ಬುದ್ಧಿಮಾಂದ್ಯಳಿಗೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಜೀವಾವಧಿ ಶಿಕ್ಷೆ
Sexual assault on mentally retarded woman: Accused gets life sentence
ಬೆಳಗಾವಿ 22: ಪರಿಶಿಷ್ಟ ಜಾತಿಯ ಬುದ್ಧಿಮಾಂದ್ಯ ಹುಡುಗಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಇಲ್ಲಿನ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಹೊರಡಿಸಿದೆ.
ಹುಸೇನಸಾಬ ಇಮಾಮಸಾಬ ನದಾಫ ಉರ್ಫ್ ಪಿಂಜಾರ ಶಿಕ್ಷೆಗೊಳಗಾದ ಆರೋಪಿ. ಕಟಕೋಳ ಪೊಲೀಸ್ ಠಾಣಾ ಹದ್ದಿಯ ಪೈಕಿ ಚಿಪ್ಪಲಕಟ್ಟಿ ಗ್ರಾಮದ ಪಿರ್ಯಾದಿದಾರಳ ಮನೆಯ ಮುಂದಿನ ಕಟ್ಟೆಯ ಮೇಲೆ ದಿ. 26-03-2021ರಂದು ಸಂಜೆ 5 ಗಂಟೆಗೆ ಆರೋಪಿತ ಕೃತ್ಯ ಎಸಗಿದ್ದಾನೆ.
ಯುವತಿ ಬುದ್ದಿಮಾಂದ್ಯಳು, ಹಿಂದೂ ಪರಿಶಿಷ್ಟ ಪಂಗಡಕ್ಕೆ ಸೇರಿದವಳು ಎಂದು ಗೊತ್ತಿದ್ದರೂ ಆರೋಪಿತನು ಪಿರ್ಯಾದಿದಾರಳ ಮಗಳ ಮೇಲೆ ಅತ್ಯಾಚಾರ ಎಸಗಿದ ಅಪರಾಧದ ಬಗ್ಗೆ ಆಗಿನ ತನಿಖಾಧಿಕಾರಿ ರಾಮದುರ್ಗದ ಡಿಎಸ್‌ಪಿ ರಾಮನಗೌಡ ಹಟ್ಟಿ ತನಿಖೆ ಕೈಗೊಂಡು ಕಲಂ 376(2)(ಎಲ್) ಐಪಿಸಿ ಮತ್ತು ಕಲಂ. 3(1)(ಡಬ್ಲೂ)(ಐ), 3(2)(5) ಎಸ್ಸಿ/ಎಸ್‌ಟಿ (ಪಿ.ಓ.ಎ) ತಿದ್ದುಪಡಿ ಕಾಯ್ದೆ 2015 ಅಡಿಯಲ್ಲಿ ಆರೋಪಿತನ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಮಾನ್ಯ ನ್ಯಾಯಾಧೀಶರಾದ ಸವಿತಾಕುಮಾರಿ ಎನ್., 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ ಅವರು ಪ್ರಕರಣದ ವಿಚಾರಣೆ ಮಾಡಿ ಆರೋಪಿ ಮೇಲೆ ಆರೋಪಣೆಗಳು ಸಾಬೀತಾಗಿವೆ ಎಂದು ತೀಪು ನೀಡಿ, ಆರೋಪಿತನಿಗೆ ಕಲಂ. 376(2)(ಎಲ್) ಐಪಿಸಿರ ಅಡಿಯಲ್ಲಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ. 5,000 ದಂಡ, ಕಲಂ 3(1)(ಡಬ್ಲೂ)(ಐ)ರ ಅಡಿಯಲ್ಲಿ 6 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ಕಲಂ. 3(2)(5) ಎಸ್‌ಸಿ/ಎಸ್‌ಟಿ (ಪಿ.ಓ.ಎ) ತಿದ್ದುಪಡಿ ಕಾಯ್ದೆ 2015ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಮತ್ತು ರೂ. 5,000 ದಂಡ ವಿಧಿಸಿ ಪ್ರಕರಣದ ತೀರ್ು ನೀಡಿದ್ದಾರೆ. ಸರಕಾರದ ಪರವಾಗಿ 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕ ಆರ್.ಜಿ.ದೇವರೆಡ್ಡಿ ಪ್ರಕರಣ ನಡೆಸಿ ವಾದ ಮಂಡಿಸಿದ್ದರು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 