ಹೂವಿನ ಹಡಗಲಿ

ಕಾಲ್ವಿ ಗ್ರಾ.ಪಂ.ಅದ್ಯಕ್ಷರಾಗಿ ಶಾಂತವ್ವ ಆಯ್ಕೆ

ಕಾಲ್ವಿ ಗ್ರಾ.ಪಂ.ಅದ್ಯಕ್ಷರಾಗಿ ಶಾಂತವ್ವ ಆಯ್ಕೆ

ಕಾಲ್ವಿ ಗ್ರಾ.ಪಂ.ಅದ್ಯಕ್ಷರಾಗಿ ಶಾಂತವ್ವ ಆಯ್ಕೆ  

ಹೂವಿನಹಡಗಲಿ 06 :  ತಾಲ್ಲೂಕಿನ ಕಾಲ್ವಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಎಲ್‌.ಶಾಂತವ್ವ ದೇವೇಂದ್ರನಾಯ್ಕ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.ಗ್ರಾ.ಪಂ. ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಚನ್ನರಾಜನಾಯ್ಕ 11ಮತ ಪಡೆದರೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಶಾಂತವ್ವ 13ಮತಗಳನ್ನು ಪಡೆದು ಅದ್ಯಕ್ಷ ರಾಗಿ ಆಯ್ಕೆಯನ್ನು ಚುನಾವಣಾ ಅಧಿಕಾರಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್  ಸೋಲಿಗೆ ಮುಖ ಭಂಗ ವಾಗಿದೆ.ಈ ವೇಳೆ ಬಿಜೆಪಿ ಬೆಂಬಲಿತರು ಸಿಹಿ ಹಂಚಿ ಸಂಭ್ರಮಿಸಿದರು.ಈ ವೇಳೆ ಈ ಸಂದರ್ಭದಲ್ಲಿ ತಾಲೂಕು ಬಿಜೆಪಿ ಮಂಡಲಾ ಅಧ್ಯಕ್ಷರಾದ  ಪೂಜಾರ್ ಮಲ್ಲಿಕಾರ್ಜುನ್, ಮುಖಂಡರಾದ ಎಂ. ಪರಮೇಶ್ವರ​‍್ಪ ವಕೀಲರು, ವಾರದ ಗೌಸ್ ಮೋದಿನ್, ಬೊರ್ವೆಲ್ ಕೋಟೆಪ್ಪ, ದಾಸರಹಳ್ಳಿ ತಾಂಡ ಕೃಷ್ಣ ನಾಯ್ಕ, ಬಸರಹಳ್ಳಿ ತಾಂಡ ಕೃಷ್ಣ ನಾಯ್ಕ, ಅಂಕ್ಲಿ ಜಿ. ಶಿವಕುಮಾರ ವಕೀಲರು, ಲಂಕೇಶ್ ನಾಯ್ಕ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.. 


ಸುದ್ದಿ ಓದಿ