ಬಸವ ತತ್ವದಂತೆ ವಿವಾಹ ಮಾಡಿಕೊಂಡ ನವದಂಪತಿ
ಲೋಕದರ್ಶನ ವರದಿ,
ಜಮಖಂಡಿ 27: ಸಂವಿಧಾನ ಸಮರ್ಪಣೆಯ ದಿನದಂದು ಪಟ್ಟಣದ ಪ್ರಶಾಂತ ನಗರದ ಮುಕ್ತಿಧಾಮ ಆಶ್ರಮದಲ್ಲಿ ನಡೆದ ಸಂವಿಧಾನ ಪೂರ್ವಪೀಠಿಕೆ ಪಠಿಸುವ ಮೂಲಕ ಅಂತರಜಾತಿ ವಿವಾಹದಲ್ಲಿ ಚನ್ನಬಸು ಮತ್ತು ಸಂಗೀತಾ ನವದಂಪತಿಗಳು ಇಬ್ಬರು ಬಸವ ತತ್ವದ ಪ್ರಕಾರ ವಿವಾಹ ಬಂಧನ ಜರುಗಿತು.
ಬಸವಾದಿ ಶರಣರ ರುದ್ರಾಕ್ಷಿ ಸರವನ್ನು ಕಟ್ಟಿಕೊಳ್ಳುವ ಜೊತೆಗೆ ಬಸವಣ್ಣನವರ ವಚನ. ಸಂವಿಧಾನ ಪೀಠಿಕೆ ಪಠಿಸುವ ಮೂಲಕ ಮಂಗಳ ಧಾರಣ ನೇರವೆರಿಸಿಕೊಂಡರು. ಅಕ್ಷತೆ ಕಾಳುಗಳ ಬಂದಲು. ಪುಷ್ಪಗಳನ್ನು ಹಾಕಲಾಗಿದ್ದು. ಒಬ್ಬರಿಗೊಬ್ಬರು ಹೂವಿನ ಮಾಲೆಯನ್ನು ಧರಿಸಿಕೊಂಡು ವಿಶೇಷವಾದ ವಿವಾಹವು ಜಾತಿಯತೆಯನ್ನು ಹೊಗಲಾಡಿಸಿ. ಸಮಾನತೆಗಾಗಿ 12 ನೇ ಶತಮಾನದ ಅಣ್ಣ ಬಸವಣ್ಣನವರು ಹೇಳಿದ ಹಾಗೆ ಅಂತರಜಾತಿ ವಿವಾಹವನ್ನು ಸಂವಿಧಾನ ದಿನ ಸಾಕ್ಷಿಯಾಗಿ ನೇರವೆರಿತು.
12ನೇ ಶತಮಾನದಲ್ಲಿ ಅಂತರಜಾತಿ ವಿವಾಹ ಮಾಡಿಸುವ ಮೂಲಕ ಸಮಾನತೆಯನ್ನು ಸಾರಿದ ಬಸವಣ್ಣನವರ ಮಾರ್ಗದರ್ಶನದಂತೆ ವಿಶೇಷವಾದ ಬಸವಣ್ಣನವರ ವಚನ. ಸಂವಿಧಾನ ದಿನ ಸಾಕ್ಷಿಯಾಗಿ ಅಂತರಜಾತಿ ವಿವಾಹವು ನಡೆದಿದ್ದು ಅಪರೂಪವಾಗಿತು. ವಿವಾಹಕ್ಕೆ ಆಗಮಿಸಿದ ಜನತೆ ಪುಷ್ಪಗಳಿಂದ ಆಶೀರ್ವದಿಸಿದರು.
ನಂತರ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಬುದ್ದ,ಬಸವ,ಅಂಬೇಡ್ಕರ ಅವರ ತತ್ವದಲ್ಲಿ ನಡೆದುಕೊಳ್ಳಬೇಕಾಗಿದೆ. 12ನೇ ಶತಮಾನದಲ್ಲಿ ಬಸವನ್ನವರು ಕಲ್ಪನೆಯಾಗಿತು. ಇಂದು ಮುಕ್ತಿಧಾಮದಲ್ಲಿ ಸಾಕಾರಗೊಳ್ಳಿತ್ತು. ನವ ಜೋಡಿಗಳ ವೈವಾಹಿಕ ಜೀವನ ಸುಖಮಯವಾಗಲಿ. ಇದೊಂದು ಸಮಾಜದಲ್ಲಿ ಮಾದರಿ ಆಗಿದೆ. ನಮ್ಮ ತಂದೆಯವರು ಕೂಡಾ ಬಸವ ತತ್ವದಂತೆ ಸರಳತೆಯಿಂದ ನಮ್ಮ ವಿವಾಹವನ್ನು ಮಾಡಿದ್ದಾರೆ ಎಂದರು,
ಮುಕ್ತಿಧಾನಮ್ಮದ ಸಹಜಾನಂದ ಅವಧೂತರು ಆಶೀರ್ವಚನ ನೀಡಿದರು, ಕೃಷ್ಣಾನಂದ ಅವಧೂತರು, ಸುಶೀಲಕುಮಾರ ಬೆಳಗಲಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪ್ಪಸ್ಥಿತರಿದರು. ರವಿ ಯಡಹಳ್ಳಿ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು, ಸರಸ್ವತಿ ಸಬರದ ಪ್ರಾರ್ಥಿಸಿದರು, ರವಿ ಆಲಗೊಂಡ ಸಂವಿಧಾನ ಪೀಠಿಕೆಯನ್ನು ಭೋದಿಸಿದರು.