ತಪೊವನದಲ್ಲಿ ಯೋಗಿಕ ವಿಶ್ರಾಮಧಾಮದ ಲೋಕಾರೆ್ಣ
The world of yogic retreat in Tapovan
ತಪೊವನದಲ್ಲಿ ಯೋಗಿಕ ವಿಶ್ರಾಮಧಾಮದ ಲೋಕಾರೆ್ಣ
ಧಾರವಾಡ 16: ನಯನ ಮನೋಹರ ಸ್ವಚ್ಛ ಸುಂದರ ಮತ್ತು ಹಸಿರು ಪರಿಸರದ ತಪೋವನದಲ್ಲಿ ನಿಂತು, ನನಗೆ ತುಂಬಾ ಸಂತೋಷವಾಗುತ್ತಿದೆ ಇಂತಹ ವಿಶ್ರಾಂತಿ ಧಾಮಗಳು, ರಾಜಯೋಗಿಗಳಿಗೆ ಅವಶ್ಯಕವಾಗಿದ್ದು, ಇಂದು ಅನೇಕ ವರ್ಷಗಳ ನನ್ನ ಕನಸು ಸಾಕಾರವಾಗಿದೆ. ದೀಪವನ್ನು ಬೆಳಗಿಸಿ ಬ್ರಹ್ಮಾಕುಮಾರಿ ಸಂಸ್ಥೆಯ ವಲಯ ನಿರ್ದೇಶಕರಾದ ಬಸವರಾಜ ರಾಜಋಷಿ ತನ್ನ ಸಂತೋಷ ಹಂಚಿಕೊಂಡರು. ಆರಂಭದಲ್ಲಿ ಮಂತ್ರಘೋಷದಿಂದ ಸ್ವಾಗತ ಕುಮಾರ ಲಕ್ಕಣ್ಣ ಅವರು ಮಾಡಿದರು.
ಮಾಸಿಕ ವೆಚ್ಚ 12000 ಮತ್ತು ಸುರಕ್ಷಾ ಠೇವಣಿ ಒಂದು ಲಕ್ಷ ಇರುತ್ತದೆ. ಸದ್ಯ 30 ಕೋಣೆಗಳು ಲಭ್ಯವಿದ್ದು ಮತ್ತಷ್ಟು ಕೋಣೆಗಳು ನಿರ್ಮಿಸುವ ಯೋಜನೆ ಇದೆ. ಎಂದು ಸಂಕ್ಷಿಪ್ತವಾಗಿ ತಿಳಿಸಿ, ಎಲ್ಲರಿಗೂ ಸ್ವಾಗತ ಬ್ರಹ್ಮಾ ಕುಮಾರಿ ಲೀಲಾ ದಾವಣಗೆರೆ ಅವರು ಮಾಡಿದರು. ಇಂದಿನ ದಿನಗಳಲ್ಲಿ ಇಂತಹ ವಿಶ್ರಾಮ ಧಾಮದ ಅವಶ್ಯಕತೆ ಇದ್ದು, ಸುತ್ತಮುತ್ತಲಿನ ಅನೇಕ ವಯೋವೃದ್ಧರಿಗೆ ಇದು ಅನುಕೂಲವಾಗಲಿದೆ ಎಂದು ಅತಿಥಿಗಳಾಗಿ ಆಗಮಿಸಿದ್ದ ಶಂಕರ್ ಭಟ್ ಅವರು ಹೇಳಿದರು.
ಬ್ರಹ್ಮಾ ಕುಮಾರಿ ನಿರ್ಮಲ ವಲಯ ಸಂಚಾಲಕಿ ಹುಬ್ಬಳ್ಳಿ ಅಧ್ಯಕ್ಷತೆ ವಹಿಸಿ ನಿರಾಕಾರ್ ಶಿವ ಪರಮಾತ್ಮ ಆಶ್ರಮಕ್ಕೆ ಸೇರುವ ಎಲ್ಲಾ ವಯೋವೃದ್ಧರಿಗೆ ಶಾಂತಿ, ನೆಮ್ಮದಿ, ಆರೋಗ್ಯ ನೀಡಲಿ ಎಂದು ಶುಭ ಹಾರೈಸಿದರು. ನಿರೂಪಣೆ ಬ್ರಹ್ಮಾಕುಮಾರಿ ವೀಣಾ ಶಿರಸಿ ಅವರು ಮಾಡಿದರು. ರುದ್ರೇಶ್ ಮಲೆಬೆನ್ನೂರ್, ರಾಜಕುಮಾರ್, ಪ್ರಕಾಶ್ ತಂಬದ, ಶ್ರೀಧರ, ಹುಬ್ಬಳ್ಳಿ ಶಿವಾನಂದ್ ತೋಡಕರ ಧಾರವಾಡ ಮುಂತಾದ ಗಣ್ಯರ ಜೊತೆಗೆ ಸಂಸ್ಥೆಯ ಹಿರಿಯ ಸಂಚಾಲಕರಾದ ಜಯಂತಿ, ಸುಲೋಚನ, ನಿರ್ಮಲ, ಶಕುಂತಲಾ, ವಿಜಯ ಮುಂತಾದವರು ಉಪಸ್ಥಿತರಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 