ಸಮಾನತೆಯನ್ನ ಸಾರಿದ ಬಸವಣ್ಣನವರು ಬದುಕು ನಮಗೆ ಆದರ್ಶ
ಕುಕನೂರ 21 : ದಯೆ ಮಾನವೀಯತೆ, ಧೀಮಂತಿಕೆಯ ತ್ರಿಕೂಟವಾದ ಬಸವಣ್ಣನವರು ಪರವಸ್ತುವಿನ ಚಿತ್ಕಳೆಯಾಗಿ, ಶರಣರ ಮನೋಮಧ್ಯದ ಸ್ವಯಂ ಜ್ಯೋತಿಯಾಗಿ ಬಾಳಿ ಬೆಳಗಿದರು ಎಂದು ಶ್ರೀಮಠದ ಡಾ ಮಹಾದೇವ ಮಹಾಸ್ವಾಮಿಗಳು ಹೇಳಿದರು.
ಅವರು ಪಟ್ಟಣದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ನಡೆದ 175 ನೇ ಮಾಸಿಕ ಶಿವಾನುಭವ ಮತ್ತು ತತ್ವಾಮೃತ ಕುಸುಮಗಳು ಕೃತಿ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡುತ್ತಾ ಸಮಾಜದಲ್ಲಿ ಧಾಮರ್ಿಕ, ಶೈಕ್ಷಣಿಕ, ಸಾಂಸ್ಕೃತಿಕ ಪರಿವರ್ತನೆ ಮಾಡಲು ಬಸವಣ್ಣನವರು ಸಂಕಲ್ಪತೊಟ್ಟವರು ಇಂತವರ ಬದುಕು ನಮಗೆಲ್ಲ ಆದರ್ಶವಾಗಿದೆ, ಅವರನ್ನ ಒಂದು ಧರ್ಮ ಜಾತಿಗೆ ಸಿಮೀತಗೋಳಿಸುತ್ತೀರುವುದು ವಿಷಾದನೀಯ ಎಂದರು.
ನಂತರ ಮಾತನಾಡಿದ ಅನ್ನದಾನೀಶ್ವರ ಅಕ್ಕನ ಬಳಗದ ಅಧ್ಯಕ್ಷ ನಿರ್ಮಲ ಕಳ್ಳಿಮಠ ಶಿವಾನುಭವ ಎಂದರೇ ಸತ್ಯದ ಅನುಭವ ಇಂತಹ ಅಮೂಲ್ಯವಾದ ಕಾರ್ಯಕ್ರಮಗಳಲ್ಲಿ ನಾವೇಲ್ಲ ಭಾಗವಹಿಸಬೇಕು, ಸಂಸ್ಕಾರವಂತರಾಗಲು ಶಿವಾನುಭವದಂತಹ ಕಾರ್ಯಕ್ರಮಗಳು ಅವಶ್ಯ ಎಂದರು.
ಕೃತಿ ಬಿಡುಗಡೆ ಮಾಡಿ ಮಾತನಾಡಿದ ಶ್ರೀಮತಿ ಕವಿತಾ ಗುತ್ತಿ ನಮ್ಮ ಶ್ರೀಮಠದ ಪೂಜ್ಯರ ಸಂಪಾದಿತ ತತ್ವಾಮೃತ ಕಸುಮಗಳು ಕೃತಿ ಹಲವಾರು ಉತ್ತಮ ಹಾಡುಗಳನ್ನ ಹೊಂದಿದೆ ಸಂಗೀತಗಾರರಿಗೆ ಹಾಡುಗಾರರಿಗೆ ಅನೂಕೂಲವಾಗಲಿದ್ದು, ಶ್ರೀಮಠದಿಂದ ಈಗಾಗಲೇ 18 ಕೃತಿಗಳನ್ನ ಈ ನಾಡಿಗೆ ಸಮರ್ಪಣೆ ಮಾಡಲಾಗಿದೆ ಎಂದರು.
ಹಿರಿಯರಾದ ವಿ ಜಿ ಬಳಗೇರಿ, ವೀರಯ್ಯ ಹಿರೇಮಠ, ಸೂಬಾಯಿಮ್ಮ ಯಕ್ಲಸಾಪುರ, ಲತಾ ಗುತ್ತಿ, ಅನ್ನಪೂರ್ಣ ಚಟ್ನಿ, ಚನ್ನಮ್ಮ ವಾಲಿ, ಕಾವ್ಯ ಗುರುಮಠ, ಹೊಸಮಠ ಅನಿತಾ, ಶಾಂತಮ್ಮ ಹೊಸಮಠ, ವೀರಭದ್ರಪ್ಪ ಸುಂಕದ ಮತ್ತು ಅಕ್ಕನ ಬಳಗದ ಸದಸ್ಯರು ಸೇರಿದಂತೆ ಇನ್ನೀತರರು ಇದ್ದರು.