ಹಾವೇರಿ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಶ್ರೀಮಂತವಾಗಿದೆ: ಪ್ರೊ. ಹಾದಿಮನಿ
ಲೋಕದರ್ಶನ ವರದಿ
ಹಾವೇರಿ01: ಹಾವೇರಿ ಜಿಲ್ಲೆ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದ್ದು, ಇಂತಹ ಸಾಂಸ್ಕೃತಿಕ ಪರಂಪರೆಯ ತಿಳುವಳಿಕೆ ಹಾಗೂ ರಕ್ಷಣೆ ಇಂದಿನ ಅಗತ್ಯವಾಗಿದೆೆ. ಇದರ ಹೊಣೆಗಾರಿಕೆ ಯುವಜನಾಂಗದ ಮೇಲಿದೆ ಎಂಬುದಾಗಿ ಎಂ.ಎ.ಎಸ್.ಸಿ. ಮಹಾವಿದ್ಯಾಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ ಶಾಂತನಗೌಡ ಹಾದಿಮನಿ ಅಭಿಪ್ರಾಯಪಟ್ಟರು.
ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಜಿಲ್ಲಾ ಪರಂಪರೆ ಕೂಟವು ಆಯೋಜಿಸಿದ್ದ ಹಾವೇರಿ ಜಿಲ್ಲೆಯ ಸಾಂಸ್ಕೃತಿಕ ಪರಂಪರೆ ಕುರಿತ ಅಂತರ್ ಮಹಾವಿದ್ಯಾಲಯಗಳ ಕನ್ನಡ ಭಾಷಣ ಸ್ಪಧರ್ೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಎಂ. ಎಸ್. ಯರಗೊಪ್ಪ ಮಾತನಾಡಿ ಮಹಾವಿದ್ಯಾಲಯದ ಪರಂಪರೆ ಕೂಟವು ವೈವಿಧ್ಯಮಯ ಚಟುವಟಿಕೆಗಳನ್ನು ಆಯೋಜಿಸುತ್ತಿದ್ದು, ವಿದ್ಯಾಥರ್ಿಗಳು ಅವುಗಳ ಸದುಪಯೋಗ ಪಡೆಯುವಂತೆ ಕರೆನೀಡಿದರು. ಜಿಲ್ಲಾ ಪರಂಪರೆ ಕೂಟದ ಸಂಚಾಲಕ ಡಾ. ಶಿವಯೋಗಿ ಕೋರಿಶೆಟ್ಟರ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಪಲ್ಲವಿ ಹಾಗೂ ಕವಿತಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಪ್ರೊ. ಹುಣಸಿಕಟ್ಟಿಮಠ ಸ್ವಾಗತಿಸಿದರು. ಪ್ರೊ. ನಾಗರಾಜ ಮುಚ್ಚಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಸ್ಪಧರ್ೆಯಲ್ಲಿ ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳ 30 ವಿದ್ಯಾಥರ್ಿ/ ವಿದ್ಯಾಥರ್ಿನಿಯರು ಪಾಲ್ಗೊಂಡಿದ್ದರು. ಶ್ರೀ. ಎಂ. ಜಿ. ತೇಲಕರ ಹಾಗೂ ಪ್ರೊ. ಎಮ್. ಎಸ್.ಬೆಂಡಿಗೇರಿ ಜಡ್ಜಗಳಾಗಿ ಕಾರ್ಯ ನಿರ್ವಹಿಸಿದರು. ಡಾ. ಸಂಜೀವ ನಾಯಕ ಉಪಸ್ಥಿತರಿದ್ದರು.
ಈ ಸ್ಪಧರ್ೆಯಲ್ಲಿ ಪ್ರಥಮ ಬಹುಮಾನವನ್ನು (ರೂ.3000/-) ಕೆ.ಎಲ್.ಇ. ಬಿ.ಸಿ.ಎ. ಮಹಾವಿದ್ಯಾಲಯದ ಕಿರಣಕುಮಾರ ದೊಡ್ಡಮನಿ ಪಡೆದರು. ದ್ವಿತೀಯ ಬಹುಮಾನವನ್ನು ಹಂಸಬಾವಿಯ ಮಹಾವಿದ್ಯಾಲಯದ ಅಶ್ವಿನಿ ಕಡಗಿ (ರೂ.2500/-) ಹಾಗೂ ತೃತೀಯ ಬಹುಮಾನವನ್ನು ಶ್ರೀ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಪ್ರಿಯಾಂಕಾ ಪಾಟೀಲ ಹಾಗೂ ಗುದ್ಲೆಪ್ಪ ಹಳ್ಳೀಕೇರಿ ಮಹಾವಿದ್ಯಾಲಯದ ಲಿಂಗರಾಜ ಕುರುಬರ (ತಲಾ 1000/-ರೂ) ಹಂಚಿಕೊಂಡರು. ಸ್ಪಧರ್ೆಯಲ್ಲಿ ಭಾಗವಹಿಸಿದ್ದ ಎಲ್ಲ ಸ್ಪಧರ್ಿಗಳಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 