ಮಹಾಕವಿ ರನ್ನನ ಇತಿಹಾಸ ಉಳಿಸಿ, ಬೆಳೆಸಬೇಕಿದೆ
The history of the great poet Rann must be preserved and cultivated
ರನ್ನ ಬೆಳಗಲಿ 07 : ಮಹಾಕವಿ ರನ್ನ ನಮ್ಮ ಬೆಳಗಲಿಯಲ್ಲಿ ಜನ್ಮತಾಳಿದ್ದು ನಮ್ಮಲ್ಲರ ಪುಣ್ಯ. ಇಂತಹ ಪುಣ್ಯ ಭೂಮಿಯಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು. ಕವಿರತ್ನತ್ರಯರಲ್ಲಿ ಒಬ್ಬರಾದ ಚಕ್ರವರ್ತಿ ರನ್ನನ ಇತಿಹಾಸ ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಬೆಳಗಲಿ ವಿದ್ಯಾವರ್ಧಕ ಸಂಘದ ಶಿಕ್ಷಕರಾದ ಎ.ಎಂ.ಕಂಬಾರ ಹೇಳಿದರು.ಸಮೀಪದ ರನ್ನ ಬೆಳಗಲಿಯಲ್ಲಿ ಜರುಗಿದ ಶಾಲಾ ಹಂತದ ಒಂದು ದಿನದ ರನ್ನ ವೈಭವ-2026 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಚಕ್ರವರ್ತಿ ರನ್ನನ ಸಾಹಿತ್ಯವು ಕನ್ನಡ ಭಾಷೆಯ ಸೊಗಡಿನ ಪಾಂಡಿತ್ಯವನ್ನು ತನ್ನ ಶ್ರೇಷ್ಠ ಗ್ರಂಥಗಳ ಮೂಲಕ ಎತ್ತಿ ತೋರಿಸುತ್ತದೆ.
ರನ್ನನ ಗದಾಯುದ್ಧ,(ಸಾಹಸ ಭೀಮ ವಿಜಯ) ಅಜಿತ ಪುರಾಣ, ರನ್ನ ಕಂದ, ಪರಶುರಾಮ ಚರಿತ, ಹೀಗೆ ಮುಂತಾದವುಗಳು ರನ್ನನ ಇತಿಹಾಸ ಸಾಕ್ಷಿಕರಿಸುತ್ತವೆ.ರನ್ನನ ಕಾವ್ಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವದು ಉಳಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯವಾಗಿದೆ. ಹಳೆಗನ್ನಡ ಮತ್ತು ಕನ್ನಡ ಸಾಹಿತ್ಯವನ್ನು ಪಸರಿಸುವ ಕೆಲಸ ರನ್ನ ವೈಭವದ ಮೂಲಕ ಜರುಗಬೇಕು. ಮಹಾಕವಿ ರನ್ನನ ತತ್ವ ಚಿಂತನೆಗಳು, ಸಾಹಿತ್ತಿಕ ಚಟುವಟಿಕೆಗಳು ರಾಜ್ಯದ ಪ್ರತಿ ಶಾಲೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಬೇಕು. ರನ್ನ ವೈಭವ ಇದ್ದಾಗ ಮಾತ್ರ ಕಾಳಜಿ ಬೇಡ ,ನಿತ್ಯ ರನ್ನನ ಉಕ್ತಿಗಳನ್ನು ಮಕ್ಕಳಿಂದ ಹೇಳಿಸಬೇಕು.
ಸರ್ಕಾರ ಹಮ್ಮಿಕೊಂಡಾಗ ಮಾತ್ರ ರನ್ನ ವೈಭವ ಮಾಡುತ್ತೇವೆ, ಆದರೆ ಸರ್ಕಾರ ಮಾಡಿದರು ಸರಿ, ಮಾಡದಿದ್ದರೂ ಸರಿ ಊರಲ್ಲಿರುವ ಸರ್ವಧರ್ಮೀಯರ ಚೇತಾತ್ಮಗಳು ಒಂದುಗೂಡಿ ಪ್ರತಿ ವರ್ಷ ನಾವೆಲ್ಲರೂ ರನ್ನ ವೈಭವ ವಿಜೃಂಭಣೆಯಿಂದ ಮಾಡಬೇಕು ಎಂದರು.ಮುಧೋಳದಲ್ಲಿ ಒಂದು ದಿನ ರನ್ನ ಬೆಳಗಲಿಯಲ್ಲಿ ಎರಡು ದಿನ, ರನ್ನ ವೈಭವ ಕಾರ್ಯಕ್ರಮ ಜರಗಬೇಕು. ನಮ್ಮೂರಲ್ಲಿರುವ ಕಲಾವಿದರಿಗೆ ಮೊದಲು ಆದ್ಯತೆ ಸಿಗಬೇಕು. ರನ್ನನ ಗದಾಯುದ್ಧ ಹಳ್ಳಿಯಿಂದ ದಿಲ್ಲಿಯವರೆಗೆ ಎಂಬ ನಾಟಕವನ್ನು ಜಿಲ್ಲೆಯಾದ್ಯಂತ ಸರ್ಕಾರ ಇದನ್ನು ಪ್ರತಿಷ್ಠಾಪಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಶಾಲಾ ಮಕ್ಕಳು ರನ್ನನ ಬಗ್ಗೆ ಬರೆದ ಸ್ವರಚಿತ ಕವನಗಳನ್ನು ವಾಚನ ಮಾಡಿದರು. ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ಚಿತ್ರಕಲಾ ಶಿಕ್ಷಕ ಬಾಲಕೃಷ್ಣ ಪಿ ಚೋಪಡೆ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶಾಲಾ ಮಕ್ಕಳು, ಎತ್ತಿನ ಬಂಡಿಯಲ್ಲಿ ರನ್ನನ ಭಾವಚಿತ್ರ ಇಟ್ಟು ಶಾಲಾ ಆವರಣದಿಂದ ಬಾಜಾ ಭಜಂತ್ರಿ, ಡೊಳ್ಳು, ಕರಡಿಮಜಲು, ಜಾಂಜ ಮೇಳ, ಕೋಲಾಟ, ಲೇಜಿಮ್, ಛತ್ರಚಾಮರ, ರನ್ನನ ಗದಗಳು, ಬೀದಿಯುವುದ್ದಕ್ಕೂ ಮೆರವಣ ಗೆಗೆ ಮೆರೆಗು ತಂದಿದ್ದವು. ಪ್ರತಿವರ್ಷ ಒಂದು ದಿನದ ಸಾಂಕೇತಿಕ ರನ್ನ ವೈಭವಕ್ಕೆ ಚಾಲನೆ ನೀಡಲಾಯಿತು. ಎಸ್‌ಬಿ ರೆಡ್ಡೆರಟ್ಟಿ, ಎಂ ಬಿ ಸಾಬೋಜಿ, ಸಿ ಎ ಕುಂಬಾರ, ಎಂಕೆ ಕುಲಗೋಡ, ಎಂ ಎಸ್ ಗಾನಣ ಗೇರ, ವಿ ಕೆ ಬಕರೆ, ಎ ಜಿ ಮೂಡಲಗಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶಿಕ್ಷಕ ಕೆ ಎ ಧಡೂತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 