃತ್ತಿ ಪಡೆಯುವ ಕಾರ್ಯಕರ್ತೆಯರಿಗೆ ಈಗಿರುವ ಇಡುಗಂಟನ್ನು 20 ಸಾವಿರದಿಂದ 3 ಲಕ್ಷಕ್ಕೆ ಹೆಚ್ಚಿಸಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಬೇಕೆಂದು ಒತ್ತಾಯಿಸಿದರು.

ತೀವ್ರವಾದ ಅನಾರೋಗ್ಯ ಚಿಕಿತ್ಸೆ ಪಡೆಯುವ ಅವಧಿಯಲ್ಲಿ ಕನಿಷ್ಠ 3 ತಿಂಗಳುಗಳ ಕಾಲ ರಾಜ್ಯ ಸರ್ಕಾರದ ನಿಶ್ಚಿತ ಗೌರವಧನ ಮತ್ತು ರುಟೀನ್ ಚಟುವಟಿಕೆಗಳ ನಿಗದಿತ ಪ್ರೋತ್ಸಾಹಧನ ನೀಡಲು ಸೂಕ್ತ ಆದೇಶ ಮಾಡಬೇಕು. ಆಶಾ ಸುಗಮಕಾರರನ್ನು ಆಶಾಯಿಂದ ಬೇರ್ಪಡಿಸಿ ಅವರ ಹುದ್ದೆಗೆ ತಕ್ಕಂತೆ ಮಾಸಿಕ ಗೌರವಧನ ಮತ್ತು ಪ್ರಯಾಣ ಭತ್ಯೆಗಳನ್ನು ನಿಗದಿ ಮಾಡಿ ಆದೇಶ ಹೊರಡಿಸಿ, ನಗರ ಪ್ರದೇಶಗಳಿಗೂ ಸುಗಮಕಾರರನ್ನು ನೇಮಿಸಬೇಕೆಂದರು.

ಅಧ್ಯಕ್ಷೆ ಅಚಿಜನಾ ಕುಂಬಾರ, ಕಾರ್ಯದಶರ್ಿ ಸುನೀತಾ ಜಂಬಗಿ, ನಾಗಮ್ಮ ಐನಾಪೂರ, ಕಲಾವತಿ ಕೊಣ್ಣೂರ, ದಾನಮ್ಮ ಐನಾಪೂರ, ರಾಜೇಶ್ವರಿ ಪುಕಾಳೆ ಸೇರಿದಂತೆ ಅನೇಕ ಇದ್ದರು.



ಸುದ್ದಿ ಓದಿ