ಜಮಖಂಡಿ

ಕಸದ ತಿಪ್ಪೆಯಲ್ಲಿ ಶೈವ ಶಾಸನ ಪತ್ತೆ

ಕಸದ ತಿಪ್ಪೆಯಲ್ಲಿ ಶೈವ ಶಾಸನ ಪತ್ತೆ
ನಗರದಲ್ಲಿ ಹಳೇ ತಹಶೀಲ್ದಾರ ಕಚೇರಿ ಆವರಣದ ಕಸದ ತಿಪ್ಪೆಯಲ್ಲಿ ಪತ್ತೆಯಾದ ಶೈವ ಶಾಸನ

ಲೋಕದರ್ಶನ ವರದಿ

ಜಮಖಂಡಿ07: ನಗರದ ಹಳೇ ತಹಶೀಲ್ದಾರ ಕಚೇರಿ ಆವರಣದ ಕಸದ ತಿಪ್ಪೆಯಲ್ಲಿ ಸುಮಾರು 1050ನೇ ಇಸ್ವಿಯಲ್ಲಿನ ಕಲ್ಯಾಣ ಚಾಲುಕ್ಯರ ಸಾಮಂತ ಅರಸರ ಸವದತ್ತಿ ರಟ್ಟರ ಕಾಲದಲ್ಲಿ ಬರಯಲಾದ ಶೈವ ಶಾಸನ ಪತ್ತೆಯಾಗಿದೆ. 

ಮೋಡಿಲಿಪಿ, ಸಂಶೋಧಕ ಡಾ. ಸಂಗಮೇಶ ಕಲ್ಯಾಣಿ ಮಾತನಾಡಿ, ಹಳೇಗನ್ನಡದಲ್ಲಿ ಬರೆದಿರುವ ಸುಮಾರು 6 ರಿಂದ 7 ಸಾಲುಗಳ ಬರಹಗಳು ಕಾಣಿಸುತ್ತಿವೆ. ಹಸಿರು ಕಲ್ಲಿನಲ್ಲಿ ಕೆತ್ತಿದ ಅಂದಾಜು 1050ನೇ ಇಸವಿಯ ಈ ಶಾಸನವಾಗಿದೆ. ಮೊದಲನೆ ಸಾಲು ಅಳುಕಿದ ಉಳಿದ ಸಾಲುಗಳಲ್ಲಿ ಶೈವ ಶಾಸನದ ಶೋತ್ರ ನಮಸ್ತುಂಗ ಶಿರಸುಂಬಿ ಚಂದ್ರ ಚಾಮರ, ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ಥಂವಾಯ ಸ್ಥಂಭವಾಗಿದೆ. ಶಾಸನದ ನಾಲ್ಕನೇ ಸಾಲಿನಲ್ಲಿ ಶಿವಾಲಯದ ಹೆಸರು ಕಳಚಿಕೊಂಡಿದೆ. ಸ್ವದಾಭೋಟಿ ಶಿವಾಲಯೇ ಇದು ಒಂದು ಶಿವಾಲಯದ ಸಂಭಂದಿಸಿದ ಶಾಸನ ಎನ್ನುವದು ದೃಢ ಪಡುತ್ತದೆ ಎಂದರು.

ಈ ಶಾಸನದಲ್ಲಿ ಕೆತ್ತಲಾದ ಚಿತ್ರಗಳು ಆಕಳು ತನ್ನ ಕರುವಿಗೆ ಹಾಲು ಕುಡಿಸುತ್ತಿರುವುದು, ಮಂಡಿಗಾಲ ಉರಿ ಕುಳಿತು. ಒಂದು ಕಾಲನ್ನು ಮುಂದೆ ಚಾಚಿದ ಆಕಳು, ಮಧ್ಯಭಾಗದಲ್ಲಿ ಶಿವಲಿಂಗ, ಮೇಲ್ಬಾಗದಲ್ಲಿ ಸೂರ್ಯ, ಚಂದ್ರ ಕೆತ್ತಿದ ಕುರುಹುಗಳಿವೆ, ಸಮೀಪದಲ್ಲಿ ಪ್ರಾಚಿನ ದೇವಾಲಯದ ಕುರುಹುಗಳು ಹೊಂದಿರುವ ಕುಂಬಾರ ಕೆರೆಯ ಉತ್ತರ ದಿಕ್ಕಿನಲ್ಲಿ ಕಂಡು ಬರುತ್ತದೆ. ಈ ತೃಟಿತ ಶಾಸನ ದೊರೆತಿದ್ದು ಇನ್ನೂ ಅರ್ಧ ಶಾಸನ ದೊರೆಯಬೇಕಾಗಿದೆ . ಈ ಹಿಂದೆಯೊಂದು ಶಾಸನ ಪತ್ತೆಯಾಗಿತು. ಅದು ಮರಾಠಿಯಲ್ಲಿ ಬರೆದ ಶಾಸನವಾಗಿತ್ತು. ಒಂದು ಕನ್ನಡ ಮೊತ್ತೊಂದು ಮರಾಠಿ ಶಾಸನ ಪತ್ತೆಯಾಗಿದ್ದು ಹೆಮ್ಮಯಾಗಿದೆ. ಮರಾಠಿಯಲ್ಲಿನ ಶಾಸನ ಎಲ್ಲಿದಿಯೋ ತಿಳಿಯುತ್ತಿಲ್ಲ. ಅದರ ಮೂಲ ಸ್ಥಾನವಾದ ಜಮಖಂಡಿಯಲ್ಲಿ ಇಡಬೇಕು ಎಂದು ಸಂಶೋಧಕ ಡಾ, ಸಂಗಮೇಶ ಕಲ್ಯಾಣಿ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಕಸದ ತಿಪ್ಪೆಯಲ್ಲಿ ಪತ್ತೆಯಾದ ಶಾಸನವನ್ನು ವಿಠಲ ಪರೀಟ, ರುದ್ರಯ್ಯ ಕರಡಿ ಸೇರಿದಂತೆ ಕೆಲ ಯುವಕರು ಶಾಸನ ದೊರತೆ ಪಕ್ಕದಲ್ಲಿ ಇರುವ ಜಿಪಂ ಕಚೇರಿಯ ದ್ವಾರದಲ್ಲಿ ಸಂರಕ್ಷಿಸಿಟ್ಟರು. ಸರಕಾರ ಇಂಹಹ ಹಳೇಯ ಶಾಸನಗಳನ್ನು ಸಂರಕ್ಷಣೆ ಮಾಡಲು ಮುಂದಾಗಬೇಕು. ಸೂಕ್ತ ರಕ್ಷಣೆಯಾಗುವ ನಿಟ್ಟಿನಲ್ಲಿ ಸಂಗ್ರಹಾಲಯ ನಿಮರ್ಿಸಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದರು. 


ಸುದ್ದಿ ಓದಿ