ಸಿದ್ದಾರೂಢ ಸ್ವಾಮೀಜಿ ಇಡೀ ಮನುಕುಲ ಉದ್ಧರಿಸಿದ ಶ್ರೇಷ್ಠ ಸಂತ : ಶ್ರೀನಿವಾಸ ಮಾನೆ
Siddharth Swamiji is a great saint who saved the entire humanity: Srinivasa Mane
ಹಾನಗಲ್ 03 :ಈ ಭೂಮಿಗೆ ಮಹಾನ್ ಸಂತನಾಗಿ ಜನಿಸಿ ಸಮಾಜಕ್ಕೆ ದಾರೀದೀಪರಾದ ಸಿದ್ದಾರೂಢ ಸ್ವಾಮೀಜಿ ಇಡೀ ಮನುಕುಲ ಉದ್ಧರಿಸಿದ ಶ್ರೇಷ್ಠ ಸಂತ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಹೋತನಹಳ್ಳಿ ಗ್ರಾಮದ ಸಿದ್ದಾರೂಢ ಮಠದಲ್ಲಿ 24 ನೇ ವೇದಾಂತ ಸಮ್ಮೇಳನ ಹಾಗೂ ಆರೂಢರ ಮಹಾರಥೋತ್ಸವದ ಅಂಗವಾಗಿ ನಡೆದ ಧರ್ಮಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದತ್ತಾತ್ರೇಯ ಪರಂಪರೆಯ ತತ್ವಗಳನ್ನು ಜನಸಾಮಾನ್ಯರಿಗೆ ಸರಳವಾಗಿ ಬೋಧಿಸಿದ ಸಿದ್ದಾರೂಢ ಸ್ವಾಮೀಜಿ ಹುಬ್ಬಳ್ಳಿಯ ಆಶ್ರಮ ಸ್ಥಾಪಿಸಿ ಭಕ್ತ ಸಮೂಹಕ್ಕೆ ಆಶ್ರಯ ಒದಗಿಸಿದರು. ಧರ್ಮ ಭೇದವಿಲ್ಲದೇ ಎಲ್ಲರನ್ನೂ ಪ್ರೀತಿಸಬೇಕು.
ಮಾನವ ಸೇವೆಯೇ ಮಾಧವ ಸೇವೆ, ದೀನ ದಲಿತರ ಸೇವೆಯೇ ನಿಜವಾದ ಭಕ್ತಿ ಎಂದು ಸಾರಿದರು ಎಂದು ಹೇಳಿದ ಅವರು ಹೋತನಹಳ್ಳಿಯ ಸಿದ್ದಾರೂಢ ಮಠದಲ್ಲಿ ಸದ್ಗುರು ಶಂಕರಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿರುವುದು ಸಂತೋಷದ ಸಂಗತಿ. ಸಹಸ್ರ ಲಿಂಗಗಳನ್ನು ಸ್ಥಾಪಿಸಲಾಗುತ್ತಿದ್ದು, ಸುತ್ತಲಿನ ಜಿಲ್ಲೆಗಳ ಭಕ್ತರು ಇಲ್ಲಿಗೆ ಭೇಟಿ ನೀಡಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ರಸ್ತೆ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ದೊರಕಿಸಲು ಪ್ರಯತ್ನಿಸುವ ಭರವಸೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಸದ್ಗುರು ಶಂಕರಾನಂದ ಸ್ವಾಮೀಜಿ ಮಾತನಾಡಿ, ಅಹಂಕಾರ ತ್ಯಜಿಸಿ ವಿನಯದಿಂದ ಬದುಕಬೇಕು ಎನ್ನುವುದನ್ನು ಸಿದ್ದಾರೂಢ ಸ್ವಾಮೀಜಿ ಬೋಧಿಸಿದ್ದಾರೆ. ಸತ್ಯ, ನಿಷ್ಠೆ ಮತ್ತು ತಾಳ್ಮೆ ಜೀವನದ ಆಧಾರ ಎಂದು ಸಾರಿದ್ದಾರೆ. ಸಮಾಜದಲ್ಲಿ ಐಕ್ಯತೆ, ಶಾಂತಿ ಮತ್ತು ಸಹಬಾಳ್ವೆ ಬೆಳೆಸುವಲ್ಲಿ ಶ್ರಮಿಸಿ ಧಾರ್ಮಿಕ ಸಾಮರಸ್ಯದ ಪ್ರತೀಕವಾಗಿ ಉಳಿದಿದ್ದಾರೆ ಎಂದರು. ಕರೀಕಟ್ಟಿಯ ಗುರುನಾಥಶಾಸ್ತ್ರಿ ಪ್ರವಚನ ಹೇಳಿದರು. ಆಂಧ್ರ್ರದೇಶದ ಬಸವರಾಜಯ್ಯ ಸೇರಿದಂತೆ ಸದ್ಭಕ್ತ ಮಂಡಳಿ ಸದಸ್ಯರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 