ಜಮಖಂಡಿ

ಬಣಜಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣಕ್ಕೆ ತೀವ್ರ ಖಂಡನೆ

ಬಣಜಿಗ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷಣಕ್ಕೆ ತೀವ್ರ ಖಂಡನೆ
ನಗರದ ದಾನಮ್ಮ ದೇವಿ ಸಭಾ ಭವನದಲ್ಲಿ ನಡೆದ ವಿಜಾಪುರ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಹುನಗುಂದ ಕ್ಷೇತ್ರದ

ಲೋಕದರ್ಶನ ವರದಿ

ಜಮಖಂಡಿ 31: ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಸಮಾವೇಶದಲ್ಲಿ ವಿಜಾಪುರ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಸೇರಿದಂತೆ ಹಲವರು ಬಣಜಿಗ ಸಮುದಾಯದ ಕುರಿತು ಅವಹೇಳನಕಾರಿ ಭಾಷಣ ಮಾಡಿರುವದನ್ನು ತೀವ್ರವಾಗಿ ಖಂಡಿಸಿ. ಬಹಿರಂಗವಾಗಿ ಕ್ಷೇಮೆಯಾಚಿಸಬೇಕು. ಸರಕಾರ ಕಾನೂನು ಕ್ರಮ ಜರುಗಿಸಬೇಕೆಂದು ಬಣಜಿಗ ಸಮಾಜದ ಅಧ್ಯಕ್ಷ ಸಿ.ಎಸ್.ಬಾಂಗಿ ಒತ್ತಾಯಿಸಿದರು. 

ನಗರದ ದಾನಮ್ಮ ದೇವಿ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ತಮ್ಮ ರಾಜಕೀಯ ಬೆಳೆ ಬೆಳಸಿಕೊಳ್ಳಲು ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದಾರೆ. ಇವರು ಮುತ್ಸದಿ ರಾಜಕಾರಣಿಗಳಾಗಿ ಬಣಜಿಗ ಸಮಾಜಕ್ಕೆ ಮಾತನಾಡಿದ್ದು ಸಮಾಜಕ್ಕೆ ನೋವುಂಟು ಮಾಡಿದೆ. ವೇದಿಕೆಯಲ್ಲಿ ಕೂಡಲಸಂಗಮದ ಶ್ರೀಗಳ ಸಮ್ಮುಖದಲ್ಲಿ ಅವಹೇಳನಕಾರಿ ಮಾತನಾಡಿದರು ಸಹ ಶ್ರೀಗಳು ಮೌನವಾಗಿದಕ್ಕೆ ಬಣಜಿಗ ಸಮಾಜಕ್ಕೆ ತುಂಬಾ ನೋವುವನ್ನುಂಟು ಮಾಡಿದೆ ಎಂದರು. 

ವಿಜಾಪುರ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಹಾಗೂ ಹುನಗುಂದ ಕ್ಷೇತ್ರದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಇಬ್ಬರು ಸೇರಿಕೊಂಡು ಬಹಿರಂಗವಾಗಿ ಕ್ಷೇಮೆಯಾಚಿಸಬೇಕು. ಬರುವ ನ.2 ರಂದು ಇವರ ವಿರುದ್ಧ ಬೃಹತ್ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ದಾನಮ್ಮ ದೇವಿ ದೇವಸ್ಥಾನದಿಂದ ಹೊರಟ ಪ್ರತಿಭಟನೆಯು ನಗರದ ಪ್ರಮುಖ ರಸ್ತೆಗಳ ಮೂಲಕ ಸಂಚರಿಸಿ ಎ.ಜಿ.ದೇಸಾಯಿ ವೃತ್ತವನ್ನು ತಲುಪಲಿದ್ದು. ಪ್ರತಿಭಟನೆಯಲ್ಲಿ ಸುಮಾರು ಎರಡು ಸಾವಿರ ಅಧಿಕ ಬಣಜಿಗ ಸಮಾಜದ ಬಂಧುಗಳು ಪಾಲ್ಗೊಳಲಿದ್ದಾರೆ ಎಂದರು.

ಸಮಾಜ ಮುಖಂಡ ಸಂತೋಷ ಚನ್ನಾಳ ಮಾತನಾಡಿ, ಪಂಚಮಸಾಲಿ 2ಎ ಮೀಸಲಾತಿಗೆ ಸಂಪೂರ್ಣ ನಮ್ಮ ಸಮಾಜ ಬೆಂಬಲವಿದೆ. ಎರಡು ಸಮಾಜದಲ್ಲಿ ವಧು,ವರರನ್ನು ಕೊಡುವುದು. ತೆಗೆದುಕೊಳ್ಳುವುದು ಇದೆ. ಇವರು ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳಲು ಇಂತಹ ಅವಹೇಳನಕಾರಿ ಮಾತುಗಳನ್ನು ಆಡಿ. ಸಮಾಜದಲ್ಲಿ ವಿಷ ಬೀಜವನ್ನು ಬೀತುತ್ತಿದ್ದಾರೆ ಎಂದು ಆರೋಪಿಸಿದರು. ಬರುವ ನ,6 ರಂದು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಬೃಹತ್ ಹೋರಾಟವನ್ನು ಮಾಡಲು ಸಮಾಜ ನಿರ್ಧಾರವನ್ನು ತೆಗೆದುಕೊಂಡಿದೆ ಎಂದರು.

 ನಾಗೇಂದ್ರ ಶಿರಗನ್ನವರ, ರಾಜಶೇಖರ ಚಿಮ್ಮಡ, ಸಂಗಮೇಶ ಹಲವಾಯಿ, ಬಸವರಾಜ ಬಾಗೇವಾಡಿ, ರಮೇಶ ಉಪ್ಪಿನ, ಮಲ್ಲಿಕಾರ್ಜುನ  ಇಂಗಳಗಾವಿ ಸೇರಿದಂತೆ ಸಮಾಜದ ಅನೇಕರು ಸುದ್ದಿಗೋಷ್ಠಿಯಲ್ಲಿ ಇದ್ದರು. 



ಸುದ್ದಿ ಓದಿ